Advertisement

ಜನರಿಗೆ ಕಲುಷಿತ ಕೆರೆ ನೀರೇ ಗತಿ, ರೋಗ ಬಂದರೆ ಯಾರು ಹೊಣೆ?

12:23 PM Apr 12, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪಿಯ ಕುಂದಕೆರೆ ವಲಯಕ್ಕೆಸೇರಿದ ಕಾಡಂಚಿನ ಗ್ರಾಮವಾದ ‘ಉಪಕಾರ ಕಾಲೋನಿ’ಯಲ್ಲಿ ನೀರಿಗೆ ಹಾಹಾಕಾರಉಂಟಾಗಿದ್ದು, ಇಲ್ಲಿನ ಜನರು ಕೆರೆ-ಕಟ್ಟೆಗಳಿಂದಕಲುಷಿತ ನೀರು ತಂದು ಕುಡಿಯುವ ಪರಿಸ್ಥಿತಿತಲೆದೋರಿದೆ. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.ಆದರೆ, ಇದೇ ನೀರೇ ಜನರು ವಿಧಿಯಲ್ಲದೇ ಬಳಸುವಂತಾಗಿದೆ.

Advertisement

ಬಂಡೀಪುರ ವ್ಯಾಪ್ತಿಯ ಕುಂದಕೆರೆ ವಲಯಕ್ಕೆಸೇರಿದ ಕೊನೆಯ ಕಾಡಂಚಿನ ಗ್ರಾಮ ಇದಾಗಿದ್ದು,ಸುಮಾರು 70 ರಿಂದ 80 ಜೇನು ಕುರುಬರಮನೆಗಳಿವೆ. 200 ರಿಂದ 250 ಜನಸಂಖ್ಯೆಹೊಂದಿದ್ದರೂ ಇಲ್ಲಿಗೆ ನೀರು ಪೂರೈಸಲು ಒಂದುಕೊಳವೆ ಬಾವಿ ಇಲ್ಲ. ಇದರ ಬಗ್ಗೆ ಅರಿತಿದ್ದರೂಕ್ಷೇತ್ರದ ಶಾಸಕ ನಿರಂಜನಕುಮಾರ್‌,ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

ಒಂದೂವರೆ ಕಿ.ಮೀ. ದೂರದಿಂದ ನೀರು:ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆಉಪಕಾರ ಕಾಲೋನಿ ಒಳಪಡಲಿದ್ದು, ಇಲ್ಲಿನಜನರು ಕುಡಿಯುವ ನೀರಿಗಾಗಿ ಒಂದೂವರೆಕಿ.ಮೀ. ದೂರದಿಂದ ಹೊತ್ತು ತರಬೇಕಿದೆ.ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಮಾಡುವುದು ಅನಿವಾರ್ಯವಾಗಿದ್ದರೂ ಸಹಪಂಚಾಯಿತಿಯಲ್ಲಿ ಹಣದ ಸಮಸ್ಯೆಯಿಂದಟ್ಯಾಂಕರ್‌ ನೀರು ಸರಬರಾಜು ಆಗದೆ ಜನರು ಪರದಾಡುವಂತಾಗಿದೆ.

ಕೆರೆ-ಕಟ್ಟೆ ನೀರು ಬಳಕೆ: ಗ್ರಾಮದಲ್ಲಿ ಈಗಾಗಲೇ ಅಳವಡಿಸಿರುವ ಪೈಪ್‌ಲೈನ್‌ ನಲ್ಲಿಗಳು,ತೊಂಬೆಗಳಲ್ಲಿ ನೀರು ಬಾರದ ಕಾರಣ ಜನರು ಕಾಡು ಪ್ರಾಣಿಗಳು ಕುಡಿಯುವ ನೀರನ್ನು ಕೆರೆ-ಕಟ್ಟೆಗಳಿಂದ ತಂದು ಕುಡಿಯುವ ಪರಿಸ್ಥಿತಿನಿರ್ಮಾಣವಾಗಿದೆ. ಈ ಬಗ್ಗೆ ಪಿಡಿಒ ರವಿಚಂದ್ರಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದುಸ್ಥಳೀಯರು ಅಳಲು ತೋಡಿಕೊಂಡರು.

ಕಾಲೋನಿಗೆ ಟ್ಯಾಂಕರ್‌ ಮೂಲಕ ತರುವ ನೀರು ಸ್ಥಗಿತವಾದರೆ ಅಕ್ಕಪಕ್ಕದ ಜಮೀನುಮಾಲಿಕರಿಂದ ಕಾಡಿಬೇಡಿ ನೀರು ತರಬೇಕಿದೆ.ಹಗಲಿನ ವೇಳೆ ನೀರು ತರಲು ಹೋದರೆ ಕೂಲಿಇಲ್ಲ, ಕೂಲಿಗೆ ಹೋದರೆ ನೀರಿಲ್ಲ ಎನ್ನುವಂತಾಗಿದೆ.ಇನ್ನು ತ್ರಿಫೇಸ್‌ ಕರೆಂಟ್‌ ಮಧ್ಯರಾತ್ರಿ ಇದ್ದಾಗವಿಷ ಜಂತು, ಕಾಡುಪ್ರಾಣಿಗಳ ಭಯದಲ್ಲಿ ನಲುಗುವಂತಾಗಿದೆ. ಬೇಸಿಗೆ ಆರಂಭದ ದಿನಗಳಲ್ಲೇ ಸಮಸ್ಯೆ ಮಿತಿಮೀರಿದ್ದು, ಮುಂದಿನ ದಿನಗಳನ್ನು ಹೇಗೆಎದುರಿಸುವುದು ಎನ್ನುವ ಆತಂಕ ಇಲ್ಲಿನ ನಿವಾಸಿಗಳಲ್ಲಿ ಮನೆ ಮಾಡಿದೆ.

Advertisement

ಉಪಕಾರ ಕಾಲೋನಿಯಲ್ಲಿ ನೀರಿನಸಮಸ್ಯೆ ಕುರಿತು ಅಧಿಕಾರಿಗಳಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಆಗಮಿಸಿ ಮತ ಕೇಳುತ್ತಾರೆ.ನಂತರ ಇತ್ತ ಸುಳಿಯುವುದು ಇಲ್ಲ. ನಮ್ಮಸಮಸ್ಯೆ ಆಲಿಸುವುದಿಲ್ಲ. ಇಷ್ಟೆಲ್ಲ ಮಾಡುವಬದಲು ವಿಷ ಕೊಟ್ಟು ಬಿಡಿ ಎಲ್ಲರೂ ಸತ್ತು ಹೋಗುತ್ತೇವೆ. – ದೇವಮ್ಮ, ಉಪಕಾರ ಕಾಲೋನಿ ನಿವಾಸಿ

ಬಹುಗ್ರಾಮ ಕುಡಿಯುವ ನೀರುಯೋಜನೆಯಡಿ ಉಪಕಾರಕಾಲೋನಿಯಲ್ಲಿ ಸೇರಿದ್ದರೂ ಸಹ ನೀರಿನ ಸಮಸ್ಯೆ ತಲೆದೊರಿದೆ. ಈ ಬಗ್ಗೆ ಶೀಘ್ರಪರಿಶೀಲಿಸಿ, ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಸಿಲಾಗುವುದು. – ಶ್ರೀಕಂಠರಾಜೇ ಅರಸ್‌, ತಾಪಂ ಇಒ

 

– ಬಸವರಾಜು ಎಸ್‌.ಹಂಗಳೆ

Advertisement

Udayavani is now on Telegram. Click here to join our channel and stay updated with the latest news.

Next