ಬಸವನಬಾಗೇವಾಡಿ: ತಾಲೂಕಿನ ಆರೂಢ ನಂದಿಹಾಳದ ಶ್ರೀಗುರು ಆರೂಢರ ನೂತನ ರಥದ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ರಥದ ನಿರ್ಮಾಣಕ್ಕೆ ಪೂಜೆ ಸಲ್ಲಿಸಿದ ಕಡಕೋಳದ ರಾಜಗುರು ಮಹಾಲಿಂಗ ಸ್ವಾಮೀಜಿ, ನೂತನ ರಥದ ನಿರ್ಮಾಣದ ಕುರಿತಾಗಿ ಕಳೆದ ಐದು ವರ್ಷಗಳಿಂದ ಸಂಕಲ್ಪ ಇತ್ತು. ಈ ವರ್ಷ ಅಂದರೆ ಫೆ.21ರಂದು ನಡೆಯುವ ಶ್ರೀಗುರು ಆರೂಢರ 36ನೇ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ನೂತನ ರಥವು ಲೋಕಾರ್ಪಣೆಯಾಗುತ್ತಿರುವುದು ಆರೂಢ ಭಕ್ತರಲ್ಲಿ ತೀವ್ರ ಸಂತೋಷವನ್ನುಂಟು ಮಾಡಿದೆ. ಈ ನಿಟ್ಟಿನಲ್ಲಿ ಭಕ್ತರು ತನು ಮನ ಧನಗಳಿಂದ ರಥದ ನಿರ್ಮಾಣ ಕಾರ್ಯಕ್ಕೆ ಸಹಕರಿಸಬೇಕು ಎಂದು ಹೇಳಿದರು.
ರಥದ ಶಿಲ್ಪಿಕಾರ ಪರಶುರಾಮ ಪವಾರ ಹಾಗೂ ಅವರ ಕುಟುಂಬ ವರ್ಗದವರು ಇಲ್ಲಿಯವರೆಗೆ ರಾಜ್ಯವಲ್ಲದೇ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ 260ಕ್ಕೂ ಅಧಿಕ ಕಬ್ಬಿಣದ ರಥಗಳನ್ನು ನಿರ್ಮಾಣ ಮಾಡಿದ ಶ್ರೇಯಸ್ಸು ಸಲ್ಲುತ್ತದೆ. ಈ ನಿಟ್ಟಿನಲ್ಲಿ ಪರಶುರಾಮ ಅವರಿಗೆ ಒಂದೂವರೆ ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಿ ಆಶೀರ್ವದಿಸಿದರು.
ರಥದ ಶಿಲ್ಪಿಕಾರ ಪರಶುರಾಮ ಪವಾರ ಮಾತನಾಡಿ, ರಥದ ಎತ್ತರವು ಭೂಮಿಯಿಂದ 25 ಅಡಿ, ಮುದ್ಗಲ್ ಗ್ರಾನೇಟ್ ಕಲ್ಲಿನ 4 ಚಕ್ರ, ರಥಕ್ಕೆ 300 ಹಿತ್ತಾಳೆ ಗಂಟೆ, 30 ಮೂರ್ತಿಗಳು, 8 ಸಿಂಹಗಳು, 4 ನಂದಿ ಜೋಡಿಸಲಾಗುವುದು. ಭಾರತ ಹುಣ್ಣಿಮೆ ಫೆ.19ರಂದು ರಥವನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶ್ರೀಗುರು ಆರೂಢರ ದೇವಸ್ಥಾನ ಕಮಿಟಿ ಅಧ್ಯಕ್ಷ ಎಸ್.ವಿ ಕನ್ನೂರ, ಕಾರ್ಯದರ್ಶಿ ಬಮ್ಮಯ್ಯ ಹಿರೇಮಠ, ಶಾಂತಯ್ಯ ಹಿರೇಮಠ, ಬಸಯ್ಯ ಹಿರೇಮಠ, ಎಂ.ಎಸ್. ಗೌಡರ, ಸಿದ್ಧಾರೂಢ ಕನ್ನೂರ, ಖಾಸ್ಗತ ಸಜ್ಜನ, ಮಡಿವಾಳಪ್ಪ ಹಬ್ಬಿಹಾಳ, ಕನಕಪ್ಪ ವಾಲೀಕಾರ, ನಿಂಗಪ್ಪ ಮದರಿ, ಡಾ| ಬಸವರಾಜ ಸಾಲವಾಡಗಿ, ಶಾಂತಗೌಡ ಪಾಟೀಲ, ಚನ್ನಪ್ಪ ಸಜ್ಜನ, ಗ್ರಾಪಂ ಸದಸ್ಯ ಗುರುನಗೌಡ ಪಾಟೀಲ, ರಾಚಪ್ಪ ಕನ್ನೂರ, ಪವನ ಹಳ್ಳಿ, ಮಲ್ಲಪ್ಪ ಸಜ್ಜನ, ಮಲ್ಲಣ್ಣ ಸಜ್ಜನ, ಕೆಂಚು ವಾಲೀಕಾರ, ನಿವೃತ್ತ ತಹಶೀಲ್ದಾರ್ ರಾಯಪ್ಪ ಸಜ್ಜನ, ಬಸಪ್ಪ ಉಕ್ಕಲಿ, ಶರಣಬಸ್ಸು ಸಜ್ಜನ, ಪರಸುರಾಮ ಪವಾರ, ಸಂಗಮೇಶ ಕನ್ನೂರ, ಮುಕುಂದ ಪವಾರ, ಬಸವಂತ್ರಾಯಗೌಡ ಪಾಟೀಲ, ಶ್ರೀಗುರು ಆರೂಢರ ಸಂಸ್ಮರಣೆ ವೇದಿಕೆ ಅಧ್ಯಕ್ಷ ಗುರುರಾಜ ಕನ್ನೂರ ಇದ್ದರು.