Advertisement

ಐತಿಹಾಸಿಕ ರಂಗಿನಾಟಕ್ಕೆ ಚಾಲನೆ 

09:30 AM Mar 22, 2019 | Team Udayavani |

ಬಾಗಲಕೋಟೆ: ಐತಿಹಾಸಿಕ ಹೋಳಿ ಹಬ್ಬದ ಮೊದಲ ದಿನದ ರಂಗಪಂಚಮಿ ರಂಗಿನಾಟದಲ್ಲಿ ಕುಣಿದು ಕುಪ್ಪಳಿಸಿದ ಯುವಕರು. ಕೆಂಪು, ಹಳದಿ, ನೀಲಿ ಕೇಸರಿ ಬಣ್ಣಗಳಿಂದ ಯುವಕರು ಮಿಂದೆದ್ದರು. ಕಿಲ್ಲಾ ಭಾಗದ ಮಕ್ಕಳು ಕುಣಿದು ಕುಪ್ಪಳಿಸಿ ಹೋಳಿ ಹಬ್ಬದ ಮೊದಲ ದಿನ ಬಣ್ಣದಲ್ಲಿ ಸಂಭ್ರಮಿಸಿದರು. ಬಾಗಲಕೋಟೆ ರಂಗು ರಂಗಿನಾಟ ಮೊದಲ ದಿನವಾದ ಗುರುವಾರ ಕಿಲ್ಲಾ ಭಾಗದಲ್ಲಿ ಬಣ್ಣ ಬಣ್ಣದ ಚಿತ್ತಾರದ ಕಲರ್‌ಪುಲ್‌ ಆಗಿತ್ತು. ಕಿಲ್ಲಾಭಾಗದ ಹೊನ್ನಾಳ ದೇಸಾಯಿರವರ ಮನೆ, ಮರಾಟಾ ಗಲ್ಲಿಗಳಲ್ಲಿ ಹೋಳಿ ತನ್ನ ಮೆರಗು ಕಂಡುಕೊಂಡಿತ್ತು. ಹೋಳಿ ಬಣ್ಣದಾಟದಲ್ಲಿ ಎಲ್ಲರು ಮುಖಗಳು ಕೆಂಪಾಗಿದ್ದವು. ಚೈನಾರೆಡ್‌ ಕೆಂಪು ಬಣ್ಣ ಎಲ್ಲರ ಮುಖವನ್ನು ಕೆಂಪಾಗಿಸಿತ್ತು.

Advertisement

ಬಾಲಕಿಯರ ರಂಗಿನಾಟದ ಮೆರಗು: ಗುರುವಾರ ಬೆಳಗ್ಗೆಯಿಂದ ವಿದ್ಯಾಗಿರಿ ಪ್ರದೇಶದಲ್ಲಿ ಕಲರ್‌ ಪುಲ್‌ ಬಣ್ಣದಾಟದಲ್ಲಿ ಬಾಲಕಿಯರು ತಮ್ಮ ಗೆಳತಿಯರೊಂದಿಗೆ ಕೂಡಿಕೊಂಡು ವಿದ್ಯಾಗಿರಿಯ ಓಣಿಯಲ್ಲಿ ಯುವತಿಯರಿಗೆ ರಂಗುರಂಗಿನ ಗುಲಾಲ ಎರಚಿ ಸಂಭ್ರಮಿಸಿದರು. ಚಿಣ್ಣರು ಸಹ ಬಣ್ಣದಾಟದಲ್ಲಿ ತೊಡಗಿದರಷ್ಟೇ ಅಲ್ಲದೇ ಮಕ್ಕಳ ಚೇಷ್ಟೆ, ವೈವಿಧ್ಯ ಬಾಷೆಗಳು ನೋಡುಗರನ್ನು ರಂಜಿಸಿದರು. ಬೇಧ ಭಾವವಿಲ್ಲದೆ ಬಣ್ಣದಾಟದಲ್ಲಿ ತೊಡಗಿದ್ದರು. ಮನೆ ಮುಂದೆ ಇಟ್ಟಿದ್ದ ಬ್ಯಾರಲ್‌ ನೀರಲ್ಲಿ ವಿವಿಧ ತೆರನಾದ ಬಣ್ಣಗಳನ್ನು ಸಿದ್ಧಪಡಿಸಿ ಒಬ್ಬರಿಗೊಬ್ಬರು ಬಣ್ಣ ಎರಚಿ ಖುಷಿಪಟ್ಟರು. ಹೋಳಿ ಬಣ್ಣ ತನ್ನ ಚಿತ್ತಾರ ಬಿಡಿಸಿತ್ತು. ಬಣ್ಣದ ಚಿತ್ತಾರ ಬಿಸಿ‌ಲಿನ ತಾಪಕ್ಕೆ ಅಂಜದೆ ಬಣ್ಣದ ನೀರಲ್ಲಿ ಮುಳುಗಿ ಖುಷಿಪಡುತ್ತಿದ್ದರು. ಯವಕರಗಿಂತ ಚಿಣ್ಣರ ರಂಗಿನಾಟ ಮನಸೊರೆಗೊಳ್ಳುತ್ತಿತ್ತು. ಚಿಣ್ಣರ ಹಲಿಗೆ ನಾದದೊಂದಿಗೆ ಹಜ್ಜೆಯನ್ನು ತಾಳಕ್ಕೆ ತಕ್ಕಂತೆ ಹಾಕುತ್ತಾ ಕುಣಿದಾಡಿದರು.

ಬಣ್ಣದ ಬಂಡಿಗಳ ಸಾಲಿನ ಮುಂದೆ ಕಿಲ್ಲಾ ಭಾಗದ ತುರಾಯಿ ಹಲಗೆ ತನ್ನ ಸಪ್ಪಳ ಮಾಡುತ್ತಿತ್ತು. ಯುವಕರು ಮಕ್ಕಳು ಬಣ್ಣದ ಬಂಡಿಯಲ್ಲಿ ಕೇಕೆ, ಚಪ್ಪಾಳೆ, ವಿವಿಧ ಘೋಷಣೆಗಳು ಮುಗಿಲು ಮಟ್ಟಿದವು. ಬಣ್ಣದಾಟದೊಂದಿಗೆ ಬಾಯಿ ಬಾಯಿ ಬಡಿದುಕೊಂಡು ಲಬೋ ಲಬೋ ಹೊಯ್ಕೊಳ್ಳುವುದು ಸಾಮಾನ್ಯವಾಗಿತ್ತು.

ವಿವಿಧ ವೇಷ: ಬೆಳಗ್ಗೆಯಿಂದಲೇ ಯುವಕರು ಮಹಿಳೆಯರ ವೇಷ ಸರಿದಂತೆ ವಿವಿಧ ತರಹದ ವೇಷ ಭೂಷಣಗಳನ್ನು ಹಾಕಿಕೊಂಡು ಗಲ್ಲಿ ಗಲ್ಲಿಗಳಲ್ಲಿ ತೆರಳಿ ಹೋಳಿ ಹಬ್ಬದ ವಿಶೇಷ ಹಂತಿ ಪದಗಳನ್ನು ಹಾಡಿ ಕುಣಿದರು.

Advertisement

Udayavani is now on Telegram. Click here to join our channel and stay updated with the latest news.

Next