ಪುತ್ತೂರು ಭೂ ದಾಖಲೆಗಳ ಇಲಾಖೆಯಲ್ಲಿಯೂ ಚಾಲನೆ ನೀಡಲಾಯಿತು.
Advertisement
ಪ್ರಾರಂಭದಲ್ಲಿ ಕಡತಗಳಲ್ಲಿ ಇರುವ ಭೂಮಿಯ ದಾಖಲೆಗಳ ಭಾವಚಿತ್ರ ತೆಗೆದು ಅವುಗಳ ಸಿಡಿ ಮಾಡಿ ದಾಖಲೆ ಭದ್ರಪಡಿಸಲಾಗುವುದು. ಸಿಡಿಯ ಒಂದು ಪ್ರತಿಯನ್ನು ಇಲಾಖೆಗೆ ಕಳುಹಿಸಲಾಗುವುದು. ಬಳಿಕ ಆಕಾರ ಬಂದ್‌ನಲ್ಲಿರುವ ಜಮೀನು ವಿಧಗಳು, ಸರ್ವೆ ನಂಬರ್, ವಿಸ್ತೀರ್ಣ ಹಾಗೂ ನಿಗದಿಪಡಿಸಿದ ದರಗಳು ಸೇರಿದಂತೆ ಒಟ್ಟು 29 ಕಾಲಂಗಳನ್ನು ಕಂಪ್ಯೂಟರ್ ಸಾಫ್ಟ್‌ವೇರ್ ಮೂಲಕ ದಾಖಲೀಕರಣ ಮಾಡಲಾಗುತ್ತದೆ. ಅನಂತರ ಕಂಪ್ಯೂಟರ್ ನಲ್ಲಿ ದಾಖಲಾಗಿರುವ ಆಕಾರ ಬಂದ್‌ನ ಮಾಹಿತಿಗಳಿಗೂ ಹಾಗೂ ಸಿಡಿಯಲ್ಲಿರುವ ಮಾಹಿತಿ ಗಳನ್ನು ತಾಳೆ ಮಾಡಿ ತಪಾಸಣೆ ನಡೆಸಲಾಗುವುದು.