ತೋಕೂರು: ಗ್ರಾಮೀಣ ಭಾಗದಲ್ಲಿ ಪ್ರಧಾನಿಯವರ ಪರಿಕಲ್ಪನೆಯ ಸ್ವಚ್ಛತಾ ಅಭಿಯಾನಕ್ಕೆ ವಿಶೇಷ ಜಾಗೃತಿ ಮೂಡಿಸಿರುವುದರಿಂದ ನಗರಕ್ಕಿಂತ ಹೆಚ್ಚು ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸಿಕೊಂಡಿದ್ದಾರೆ. ಪಂಚಾಯತ್‌ಗಳು ಈ ಬಗ್ಗೆ ವಿಶೇಷ ಕಾಳಜಿ ವಹಿಸಿದಲ್ಲಿ ಮಾತ್ರ ನಿರಂತರವಾಗಿ ಸ್ವಚ್ಛ ಪರಿಸರವನ್ನು ಕಾಣಬಹುದು ಎಂದು ತಾಲೂಕು ಪಂಚಾಯತ್ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು ಹೇಳಿದರು. ಪಡುಪಣಂಬೂರು ಗ್ರಾ.ಪಂ.ನ 10ನೇ ತೋಕೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ಸ್ವಚ್ಛ ಪಡುಪಣಂಬೂರು ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಅಧ್ಯಕ್ಷತೆ ವಹಿಸಿ, ಸೇವಾ ಮನೋಭಾವನೆಯ ಸಂಸ್ಥೆಗಳು
ಸ್ಥಳೀಯ ಪಂಚಾಯತ್‌ನೊಂದಿಗೆ ತಿಂಗಳಿಗೊಮ್ಮೆ ಇಂತಹ ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಸಂಯೋಜಿಸಿದಲ್ಲಿ
ಸಂಸ್ಥೆಗಳನ್ನು ಸಹ ಜನರು ಗುರುತಿಸಿ ಪ್ರೋತ್ಸಾಹಿಸುತ್ತಾರೆ ಎಂದರು.
ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್ ದಾಸ್ ಮತ್ತು ಉಪಾಧ್ಯಕ್ಷೆ ಸುರೇಖಾ ಕರುಣಾಕರ್ ಅಭಿಯಾನಕ್ಕೆ ಜಂಟಿಯಾಗಿ ಚಾಲನೆ ನೀಡಿದರು. ಮಂಗಳೂರಿನ ರಾಮಕೃಷ್ಣ ಮಿಷನ್‌ನ ವಿಶೇಷ ಸಹಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಡುಪಣಂಬೂರು ಗ್ರಾ.ಪಂ., ತೋಕೂರು ಯುವಕ ಸಂಘ, ಮಹಿಳಾ ಮಂಡಳಿ, ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್, ಪಕ್ಷಿಕೆರೆ ವಿನಾಯಕ ಮಿತ್ರ ಮಂಡಳಿ, ಗಜಾನನ ನ್ಪೋರ್ಟ್ಸ್ ಕ್ಲಬ್, ಕೊಲಾ°ಡು ಫ್ರೆಂಡ್ಸ್, ಕಂಬಳ ಬೆಟ್ಟು ಕ್ರಿಕೆಟರ್ ಜಂಟಿಯಾಗಿ ಅಭಿಯಾನದಲ್ಲಿ ಪಾಲ್ಗೊಂಡವು.
ಪಡುಪಣಂಬೂರು ಗ್ರಾ.ಪಂ.ನ ಸದಸ್ಯರಾದ ಹೇಮಂತ್ ಅಮೀನ್, ದಿನೇಶ್ ಕುಲಾಲ್, ಲೀಲಾ ಬಂಜನ್, ಸಂತೋಷ್ ಕುಮಾರ್, ವನಜಾ, ಪುಷ್ಪಾವತಿ, ಮಂಜುಳಾ, ಸಂಪಾವತಿ, ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್, ಮಹಿಳಾ ಮಂಡಳಿಯ ಅಧ್ಯಕ್ಷೆ ವಿನೋದಾ ಭಟ್, ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ರತನ್ ಶೆಟ್ಟಿ, ಗಜಾನನ ಫ್ರೆಂಡ್ಸ್‌ನ ಅಧ್ಯಕ್ಷ ಸಚಿನ್, ವಿನಾಯಕ ಮಿತ್ರಮಂಡಳಿಯ ಅಧ್ಯಕ್ಷ ರಾಜೇಶ್ ಎಸ್. ದಾಸ್, ಕೊಲ್ನಾಡು ಫ್ರೆಂಡ್ಸ್‌ನ ದೀಪಕ್, ಸಂತೋಷ್, ಕಂಬಳ ಬೆಟ್ಟುವಿನ ತಿಲಕ್ ರಾಜ್ ಹಾಗೂ ಎಲ್ಲ ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪಡುಪಣಂಬೂರು ಗ್ರಾ.ಪಂ. ಕಾರ್ಯದರ್ಶಿ ಲೋಕನಾಥ ಭಂಡಾರಿ ಸ್ವಾಗತಿಸಿ, ಪ್ರಸ್ತಾವನೆಗೈದರು, ಸಿಬಂದಿ ಅಭಿಜಿತ್ ವಂದಿಸಿದರು, ದಿನಕರ್ ಕಾರ್ಯಕ್ರಮ ನಿರೂಪಿಸಿದರು.