Advertisement
ಶಾಸಕರಾದ ಬಂಡೆಪ್ಪ ಖಾಶೆಂಪುರ ಅವರೊಂದಿಗೆ ಸಚಿವರು ಗ್ರಾಮದ ರವೀಂದ್ರ ರೆಡ್ಡಿ ಅವರ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ನಾಗೋರಾ ಪಿಡಿಒ ಗಾಯತ್ರಿದೇವಿ ಹೊಸಮನಿ ಅವರ ಸಮ್ಮುಖದಲ್ಲಿ ಆಶಾ ಕಾರ್ಯಕರ್ತೆಯರಾದ ನಿರ್ಮಲಾ ಮತ್ತು ಪ್ರಮಿಳಾ ಅವರು, ರೆಡ್ಡಿ ಕುಟುಂಬದ ಸದಸ್ಯರಾದ ಶ್ರೀದೇವಿ, ಓಂಕಾರ, ನಿಖಲ್ ಅವರ ದೇಹದ ತಾಪಮಾನ ಮತ್ತು ಅವರ ಫಲ್ಸ್ ರೇಟ್ ಪರೀಕ್ಷಿಸಿ ಆರೋಗ್ಯ ತಪಾಸಣೆ ನಡೆಸಿದರು.
Related Articles
Advertisement
ಸ್ಥಳದಲ್ಲೇ ರ್ಯಾಟ್ ಪರೀಕ್ಷೆ: ಮನೆ-ಮನೆ ಭೇಟಿ ಆರೋಗ್ಯ ತಪಾಸಣೆ ಬಳಿಕ ಸಚಿವರು, ಗ್ರಾಮದ ಗ್ರಂಥಾಲಯ ಪಕ್ಕದ ಜಾಗದಲ್ಲಿ ಜ್ವರ, ಕೆಮ್ಮು, ನೆಗಡಿ ಲಕ್ಷಣವಿರುವವರಿಗೆ ನಡೆಸುತ್ತಿದ್ದ ಕೋವಿಡ್ ರ್ಯಾಟ್ ತಪಾಸಣೆ ಗಮನಿಸಿದರು. ಟಿಎಚ್‌ಒ ಡಾ| ಸಂಗಾರೆಡ್ಡಿ, ಎಂಎಲ್‌ಎಚ್‌ವಿ ಇಮಾನ್ವೆ ಮತ್ತು ಎಎನ್‌ಎಂ ಝರೆಮ್ಮ ಅವರು ಸ್ಥಳದಲ್ಲಿಯೇ ಕೆಲವರಿಗೆ ರ್ಯಾಟ್ ಪರೀಕ್ಷೆ ನಡೆಸಿದರು.ಈ ಸಂದರ್ಭದಲ್ಲಿ ಎಸ್‌ಪಿ ನಾಗೇಶ ಡಿ.ಎಲ್., ಸಹಾಯಕ ಆಯುಕ್ತೆ ಗರೀಮಾ ಪನ್ವಾರ, ಡಿವೈಎಸ್‌ಪಿ ಬಸವರಾಜ ಹೀರಾ, ತಹಶೀಲ್ದಾರ್ ಗಂಗಾದೇವಿ ಸಿ.ಎಚ್., ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಡಿಎಸ್‌ಒ ಡಾ| ಕೃಷ್ಣಾ ರೆಡ್ಡಿ, ವೈದ್ಯಾಧಿಕಾರಿ ಡಾ| ಮಹೇಶ ಬಿರಾದಾರ, ನಾಗೋರಾ ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಪಾಟೀಲ, ಉಪಾಧ್ಯಕ್ಷ ಶಿವಕುಮಾರ ಇದ್ದರು.