Advertisement

ಬೆಂಬಲ ಬೆಲೆಯಲ್ಲಿ ಜೋಳ ಖರೀದಿಗೆ ಚಾಲನೆ

02:24 PM Feb 20, 2022 | Team Udayavani |

ಮಾನ್ವಿ: ಸರಕಾರದ ಆದೇಶದಂತೆ 2021-22ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಜೋಳ ಖರೀದಿಗೆ ಜ.1ರಿಂದ ನೋಂದಣಿ ಪ್ರಾರಂಭವಾಗಿದ್ದು, 1685ಕ್ಕೂ ಹೆಚ್ಚು ರೈತರು ಹೆಸರು ನೋಂದಾಯಿಸಿದ್ದಾರೆ ಎಂದು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರದ ಲೆಕ್ಕಾ ಧಿಕಾರಿ ರಮೇಶ ತಿಳಿಸಿದರು.

Advertisement

ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಕೇಂದ್ರದಲ್ಲಿನ ಜೋಳ ಖರೀದಿ ಕೇಂದ್ರದಲ್ಲಿ ಜೋಳ ಖರೀದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರದಿಂದ ಹೈಬ್ರಿಡ್‌ ಜೋಳ ದರ ಪ್ರತಿ ಕ್ವಿಂಟಲ್‌ಗೆ 2738 ರೂ., ಬಿಳಿ ಜೋಳ ಮಾಲ್ದಂಡಿ ದರ ಪ್ರತಿ ಕ್ವಿಂಟಲ್‌ಗೆ 2758 ರೂ. ನಂತೆ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಸರಕಾರದಿಂದ ಖರೀದಿ ಮಿತಿಯನ್ನು ತೆರವುಗೊಳಿಸಿರುವುದರಿಂದ ರೈತರು ಪ್ರತಿ ಎಕರೆಗೆ 20 ಕ್ವಿಂಟಲ್‌ ವರೆಗೆ ಫೆ.28ರ ವರೆಗೆ ನೋಂದಣಿಗೆ ಅವಕಾಶವಿದೆ. ಮಾ.31ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದರು.

ತಹಶೀಲ್ದಾರ್‌ ಎಲ್‌.ಡಿ. ಚಂದ್ರಕಾಂತ ಮಾತನಾಡಿ, ತಾಲೂಕಿನಲ್ಲಿ ಒಟ್ಟು ಜೋಳ ಖರೀದಿಗೆ ಮಾನ್ವಿ ಪಟ್ಟಣದಲ್ಲಿ 2 ಕೇಂದ್ರಗಳು, ಹಿರೇಕೋಟೆ°ಕಲ್‌, ತೋಳದಿನ್ನಿ ಗ್ರಾಮಗಳಲ್ಲಿ ಒಂದರಂತೆ 4 ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ರೈತರು ಜೋಳದ ಬೆಳೆಯನ್ನು ನೋಂದಾಯಿಸಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next