Advertisement
ಆದರೆ ಶುದ್ಧ ನೀರು ಯೋಜನೆಯ ಅನುಷ್ಠಾನದಲ್ಲಾಗುತ್ತಿರುವ ವಿಳಂಬ ಹಾಗೂ ಅನಗತ್ಯ ಪ್ರದೇಶಗಳಲ್ಲಿ ನಿರ್ಮಿಸ ಲಾಗುತ್ತಿರುವ ಈ ಘಟಕಗಳು ಈಗ ಪಾಳು ಬೀಳುವ ಸ್ಥಿತಿಯಲ್ಲಿದೆ. ಈ ನಡುವೆ ಮಿನರಲ್ ವಾಟರ್ ಕಂಪನಿಗಳ ಲಾಭವೂ ಈ ನಿರ್ಲಕ್ಷ್ಯದ ಹಿಂದಿದೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಲಾಗುತ್ತಿರುವ ಈ ಘಟಕ ಇಂದು ಊಟಕ್ಕಿಲ್ಲದ ಉಪ್ಪಿನಕಾಯಿಯಂತೆಯೂ ಆಗಿದೆ.
ಈ ಯೋಜನೆಯ ಪ್ರಕಾರ ಪ್ರತೀ ಗ್ರಾಮ ಪಂಚಾಯತ್‌ಗೆ ಒಂದರಂತೆ ಇಂತಹ ಘಟಕ ಗಳನ್ನು ಸ್ಥಾಪಿಸಿ ಆ ಗ್ರಾಮದ ಜನರಿಗೆ ಶುದ್ಧ ನೀರು ಕೊಡುವುದು ಸರಕಾರದ ಉದ್ದೇಶ. ಪ್ರತಿ ಘಟಕಕ್ಕೆ ಯೋಜನೆ ಆರಂಭ ವಾಗುವ ವರ್ಷ 5.88 ಲಕ್ಷ ರೂ. ವೆಚ್ಚ ಅಂದಾಜಿಸ ಲಾಗಿದ್ದು, ಇದೀಗ ಈ ಘಟಕಗಳಿಗೆ 13 ಲಕ್ಷಕ್ಕೂ ಮಿಕ್ಕಿದ ವೆಚ್ಚ ತಗಲುತ್ತಿದೆ. ಎಲ್ಲ ಪಂಚಾಯತ್‌ಗಳಲ್ಲಿ
ಜಿಲ್ಲೆಯ 230 ಗ್ರಾಮ ಪಂಚಾಯತ್‌ಗಳಲ್ಲಿ ಪ್ರತೀ ಪಂಚಾಯತ್‌ನಲ್ಲಿ 2ರಿಂದ 3 ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ ಇವೆಲ್ಲವೂ ಊಟಕ್ಕಿಲ್ಲದ ಉಪ್ಪಿನಕಾಯಿ ಯಂತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಕಡೆಗಳಲ್ಲಿ ಈ ಘಟಕದ ಕೆಲಸ ಆರಂಭವಾಗಿ ಒಂದು ವರ್ಷ ಕಳೆದರೂ ಘಟಕದ ಕೆಲಸ ಮಾತ್ರ ಮುಗಿದಿಲ್ಲ.
Related Articles
Advertisement
ಹಳ್ಳ ಹಿಡಿದ ಯೋಜನೆಈ ವಿಳಂಬಕ್ಕೆ ಮಿನರಲ್ ವಾಟರ್ ಕಂಪನಿಗಳ ಲಾಬಿಯೂ ಕಾರಣ ಎಂಬ ಗುಮಾನಿ ಇದೆ. ಒಂದು ರೂ.ಗೆ ಒಂದು ಲೀಟರ್ ನೀರು ಕೊಡುವ ಈ ಯೋಜನೆ ಸಮರ್ಪಕವಾಗಿ ಜಾರಿಗೆ ಬಂದಲ್ಲಿ ಮಿನರಲ್ ವಾಟರ್ ಕಂಪನಿಗಳು ಬೀಗ ಹಾಕಬೇಕಾಗುತ್ತದೆ ಎಂಬ ಆತಂಕವೂ ಇದೆ. ಜನಪರ ಕಾಳಜಿಯ ಯೋಜನೆ ಹೇಗೆ ಹಳ್ಳ ಹಿಡಿಯುತ್ತದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಸಿಗಲಿಕ್ಕಿಲ್ಲ ಎನ್ನುವ ಅಭಿಪ್ರಾಯ ಜನಸಾಮಾನ್ಯರಿಂದ ಕೇಳಿಬರುತ್ತಿದೆ. ಮನವಿ ಮಾಡಲಾಗಿದೆ
ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಎರಡು ಶುದ್ಧ ಕುಡಿಯುವ ನೀರು ಪೂರೈಕೆಯ ಘಟಕಗಳನ್ನು ಸ್ಥಾಪಿಸಲಾಗಿದ್ದು, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಗ್ರಾ.ಪಂ. ವತಿಯಿಂದ ಆಗಬೇಕಾದ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲಾಗಿದ್ದು, ಕೆಆರ್‌ಡಿಎಲ್ ನಿಗಮದ ಅಧಿಕಾರಿಗಳಿಗೆ ಕಾಮಗಾರಿಯನ್ನು ಬೇಗ ಮುಗಿಸುವಂತೆ ಮನವಿ ಮಾಡಲಾಗಿದೆ. ಈ ಯೋಜನೆ ಅನುಷ್ಠಾನವಾದರೆ ಬೇಸಗೆಯಲ್ಲಿ ನೀರಿನ ಸಮಸ್ಯೆಯನ್ನು ತಕ್ಕ ಮಟ್ಟಿಗೆ ದೂರ ಮಾಡಬಹುದು.
– ಇಂದಿರಾ ಬಿ.ಕೆ., ಅಧ್ಯಕ್ಷರು, ಸವಣೂರು ಗ್ರಾ.ಪಂ. ಪ್ರವೀಣ್ ಚೆನ್ನಾವರ