ಯಾದಗಿರಿ: ಪ್ರಸಕ್ತ ದಿನಗಳಲ್ಲಿ ವಾಹನ ಸವಾರರು ಸದಾ ಒತ್ತಡದಲ್ಲಿ, ಅತಿಯಾದ ಮೊಬೈಲ್ ಬಳಕೆ ಮಾಡಿಕೊಂಡು ಸಂಚಾರ ಮಾಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ರಸ್ತೆ ಸುರಕ್ಷತಾ ದೃಷ್ಟಿಯಿಂದ ಎಲ್ಲರೂ ಸಂಯಮದಿಂದ ಸಂಚಾರ ನಿಯಮ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸಲಹೆ ನೀಡಿದರು.
ಇಲ್ಲಿನ ಹಳೆ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಮೋಟರ್ ಡ್ರೈವಿಂಗ್ ಸ್ಕೂಲ್ ದಿನಾಚರಣೆ ಅಂಗವಾಗಿ ಜಿಲ್ಲಾ ಮೋಟರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರು ತಮ್ಮ ಜೀವನದ ಬಗ್ಗೆ ಕಾಳಜಿ ವಹಿಸದೇ ಹಲವಾರು ಸಮಯದಲ್ಲಿ ಮದ್ಯಪಾನ ಮಾಡಿ ವಾಹನ ಸಂಚಾರ ಮಾಡಿ, ಅನೇಕ ರಸ್ತೆ ಅಪಘಾತಗಳು ಸಂಭವಿಸಲು ಕಾರಣಿಭೂತರಾಗುತ್ತಿದ್ದಾರೆ. ಇದು ವಿಷಾದನೀಯ ಸಂಗತಿಯಾಗಿದೆ. ಕಾರಣ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಮಾತನಾಡಿ, ಎಲ್ಲರೂ ಮೊದಲು ವಾಹನ ಸಂಚಾರ ಲೈಸನ್ಸ್ ಪಡೆಯಬೇಕು. ಜೊತೆಗೆ ದ್ವೀಚಕ್ರ ವಾಹನ ಸಂಚಾರರು ತಲೆಗೆ ಹೆಲ್ಮೆಟ್ ಧರಿಸಬೇಕು. ಹಲವಾರು ಅಪಘಾತ ಸಮಯದಲ್ಲಿ ಪ್ರಾಣ ಉಳಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕುಮಾರಿ ವಿನಯ ಕಟೋಕರ್, ಡ್ರೈವಿಂಗ್ ಸ್ಕೂಲ್ ಮಾಲೀಕರ ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ್ ಪಾಟೀಲ್, ಮೋಟಾರ್ ವಾಹನ ನಿರೀಕ್ಷಕ ವೆಂಕಟಪ್ಪ ಕಲಾಲ್, ಮೌನೇಶ ಪತ್ತಾರ್, ಜುಬೇರ್ ಹೈಮದ್, ಜಿಲ್ಲಾ ಅಸೋಸಿಯೇಷನ್ ಗೌರವ ಅಧ್ಯಕ್ಷ ಶಂಕರ ಶಿಂಧೆ, ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ, ಕಾರ್ಯಾಧ್ಯಕ್ಷ ಅಬ್ದುಲ್ ಅಜೀಜ್, ಬಸಲಿಂಗಪ್ಪಗೌಡ, ನರಸಯ್ಯ ಕಲಾಲ್, ಬಸಯ್ಯಸ್ವಾಮಿ, ದಿಲೀಪ್ ಮುಳ್ಳಅಗಸಿ, ಶಾಂತವೀರಯ್ಯ ಹಿರೇಮಠ, ಅಂಬಯ್ಯ ಬಡಿಗೇರ ಸೇರಿದಂತೆ ಹಲವರು ಇದ್ದರು.