Advertisement

ಸ್ವಯಂಚಾಲಿತ ಮಾಸ್ಕ್ ಮಾರಾಟ ಯಂತ್ರಕ್ಕೆ ಚಾಲನೆ

04:31 PM Jun 14, 2021 | Team Udayavani |

ಹುಬ್ಬಳ್ಳಿ: ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಸುಲಭವಾಗಿ ದೊರೆಯುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಹಾಗೂ ಯಂಗ್‌ ಇಂಡಿಯಾ ಸಹಯೋಗದಲ್ಲಿ ಸ್ವಯಂ ಚಾಲಿತ ಮಾಸ್ಕ್ ಮಾರಾಟ ಯಂತ್ರ ಅಳವಡಿಕೆಗೆ ಮುಂದಾಗಿದ್ದು, ಪ್ರಾಯೋಗಿಕವಾಗಿ 12 ಯಂತ್ರಗಳಿಗೆ ಚಾಲನೆ ನೀಡಲಾಯಿತು.

Advertisement

ರವಿವಾರ ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ 12 ಯಂತ್ರಗಳಿಗೆ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಚಾಲನೆ ನೀಡಿದರು. ಪಾಲಿಕೆ ಹಾಗೂ ಯಂಗ್‌ ಇಂಡಿಯಾ ಸಹಯೋಗದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಈ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. 2 ರೂ. ಬಿಲ್ಲೆ ಹಾಕಿದರೆ ಮೂರು ಲೇಯರ್‌ ಉಳ್ಳ ಸರ್ಜಿಕಲ್‌ ಮಾಸ್ಕ್ ದೊರಯಲಿದೆ. ಒಂದು ಯಂತ್ರದಲ್ಲಿ 100 ಮಾಸ್ಕ್ ಸಂಗ್ರಹಿಸಬಹುದಾಗಿದೆ.

ಆರಂಭದಲ್ಲಿ 12 ಯಂತ್ರಗಳನ್ನು ಕಿಮ್ಸ್‌, ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ ಕಚೇರಿ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಜನರ ಬೇಡಿಕೆ ಆಧರಿಸಿ ಇನ್ನಷ್ಟು ಯಂತ್ರಗಳನ್ನು ಅಳವಡಿಸುವ ಗುರಿಯಿದೆ. ಮುಂದಿನ ಆರು ತಿಂಗಳು ಯಂಗ್‌ ಇಂಡಿಯಾ ಇವುಗಳನ್ನು ನಿರ್ವಹಣೆ ಮಾಡಲಿದ್ದು, ನಂತರ ಪಾಲಿಕೆಯ ಜವಬ್ದಾರಿಯಾಗಿರುತ್ತದೆ. ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿ, ಜನರಿಗೆ ಮಾಸ್ಕ್ ಅಗತ್ಯವಾಗಿರುವುದರಿಂದ ಇಂತಹ ಯಂತ್ರಗಳ ಅಳವಡಿಕೆಗೆ ಯಂಗ್‌ ಇಂಡಿಯಾ ಸಂಸ್ಥೆಯ ಪ್ರಮುಖರೊಂದಿಗೆ ಚರ್ಚೆ ಮಾಡಲಾಗಿತ್ತು. ಅದರಂತೆ 12 ಯಂತ್ರ ನೀಡಿದ್ದು, ಇವುಗಳನ್ನು ಅವರೇ ನಿರ್ವಹಣೆ ಮಾಡಲಿದ್ದಾರೆ. ಮಾಸ್ಕ್ ಮರು ಸಂಗ್ರಹದಿಂದ ಹಿಡಿದು ಪ್ರತಿಯೊಂದು ಕಾರ್ಯ ನಿರ್ವಹಿಸಲಿದ್ದಾರೆ. ನಂತರ ಜನರ ಬೇಡಿಕೆ ನೋಡಿಕೊಂಡು ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದರು.

ಯಂಗ್‌ ಇಂಡಿಯಾ ಸಂಸ್ಥಾಪಕ ಚೇರ್ಮನ್‌ ಡಾ| ಶ್ರೀನಿವಾಸ ಜೋಶಿ ಮಾತನಾಡಿ, ಚೆನ್ನೈನಲ್ಲಿ ಈ ಯಂತ್ರಗಳು ಇರುವುದನ್ನು ಪಾಲಿಕೆ ಆಯುಕ್ತರು ತಿಳಿಸಿದ್ದರು. ಮುಂಬೈನಿಂದ ಒಂದು ಯಂತ್ರ ತರಿಸಿ ಒಂದಿಷ್ಟು ಮಾರ್ಪಾಡು ಮಾಡಲಾಗಿದೆ. ಈ ಯಂತ್ರಗಳು ರಾಜ್ಯದಲ್ಲಿ ಮೊದಲಾಗಿದ್ದು, ಇತರೆ ರಾಜ್ಯದಲ್ಲಿ 5 ರೂ.ಗೆ ಒಂದು ಮಾಸ್ಕ್ ಇದೆ. ಆದರೆ ಇಲ್ಲಿ 2 ರೂ. ಮಾಡಲಾಗಿದೆ. ಅಗರವಾಲ್‌ ಮೆಡಿಕಲ್‌ ಅವರೊಂದಿಗೆ ಮಾತನಾಡಿ ಕಡಿಮೆ ದರದಲ್ಲಿ ಮಾಸ್ಕ್ ಖರೀದಿಸಲಾಗುತ್ತಿದೆ. ಯಂತ್ರಗಳಿಗೆ ಮಾಸ್ಕ್ ತುಂಬುವ ಕೆಲಸಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಯಂಗ್‌ ಇಂಡಿಯಾ ಚೇರ¾ನ್‌ ಸಚಿನ ತೆಂಗಿನಕಾಯಿ, ಕೋ ಚೇರ¾ನ್‌ ಡಾ| ಐಶ್ವರ್ಯ ಭಟ್ಟ ಇನ್ನಿತರರಿದ್ದರು.

ಕಿಮ್ಸ್‌, ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ ಕಚೇರಿ, ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ,

Advertisement

 

Advertisement

Udayavani is now on Telegram. Click here to join our channel and stay updated with the latest news.

Next