Advertisement

ಇಂದು ವಿಮಾನ ಹಾರಾಟ ತರಬೇತಿಗೆ ಚಾಲನೆ

01:26 PM Aug 15, 2021 | Team Udayavani |

ಕಲಬುರಗಿ: ಸ್ವಾತಂತ್ರ್ಯೋತ್ಸವ ದಿನವಾದ ಆ.15ರಂದುಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆವಿಮಾನ ಹಾರಾಟ ತರಬೇತಿಗೆ ಚಾಲನೆ ನೀಡಲಾಗುತ್ತಿದೆ.

Advertisement

ರವಿವಾರದಿಂದಲೇ ಎರಡು ಅಕಾಡೆಮಿಗಳುಕಾರ್ಯಾರಂಭ ಮಾಡಲಿವೆ.ರಾಜ್ಯದ ಕಲಬುರಗಿ ಹಾಗೂ ಬೆಳಗಾವಿ ವಿಮಾನನಿಲ್ದಾಣದಲ್ಲಿ ತಲಾ ಎರಡು ವಿಮಾನ ಹಾರಾಟ ತರಬೇತಿಸಂಸ್ಥೆಗಳ ಆರಂಭಕ್ಕೆ ಮೇ 31ರಂದು ಕೇಂದ್ರ ಸರ್ಕಾರಅನುಮತಿ ನೀಡಿತ್ತು. ಕಲಬುರಗಿ ವಿಮಾನ ನಿಲ್ದಾಣದಲ್ಲಿಹೈದರಾಬಾದ್‌ನ ಏಷ್ಯಾ ಪೆಸ್ಟಿಕ್‌ ಫ್ಲೆ çಟ್‌ ಟ್ರೈನಿಂಗ್‌ಅಕಾಡೆಮಿ, ದೆಹಲಿಯ ರೆಡ್‌ಬರ್ಡ್‌ ಏವಿಯೇಷನ್‌ ಅಕಾಡೆಮಿ ತಮ್ಮ ಕೇಂದ್ರಗಳನ್ನು ಆರಂಭಿಸಲಿವೆ.

ತರಬೇತಿ ಆರಂಭಿಸುವ ಮುನ್ನ ಅಕಾಡೆಮಿಗಳುತಮಗೆ ಬೇಕಾದ ಕಚೇರಿ, ತರಗತಿಗಳ ಕೊಠಡಿ ಸೇರಿದಂತೆಮಾಡಿಕೊಳ್ಳಲು ಒಂದು ವರ್ಷದ ಕಾಲಾವಕಾಶ ಇದೆ.ಆದರೆ, ವಿಮಾನ ನಿಲ್ದಾಣದಲ್ಲಿ ಈಗಾಗಲೇ ಲಭ್ಯವಿರುವಸೌಲಭ್ಯಗಳನ್ನು ಬಳಸಿಕೊಂಡು ರವಿವಾರದಿಂದಲೇಎರಡೂ ಅಕಾಡೆಮಿಗಳನ್ನು ಕಾರ್ಯಾರಂಭಿಸಲು ಉದ್ದೇಶಿಸಲಾಗಿದೆ. ರವಿವಾರ ಮಧ್ಯಾಹ್ನ 3:30ಕ್ಕೆ ಕೇಂದ್ರವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್‌ಸಿಂಗ್‌ ಖರೋಲಾ ಉಭಯ ಅಕಾಡೆಮಿಗಳ ವಿಮಾನಹಾರಾಟ ತರಬೇತಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಕಲಬುರಗಿಯಲ್ಲಿ ವಿಮಾನ ಹಾರಾಟ ತರಬೇತಿಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡುಅಕಾಡೆಮಿಗಳಲ್ಲಿ ಬೇರೆ-ಬೇರೆ ಕಡೆ ವಿದ್ಯಾರ್ಥಿಗಳುತರಬೇತಿ ಪಡೆಯುತ್ತಿದ್ದಾರೆ. ಹೈದರಾಬಾದ್‌ ಹಾಗೂಮಹಾರಾಷ್ಟÅದಲ್ಲಿ ಈಗಾಗಲೇ ತರಬೇತಿ ನಿರತವಿದ್ಯಾರ್ಥಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗುತ್ತಿದೆ.ಈ ವಿದ್ಯಾರ್ಥಿಗಳ ಮುಂದಿನ ತರಬೇತಿ ಕಲಬುರಗಿಯಲ್ಲಿನಡೆಯಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕಜ್ಞಾನೇಶ್ವರರಾವ್‌ ತಿಳಿಸಿದ್ದಾರೆ.

