ಗೋಣಿಕೊಪ್ಪಲು: 3 ಕೋಟಿ 50 ಲಕ್ಷ ಅನುದಾನದಲ್ಲಿ ಮಡಿಕೇರಿ ಕುಟ್ಟ ರಾಜ್ಯ ಹೆದ್ದಾರಿಯ ಪೊನ್ನಂಪೇಟೆ ಮುಖ್ಯ ರಸ್ತೆಯ 7 ಕಿ.ಮೀ ವ್ಯಾಪ್ತಿಯಲ್ಲಿ ಡಾಮರು ಕಾಮಗಾರಿಗೆ ಕ್ಕೆ ಮತ್ತು ಅರುವತ್ತೂಕ್ಲು ಗ್ರಾ.ಪಂ. ವ್ಯಾಪ್ತಿಯ 86.80 ಲಕ್ಷ ಅನುದಾನದ ರಸ್ತೆ ಮತ್ತು ಮಳೆ ಹಾನಿ ದುರಸ್ತಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.
ಅರುವತ್ತೂಕ್ಲು ಗ್ರಾ.ಪಂ. ವ್ಯಾಪ್ತಿಯ ಮುಖ್ಯ ಹೆದ್ದಾರಿಯಲ್ಲಿ ಭೂಮಿ ಪೂಜೆ ಮಾಡುವ ಮೂಲಕ ಮಳೆಹಾನಿ ದುರಸ್ಥಿ, ಸಂಪರ್ಕ ರಸ್ತೆ ಡಾಂಬರೀಕರಣ, ಸೇತುವೆ ದುರಸ್ಥಿ, ತಡೆಗೋಡೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು ಮೂರುವರೆ ಕೋಟಿ ಅನುದಾನದಲ್ಲಿ ಮುಖ್ಯ ರಸ್ತೆ ಡಾಂಬರೀಕರಣ ಹಾಗೂ ಅರುವತ್ತೂಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆ ಹಾನಿ ದುರಸ್ತಿಯಲ್ಲಿ 15 ಲಕ್ಷ ಅನುದಾನವನ್ನು ಬಳಸಿಕೊಂಡು ಕಾಡ್ಲ$Âಪ್ಪ ದೇವಸ್ಥಾನದ ಮೂಲಕ ಕೈಕೇರಿ ಸಂಪರ್ಕ ಬೆಸೆಯುವ ರಸ್ತೆ ಡಾಂಬರೀಕರಣಕ್ಕೆ 20 ಲಕ್ಷ ಅನುದಾನಲ್ಲಿ ಹಳ್ಳಿಗಟ್ಟು ಬೇಗೂರು ರಸ್ತೆ, ಅಭಿವೃದ್ದಿ, 5 ಲಕ್ಷ ಅನುದಾನದಲ್ಲಿ ಕಾಡ್ಲ$Âಪ್ಪ ದೇವಸ್ಥಾನದ ಮಳೆ ಹಾನಿ ದುರಸ್ಥಿ ಯೋಜನೆಯಡಿ ತಡೆಗೋಡೆ ನಿರ್ಮಾಣ ನಡೆಯಲಿದೆ ಎಂದು ಮಾಹಿತಿ ನೀಡಿದರು.
14 ಲಕ್ಷ ಅನುದಾನದಲ್ಲಿ ಹಳ್ಳಿಗಟ್ಟು ಬೇಗೂರು ರಸ್ತೆಯ ಸೇತುವೆ ದುರಸ್ಥಿ ಕಾಮಗಾರಿ, 10 ಲಕ್ಷದಲ್ಲಿ ಕೈಕೇರಿ ಕಾಡ್ಯಮಾಡ ಐನ್‌ಮನೆ ಸಂಪರ್ಕ ರಸ್ತೆ ಅಭಿವೃದ್ದಿ, 5 ಲಕ್ಷದಲ್ಲಿ ಹುದೂರು, ಮಾಪಿಳ್ಳೆತೋಡು ಸಂಪರ್ಕ ಡಾಮರು ರಸ್ತೆ ಕಾಮಗಾರಿ, 5 ಲಕ್ಷ ಮುಗುಟಗೇರಿ ಸಣ್ಣುವಂಡ, ಮನೆಯಪಂಡ ಮುದುರೆಪಾಲ ಸಂಪರ್ಕ ರಸ್ತೆ ಡಾಂಬರೀಕರಣ, 5 ಲಕ್ಷದಲ್ಲಿ ಬಿರಂಪಾರೆ ಕರ್ತಮಾಡ ಸಾರ್ವಜನಿಕ ಸಂಪರ್ಕ ರಸ್ತೆ, 3 ಲಕ್ಷದಲ್ಲಿ ಮಚ್ಚಿಯಂಡ ಐನ್‌ಮನೆ ರಸ್ತೆ, 4.80ಲಕ್ಷದಲ್ಲಿ ಮೈಸೂರಮ್ಮ ಕಾಲೋನಿ ಸಾರ್ವಜನಿಕ ರಸ್ತೆ ಅಭಿವೃದ್ದಿಗಳು ಸುಮಾರು 86.80 ಲಕ್ಷದಲ್ಲಿ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿಲ್ಲಾ ವರ್ತಕರ ಪ್ರಕೋಷ್ಟ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಅರುವತ್ತೂಕ್ಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ, ಸದಸ್ಯರಾದ ಮನೆಯಪಂಡ ಬೋಪಣ್ಣ, ರಾಜೇಶ್, ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ಅಮ್ಮತೀರ ಸುರೇಶ್, ಹಾತೂರು ಗ್ರಾ.ಪಂ. ಉಪಾಧ್ಯಕ್ಷ ಗುಮ್ಮಟ್ಟಿàರ ದರ್ಶನ್ ದೇವಯ್ಯ, ಸದಸ್ಯ ಕುಲ್ಲಚಂಡ ಚಿಣ್ಣಪ್ಪ, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯ ಕೆ.ಜಿ. ರಾಮಕೃಷ್ಣ, ವಿರಾಜಪೇಟೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಇ.ಸಿ. ಜೀವನ್, ಅಲ್ಪಸಂಖ್ಯಾಕರ ತಾಲ್ಲೂಕು ಮೂರ್ಚ ಅಧ್ಯಕ್ಷ ಅಕೀಂ, ಹಿಂದುಳಿದ ವರ್ಗದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್, ಅರುವತ್ತೂಕ್ಲು ಸ್ಥಾನೀಯ ಸಮಿತಿ ಅಧ್ಯಕ್ಷ ಮನೆಯಪಂಡ ಸೋಮಣ್ಣ, ಪೊನ್ನಂಪೇಟೆ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಂದಿಯಂಡ ಹರೀಶ್, ವಿ.ವಿ.ಟಿ ಕನ್ಸ$óಕ್ಷನ್ ಸಂಸ್ಥೆಯ ಮಾಲೀಕರಾದ ಕೊಲ್ಲೀರ ವಿಜು, ತನು, ಕತ್ರಿಕೊಲ್ಲಿ ವಿಜು, ಪಿಡಬ್ಲ್ಯುಡಿ ಹಿರಿಯ ಇಂಜಿನಿಯರ್ ಸುರೇಶ್, ಸಹಾಯಕ ಇಂಜಿನಿಯರ್ ಸಣ್ಣುವಂಡ ನವೀನ್, ಜಿ.ಪಂ. ಇಂಜಿನಿಯರ್ ಮಹಾದೇವ್, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.