Advertisement
ತಾಲೂಕಿನ 91 ಗ್ರಾಮಗಳ ಪೈಕಿ ಎರಡು ಗ್ರಾಮಗಳಲ್ಲಿನೀರಿನ ಸಮಸ್ಯೆ ವಿಪರೀತವಾಗಿದೆ. ಲಿಂಗನಬಂಡಿ, ಹುಣಸಿಹಾಳ ತಾಂಡಾ ಖಾಯಂ ನೀರಿನ ಸಮಸ್ಯೆ ಎದುರಿಸುತ್ತಿವೆ. ಕಳೆದ ವರ್ಷದಿಂದ ಈ ಗ್ರಾಮಗಳಿಗೆ ಖಾಸಗಿ ಬೋರ್ ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಶಾಶ್ವತಪರಿಹಾರ ಈ ಗ್ರಾಮಗಳಿಗೆ ಸಿಕ್ಕಿಲ್ಲ.
Related Articles
Advertisement
2018-19ರಲ್ಲಿ 30ಕ್ಕೂ ಅಧಿಕ ಗ್ರಾಮಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದವು. ಪ್ರಸಕ್ತ ವರ್ಷದಲ್ಲಿ ಕುಡಿವನೀರಿನ ಸಮಸ್ಯೆ ಕಡಿಮೆಯಾಗಿದೆ. ಪ್ರತಿವರ್ಷ ಮಾರ್ಚ್,ಏಪ್ರಿಲ್ ತಿಂಗಳೊಳಗೆ ಗ್ರಾಪಂ, ತಾಪಂ ಕಚೇರಿಗಳಮುಂದೆ ಜನತೆ ಕುಡಿವ ನೀರಿಗಾಗಿ ಪ್ರತಿಭಟನೆನಡೆಸುತ್ತಿದ್ದ ಪ್ರಕರಣಗಳು ಕಂಡು ಬರುತ್ತಿದ್ದವು. ಆದರೆ ಇದೀಗ ಪ್ರತಿಭಟನೆ ಕಡಿಮೆಯಾಗಿವೆ.
4 ಬೋರ್‌ವೆಲ್ ಸ್ಥಗಿತ: ಸ್ಥಳೀಯ ಯಲಬುರ್ಗಾಪಟ್ಟಣದಲ್ಲಿ ಒಟ್ಟು 38 ಬೋರ್‌ವೆಲ್‌ಗಳಿದ್ದು 4 ಕಾರ್ಯನಿರ್ವಸುತ್ತಿಲ್ಲ. ಅವುಗಳನ್ನು ದುರಸ್ತಿಗೊಳಿಸಬೇಕಿದೆ.ಹಿರೇಹಳ್ಳ ಡ್ಯಾಂನಿಂದ ಪಟ್ಟಣ ಹಾಗೂ ಕೆಲ ಗ್ರಾಮಗಳಿಗೆನೀರು ಪೂರೈಕೆಯಾಗುತ್ತಿದೆ. ಪಪಂ ಸಿಬ್ಬಂದಿ ಸರಿಯಾಗಿಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ಪಟ್ಟಣ ನಿವಾಸಿಗಳ ಆರೋಪವಾಗಿದೆ.
ಜಾನುವಾರು ಸ್ಥಿತಿಗತಿ: ತಾಲೂಕಿನಲ್ಲಿ 52 ಸಾವಿರಜಾನುವಾರುಗಳು, 1,38,000 ಕುರಿ, ಮೇಕೆಗಳಿವೆ.ಕಳೆದ ಹಿಂಗಾರು ಉತ್ತಮವಾಗಿ ಸುರಿದ ಪರಿಣಾಮಬೆಳೆಗಳು ಚೆನ್ನಾಗಿ ಬಂದಿವೆ. ತಾಲೂಕಿನಾದ್ಯಂತಜೋಳದ ಮೇವು, ಕಡಲೆ ಹೊಟ್ಟು, ಶೇಂಗಾ ಹೊಟ್ಟುಸಾಕಷ್ಟಿದ್ದು, ಪ್ರಸಕ್ತ ವರ್ಷದಲ್ಲಿ ಮೇವಿಗೆ ಯಾವುದೇ ಬರವಿಲ್ಲ ಎನ್ನಬಹುದು. ಬಂಡಿಹಾಳ ಗ್ರಾಮದಲ್ಲಿ ಬೋರ್ ವೆಲ್ ಕೊರೆಸಬೇಕು. ಕುಡಿವ ನೀರಿಗಾಗಿ ತೊಂಡಿಹಾಳಕ್ಕೆ ