Advertisement

ಗ್ರಾಮೀಣ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ ಓಡಿಸಿ

05:43 PM Jan 29, 2021 | Team Udayavani |

ಭಾಲ್ಕಿ: ತಾಲೂಕಿನ ಗ್ರಾಮೀಣ ಪ್ರದೇಶದ ವಿವಿಧೆಡೆ ಸಮರ್ಪಕ ಸಾರಿಗೆ ಬಸ್‌ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ
ತಾಕೀತು ಮಾಡಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ತಾಲೂಕಿನ ವಿವಿಧೆಡೆ ಬಸ್‌ ಇಲ್ಲದಿರುವುದರಿಂದ  ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ನಿಗದಿತ ಸಮಯದಲ್ಲಿ ತೆರಳಲು ಸಾಧ್ಯವಾಗುತ್ತಿಲ್ಲ. ಜತೆಗೆ
ಜನರು ವಿವಿಧ ಕೆಲಸಗಳಿಗೆ ಓಡಾಡಲು ಸಮಸ್ಯೆ ಎದುರಿಸುತ್ತಿದ್ದಾರೆ. ಯಾವುದೇ ನೆಪ ಹೇಳದೇ ಎಲ್ಲ ಕಡೆಗಳಲ್ಲಿ ತಕ್ಷಣ ಬಸ್‌ ವ್ಯವಸ್ಥೆ ಮಾಡಿ ಮಾಹಿತಿ
ನೀಡುವಂತೆ ಡಿಪೋ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಪಟ್ಟಣದಲ್ಲಿ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿ, ಹೊಸ ಬಡಾವಣೆಗಳಲ್ಲಿ ಬಿಟ್ಟು ಹೋಗಿರುವ ಸಿಸಿ ರಸ್ತೆ, ಚರಂಡಿ, ಬೀದಿ ದೀಪ ಅವಳವಡಿಕೆ ಸೇರಿ ಮುಖ್ಯ ರಸ್ತೆಯ ಬಾಕಿ ಉಳಿದಿರುವ ಕಾಮಗಾರಿ ಕೆಲಸ ಮಾರ್ಚ್‌ ತಿಂಗಳೊಳಗೆ ಪೂರ್ಣಗೊಳಿಸಬೇಕು. ರಸ್ತೆ ಮಧ್ಯದಲ್ಲಿನ ವಿದ್ಯುತ್‌ ಕಂಬ ಸ್ಥಳಾಂತರಿಸಬೇಕು.

ಜತೆಗೆ ಪುರಸಭೆ ನೂತನ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಫೆ.15ರೊಳಗೆ ಕಟ್ಟಡ ಲೋಕಾರ್ಪಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಜತೆಗೆ
ಗ್ರಾಮೀಣ ಭಾಗದ ಕುಡಿವ ನೀರಿನ ಕಾಮಗಾರಿ ಪರಿಶೀಲಿಸಲು ಇಒಗೆ ಸೂಚಿಸಿದರು.

ಕೊರೊನಾ ಸಕ್ರಿಯೆ ಪ್ರಕರಣ 4: ತಾಲೂಕಿನಲ್ಲಿ ಕೇವಲ 4 ಕೊರೊನಾ ವೈರಸ್‌ ಸಕ್ರಿಯ ಪ್ರಕರಣಗಳಿವೆ ಎಂದು ತಾಲೂಕು ಆರೋಗ್ಯ ವೈದ್ಯಾ ಧಿಕಾರಿ
ಡಾ| ಜ್ಞಾನೇಶ್ವರ ನಿರಗೂಡೆ ಸಭೆಯ ಗಮನಕ್ಕೆ ತಂದರು. ಶೇ.78 ಕೊರೊನಾ ವಾರಿಯರ್ಸ್‌ಗಳಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಲಸಿಕೆಯಿಂದ
ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂದರು.

Advertisement

ಈ ವೇಳೆ ತಾಪಂ ಉಪಾಧ್ಯಕ್ಷ ಶಿವರಾಜ ಪಾಟೀಲ್‌, ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ್‌, ತಾಪಂ ಇಒ ದೀಪಿಕಾ ನಾಯಕರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next