ಈ ಹಿಂದೆ ಉತ್ತರ ಭಾರತದಲ್ಲಿ ಹವಾಮಾನ ವೈಪರೀತ್ಯಕಾರಣದಿಂದ ಅಲ್ಲಿ ನಡೆಯಬೇಕಿದ್ದ ತರಬೇತಿಯನ್ನುಕಲಬುರಗಿಗೆ ಸ್ಥಳಾಂತರ ಮಾಡಲಾಗಿತ್ತು. ವಿಮಾನಹಾರಾಟ ಸಂಸ್ಥೆಯಾದ ಇಂದಿರಾ ಗಾಂಧಿ ರಾಷ್ಟ್ರೀಯಉರಾನ್‌ ಅಕಾಡೆಮಿ ವಿದ್ಯಾರ್ಥಿಗಳು ಇಲ್ಲಿ ಎರಡುತಿಂಗಳ ಕಾಲ ತರಬೇತಿ ಪಡೆದಿದ್ದರು.

Advertisement

ಈ ಅವಧಿಯಲ್ಲಿಬರೋಬ್ಬರಿ 750 ಗಂಟೆಗಳ ಕಾಲ ಯಶಸ್ವಿಯಾಗಿತರಬೇತಿಯನ್ನು ವಿದ್ಯಾರ್ಥಿಗಳು ಪಡೆದಿದ್ದರು. ಇದುವಿಮಾನ ಹಾರಾಟ ತರಬೇತಿಗೆ ಮುನ್ನಡಿ ಹಾಕಿತ್ತುಎಂದೇ ಹೇಳಬಹುದು.ಈಗ ವಿಮಾನ ಹಾರಾಟ ತರಬೇತಿಗೆ ಆಯ್ಕೆಯಾಗಿರುವ ಏಷ್ಯಾ ಪೆಸಿμಕ್‌ ಫ್ಲೆ çಟ್‌ ಟ್ರೈನಿಂಗ್‌ಅಕಾಡೆಮಿ ಹಾಗೂ ರೆಡ್‌ಬರ್ಡ್‌ ಏವಿಯೇಷನ್‌ಅಕಾಡೆಮಿಗೆ ಈಗಾಗಲೇ ತಲಾ ಐದು ಸಾವಿರ ಚದರಮೀಟರ್‌ ಜಾಗ ಹಸ್ತಾಂತರ ಮಾಡಲಾಗಿದೆ.

ಕಟ್ಟಡದವಿನ್ಯಾಸ, ನಿರ್ಮಾಣ, ತರಗತಿ ಕೊಠಡಿಗಳು, ಪಾರ್ಕಿಂಗ್‌ಬೇಸ್‌ ಮತ್ತು ಅಗತ್ಯವಾದ ಸೌಕರ್ಯಗಳನ್ನು ಸಂಸ್ಥೆಯವರೇನೋಡಿಕೊಳ್ಳಬೇಕಿದೆ. ಪ್ರತಿ ಸಂಸ್ಥೆಯು ಒಂದು ವರ್ಷಕ್ಕೆಮೂರು ಸಾವಿರ ಗಂಟೆ ಹಾರಾಟ ತರಬೇತಿ ನೀಡಲಿವೆ.ಈ ಎರಡೂ ಅಕಾಡೆಮಿಗಳು 30 ವರ್ಷ ಕಾಲ ಕಾರ್ಯನಿರ್ವಹಿಸಲಿವೆ.

Advertisement

Udayavani is now on Telegram. Click here to join our channel and stay updated with the latest news.

Next