Advertisement

ಕಾವೇರಿ ಆನ್‌ಲೈನ್‌ ಸೇವೆಗೆ ನಾಳೆ ಚಾಲನೆ

06:30 AM Nov 11, 2018 | |

ಬೆಂಗಳೂರು: ಸ್ಥಿರಾಸ್ತಿ ನೋಂದಣಿಗೆ ಸಂಬಂಧಿಸಿದ ಆಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರ ಪತ್ರ ವಿಷಯಗಳ ನೋಂದಣಿ ಸಂಬಂಧಿತ ವಿಷಯಗಳ ವಿವಿಧ ಸೇವೆಗಳು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಮಾಡಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾವೇರಿ ಆನ್‌ಲೈನ್‌’ ಸೇವೆ ಆರಂಭಿಸುತ್ತಿದೆ. 

Advertisement

ಕಾವೇರಿ ಆನ್‌ ಲೈನ್‌ ಸೇವೆಗಳ ಜಾಲದಲ್ಲಿ ಸ್ಥಿರಾಸ್ತಿಗಳ ಋಣಭಾರ ರಾಹಿತ್ಯ ಪ್ರಮಾಣ ಪತ್ರ (ಆನ್‌ಲೈನ್‌ ಇಸಿಸಿಸಿ), ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿ ಪೂರೈಸುವಿಕೆ, ಸಾರ್ವಜನಿಕರಿಂದ ನೋಂದಣಿ ಪೂರ್ವ ಡೇಟಾ ಎಂಟ್ರಿ, ಆಸ್ತಿ ಪಾಸ್ತಿಗಳ ನೋಂದಣಿಗೆ ಮುಂಗಡವಾಗಿ ಕಾಲ ನಿಗದಿಪಡಿಸಿಕೊಳ್ಳುವಿಕೆ, ರಾಜ್ಯದ ಎಲ್ಲ 250 ಉಪ ನೋಂದಣಾಧಿಕಾರಿಗಳ ಕಚೇರಿ ಮಾಹಿತಿ ಲಭ್ಯವಾಗಲಿದೆ.

ನ.12ರಂದು ಸೋಮವಾರ ಈ ಸೇವೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದ್ದಾರೆ.

ಕಾವೇರಿ ಆನ್‌ಲೈನ್‌ ಸೇವೆಗಳ ಜಾಲದಲ್ಲಿ ಸಾರ್ವಜನಿಕರು ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಅನುಕೂಲವಾಗುವಂತೆ ಮೌಲ್ಯ ಎಂಬ ಜಿಐಎಎಸ್‌ ಆಧಾರಿತ ಮೊಬೈಲ್‌ ಆ್ಯಪ್‌ ಅನ್ನು ಅಭಿವೃದ್ದಿಪಡಿಸಲಾಗಿದೆ. ಸಾರ್ವಜನಿಕರು ತಾವು ಮಾಡಿಕೊಳ್ಳುವ ಕರಾರು ಪತ್ರ ಮತ್ತು ಪ್ರಮಾಣಪತ್ರಗಳಿಗೆ ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡಿ ಇ-ಸ್ಟಾಂಪ್‌ ಕಾಗದವನ್ನು ತಮ್ಮ ಮನೆಯಿಂದಲೇ ಪ್ರಿಂಟೌಟ್‌ ತೆಗೆದುಕೊಂಡು
ಇಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next