Advertisement

ಮಹಿಳಾ ಸೇನಾ ಭರ್ತಿ ರ‍್ಯಾಲಿಗೆ ಚಾಲನೆ

12:49 AM Aug 02, 2019 | Team Udayavani |

ಬೆಳಗಾವಿ: ದೇಶದ ಮೊದಲ ಮಹಿಳಾ ಮಿಲಿಟರಿ ಪೊಲೀಸ್‌ ಭರ್ತಿ ರ‍್ಯಾಲಿ ಗುರುವಾರದಿಂದ ನಗರದ ಮರಾಠಾ ಲಘು ಪದಾತಿದಳ(ಎಂಎಲ್ಐಆರ್‌ಸಿ) ಕೇಂದ್ರದಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ಆರಂಭ ಗೊಂಡಿತು. ಸತತ ನಾಲ್ಕೈದು ದಿನಗಳಿಂದ ಸುರಿ ಯುತ್ತಿರುವ ಧಾರಾಕಾರ ಮಳೆ ಗುರುವಾರ ತುಸು ಕಡಿಮೆ ಆಗಿತ್ತು. ಆದರೂ ಜಿಟಿಜಿಟಿ, ತುಂತುರು ಮಳೆ ಬೆಳಗ್ಗೆಯಿಂದ ಇತ್ತು. ಮಳೆಯನ್ನೂ ಲೆಕ್ಕಿಸದೇ ಅಭ್ಯರ್ಥಿ ಗಳು ಭರ್ತಿ ಆಗುವ ಉತ್ಸಾಹದಿಂದ ಮೈದಾನದಲ್ಲಿ ಓಡಿದರು.

Advertisement

ಮೊದಲ ದಿನ ಶಾರೀರಿಕ ಕಸರತ್ತುಗಳ ಪರೀಕ್ಷೆ ನಡೆದವು. ಓಟ, ಉದ್ದ ಜಿಗಿತ, ಎತ್ತರ ಜಿಗಿತ ಸೇರಿ ಇತರ ದೈಹಿಕ ಪರೀಕ್ಷೆಗಳಲ್ಲಿ ಯುವತಿಯರು ಪಾಲ್ಗೊಂಡಿದ್ದರು. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಮಿಲಿಟರಿ ಆಸ್ಪತ್ರೆಗೆ ಕಳುಹಿಸಲಾಯಿತು.

ಮೆಟ್ರಿಕ್ಯುಲೇಷನ್‌ ಮೆರಿಟ್ ಆಧಾರದ ಮೇಲೆ 3,000 ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಈ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯ ಯುವತಿಯರು ಭಾಗವಹಿಸಿದ್ದರು.

ಕರ್ನಾಟಕ ಸೇರಿ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ಅಂಡಮಾನ್‌, ನಿಕೊಬಾರ್‌ ದ್ವೀಪ ಗಳು, ಪಾಂಡಿಚೇರಿ ರಾಜ್ಯದ ಲಕ್ಷದ್ವೀಪ ಹಾಗೂ ಮಾಹೆ ಜಿಲ್ಲೆಯ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಆ. 5ರವರೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next