Advertisement

ಹನಿ ನೀರಾವರಿಯಿಂದ ಹೆಚ್ಚು ಲಾಭ

11:14 AM Nov 15, 2017 | Team Udayavani |

ಅಫಜಲಪುರ: ಅಂತರ್ಜಲಮಟ್ಟ ಕುಸಿತದಿಂದ ನೀರಿನ ಅಭಾವ ಹೆಚ್ಚಾಗುತ್ತಿದೆ. ಹೀಗಾಗಿ ರೈತರು ತಮ್ಮ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಲಾಭ ಪಡೆದುಕೊಳ್ಳಬೇಕು ಎಂದು ಫರಹತಾಬಾದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಿತೇಶ ಗುತ್ತೇದಾರ ಹೇಳಿದರು.

Advertisement

ತಾಲೂಕಿನ ಮಲ್ಲಾಬಾದ ಗ್ರಾಮದ ಲಕ್ಷ್ಮೀಪುತ್ರ ಜಮಾದಾರ ಅವರ ತೋಟದಲ್ಲಿ ನೆಟಾಮ್‌ ಇರಿಗೇಶನ್‌ ಇಂಡಿಯಾ
ಪ್ರ„.ಲಿ ಹಾಗೂ ಕರ್ನಾಟಕ ಮಶಿನರಿ ಸ್ಟೋರ್ಸ್‌ ಸಂಯುಕ್ತಾಶ್ರಯದಲ್ಲಿ ನಡೆದ ಹನಿ ನೀರಾವರಿಯಿಂದ ರೈತರಿಗಾಗುವ ಉಪಯೋಗಗಳು ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಸರಿಯಾದ ವ್ಯವಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದಿಲ್ಲ, ಯಾವ ಜಮೀನಿನಲ್ಲಿ ಯಾವ
ಬೆಳೆ ಬಿತ್ತಬೇಕು. ನೀರಿನ ಲಭ್ಯತೆಗೆ ಅನುಸಾರವಾಗಿ ಯಾವ ನೀರಾವರಿ ಕ್ರಮ ಅನುಸರಿಸಬೇಕು ಎಂಬುದನ್ನು ತಜ್ಞರಿಂದ ಮಾಹಿತಿ ಪಡೆದುಕೊಳ್ಳಬೇಕು. ವೈಜ್ಞಾನಿಕ ಕ್ರಮದಂತೆ ಬೇಸಾಯ ಮಾಡಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ರೈತರಿಗೆ ಇಂತಹ ಯೋಜನೆಗಳ ಕುರಿತು ಮತ್ತು ರೈತರ ಸಮಸ್ಯೆಗಳಿಗೆ ಅಧಿಕಾರಿಗಳು,
ಕಂಪನಿಯವರು ಸ್ಪಂದಿಸಿ ಮಾಹಿತಿ ನೀಡಬೇಕು ಎಂದರು.

ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ರಾಜಕುಮಾರ ಗೋವಿಂದ ಮಾತನಾಡಿ, ಹನಿ ನೀರಾವರಿಯಿಂದ ನೀರಿನ ಉಳಿತಾಯ ಮತ್ತು ಗುಣಮಟ್ಟದ ಬೆಳೆ ಬೆಳೆಯಲು ಅನೂಕುಲವಾಗುತ್ತದೆ. ಪ್ರಧಾನಮಂತ್ರಿ ಕೃಷಿ ಸಂಚಯಿನಿ ಯೋಜನೆ ಅಡಿಯಲ್ಲಿ ತಾಲೂಕಿನ ಎಸ್‌.ಸಿ, ಎಸ್‌.ಟಿ ಪಂಗಡದ ರೈತರಿಗೆ ಒಂದು ಕೋಟಿ ರೂ. ಅನುದಾನ ಬಂದಿದೆ. ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಫಲಾನುಭವಿಗಳಿಗೆ ಶೇ. 90ರಷ್ಟು ರಿಯಾಯ್ತಿ ಇದೆ ಎಂದು ತಿಳಿಸಿದರು.

Advertisement

ಅಣ್ಣಪ್ಪ ಗದ್ವಾಲ, ಬಿ.ವಿ ಜತ್ತಿ ಉಪನ್ಯಾಸದಲ್ಲಿ ಹನಿ ನೀರಾವರಿ ಕುರಿತು ರೈತರಿಗೆ ಮಾಹಿತಿ ನೀಡಿದರು. ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಲಚ್ಚಪ್ಪ ಜಮಾದಾರ, ಶರಣು ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
 
ಎಪಿಎಂಸಿ ಸದಸ್ಯ ಸಿದ್ದು ದಿಕ್ಸಂಗಿ, ನಜೀರ್‌ ಅಹ್ಮದ ಪಟೇಲ್‌ ಭೋಗನಳ್ಳಿ, ಪ್ರಗತಿಪರ ರೈತರಾದ ಮಂಜೂರ ಪಟೇಲ್‌, ರಜಾಕ್‌ ಪಟೇಲ್‌, ಸಾವಯವ ಕೃಷಿ ತಜ್ಞ ಅಬ್ದುಲ ಲತೀಪ್‌ ಪಟೇಲ್‌, ನಬಿಲಾಲ ಮಾಶಾಳಕರ, ಸಾಯಬಣ್ಣ ಪೂಜಾರಿ, ದೇವೇಂದ್ರ ಜಮಾದಾರ, ಮಾಲಾಸಾಬ ನದಾಫ್‌, ಭೀಮಶಾ ದೊಡ್ಮನಿ, ಮಹಾಂತೇಶ್‌ ಬಡಿಗೇರ, ಶಂಕು ಮ್ಯಾಕೇರಿ, ಗುರುಶಾಂತಪ್ಪ ಪಾಟೀಲ್‌, ಹಳ್ಳಾಳ ಅಖಂಡೆ, ಬಾಬು ಪಾಟೀಲ್‌, ಲಕ್ಷ್ಮೀಪುತ್ರ ಜಮಾದಾರ, ಬಾಬುರಾವ್‌ ಅತನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next