Advertisement

ಪಡುಕರೆ ಕಾಲೇಜು ಬಿಸಿಊಟ ಯೋಜನೆಗೆ ಚಾಲನೆ

08:56 PM Jul 13, 2019 | Team Udayavani |

ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆರಂಭಿಸಿದ ಬಿಸಿಊಟ ಯೋಜನೆ ಇತ್ತೀಚೆಗೆ ಚಾಲನೆ ನೀಡಲಾಯಿತು.

Advertisement

ದಾನಿಗಳ ಸಹಕಾರದಿಂದ ಆರಂಭಿಸಲಾದ ಈ ಯೋಜನೆಗೆ ಮಣೂರು ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ ಸಿ.ಕುಂದರ್‌ ಚಾಲನೆ ನೀಡಿ, ಗ್ರಾಮೀಣ ಪ್ರದೇಶ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳೇ ಹೆಚ್ಚಾಗಿರುವ ಕಾಲೇಜಿನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ
ಗುಣಮಟ್ಟದ ಊಟ ನೀಡುವುದು ನಿಜವಾಗಿಯೂ ಉತ್ತಮ ಕಾರ್ಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉತ್ತಮ ರೀತಿಯಲ್ಲಿ ತಮ್ಮ ಪದವಿ ಪೂರೈಸಬೇಕೆಂದು ಹಾರೈಸಿದರು.

ಪ್ರಾಂಶುಪಾಲರಾದ ನಿತ್ಯಾನಂದ ಗಾಂವ್ಕರ್‌ ಮಾತನಾಡಿ, ಈಗಾಗಲೇ ಸುಮಾರು ಇನ್ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬಿಸಿಯೂಟದ ಪ್ರಯೋಜನೆ ಪಡೆಯುತ್ತಿರುವುದು ಗಮನಾರ್ಹವಾಗಿದೆ ಎಂದರು. ಕಾಲೇಜಿನ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಹಾಗೂ ದೆ„ಹಿಕ ಶಿಕ್ಷಣ ನಿರ್ದೇಶಕರಾದ ಡಾ.ಮನೋಜ್‌ ಕುಮಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next