Advertisement

ಕುಡಿಯುವ ನೀರಿನ ಯೋಜನೆಗೆ ಚಾಲನೆ

04:42 PM Jan 12, 2020 | Team Udayavani |

ಕುಮಟಾ: ಹೆಗಡೆ ಸಮೀಪದ ಶಿವಪುರ ಗ್ರಾಮಕ್ಕೆ ಜಿಪಂ ಅನುದಾನದಡಿ ಮಂಜೂರಾದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಯೋಜನೆಕಾಮಗಾರಿ ಮುಕ್ತಾಯಗೊಂಡಿದ್ದು, ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಟ್ಟರು.

Advertisement

ನಂತರ ಮಾತನಾಡಿದ ಅವರು, ಶಿವಪುರದಲ್ಲಿ 75 ಕುಟುಂಬಗಳಿದ್ದು, ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿತ್ತು. ಈ ಸಮಸ್ಯೆ ಪರಿಹರಿಸಿಕೊಡುವಂತೆ ಗ್ರಾಮಸ್ಥರು ನನಗೆ ಮನವಿ ಮಾಡಿದ್ದರು. ಜಿ.ಪಂ ಕುಡಿಯುವ ನೀರು ಸರಬರಾಜು ಯೋಜನೆಯಡಿ 10 ಲಕ್ಷ ರೂ.ಗಳನ್ನು ಮಂಜೂರಿ ಮಾಡಿಸಿ, ಕಾಮಗಾರಿ ಕೂಡ ಪೂರ್ಣಗೊಂಡಿದೆ. ಪ್ರತಿ ಮನೆಗೂ ನಳದ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಇಲ್ಲಿನ ಜನತೆಗೆ ನೀರಿನ ಸಮಸ್ಯೆ ಪರಿಹರಿಸಲಾಗಿದೆ ಎಂದರು.

ಹೆಗಡೆ ಗ್ರಾ.ಪಂ ಸದಸ್ಯರಾದ ಬಿ.ಜಿ. ಶಾನಭಾಗ, ಜಯಾ ಮುಕ್ರಿ, ನೀರಾವರಿ ಇಲಾಖೆ ಅಭಿಯಂತರ ವೈ.ಎನ್‌. ಬೋವಿ, ಗ್ರಾಪಂ ಕಾರ್ಯದರ್ಶಿಮುರಳಿ ನಾಯ್ಕ, ಪ್ರಮುಖರಾದ ಉದಯ ಮಡಿವಾಳ, ಸುರೇಶ ಪಟಗಾರ, ವಿಷ್ಣು ಮುಕ್ರಿ, ದೇವಿ ಗೌಡ, ಶ್ವೇತಾ, ಛಾಯಾ ಆಚಾರಿ, ಆಶಾ ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next