Advertisement
ತಾಲೂಕಿನ ರಾಜಗೆರೆ ಗ್ರಾಮದಿಂದ ಕೆಂಪನಹಳ್ಳಿ ಮುಖ್ಯ ರಸ್ತೆ ವರೆಗಿನ 1.8ಕೋಟಿ ರೂ. ವೆಚ್ಚದಲ್ಲಿ ರಸ್ತೆಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
Related Articles
Advertisement
ನನ್ನ ಊರಿನವನೂ ಎಂದು ಎಂಜಿನಿಯರ್‌ಗಿರಿಗೌಡ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾನೆ. ನನ್ನ ಮೃದು ಧೋರಣೆಯನ್ನು ದುರುಪಯೋಗ ಮಾಡಿಕೊಂಡರೇ ನಾನು ಸುಮ್ಮನಿ ಇರುವುದಿಲ್ಲ. ಅಧಿಕಾರಿ ಗಳನ್ನು ಕಟ್ಟಿ ಹಾಕುವುದು ಹೇಗೆ ಅಂತ ನನಗೂ ಗೊತ್ತಿದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಹುತ್ರಿದುರ್ಗ ಹೋಬಳಿಯಲ್ಲಿ ಸುಮಾರು 40ವರ್ಷಗಳಿಂದ ರಸ್ತೆ ಅಭಿವೃದ್ಧಿ ಮಾಡದೇ ಎಲ್ಲಾ ರಸ್ತೆಗಳುಸಂಪೂರ್ಣವಾಗಿ ಹದಗೆಟ್ಟಿವೆ. ಸಮಿಶ್ರ ಸರಕಾರದಅವಧಿಯಲ್ಲಿ ತಂದಿದ್ದ ಅನುದಾನದ ಪೈಕಿ ಕೆಲವುರಸ್ತೆಗಳನ್ನು ಈಗ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಿನಬಿಜೆಪಿ ಸರಕಾರ ತಾಲೂಕಿಗೆ ತಂದಿದ್ದ 800 ಕೋಟಿ ಅನುದಾನವನ್ನು ತಡೆಹಿಡಿದಿದೆ. ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಹಾಗೂ ನಾನು ಸರಕಾರದ ಮುಂದೆ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿಅನುಧಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ.ತಾಲೂಕಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲುಬಿಡಲು ಸಾಧ್ಯವೇ ಇಲ್ಲ ಹೋರಾಟ ಮಾಡಿಯಾದರೂತಾಲೂಕಿನ ಅಭಿವೃದ್ಧಿ ಮಾಡಿಯೇ ತೀರುತ್ತೇನೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷ ಉಮೇಶ್,ಹುತ್ರಿ ವಿಎಸ್‌ಎಸ್‌ಎನ್ ಅಧ್ಯಕ್ಷ ಬೋರೇಗೌಡ,ಕಾಂಗ್ರೆಸ್ ಮುಖಂಡರಾದ ಕೆಂಪಿರೇಗೌಡ, ರಾಮಣ್ಣ, ಅಮೀದ್, ಗ್ರಾಪಂ ಸದಸ್ಯರಾದ ರಮೇಶ್, ಅಹುಚ್ಚೇಗೌಡ, ಕುಮಾರ ಇತರರು ಇದ್ದರು.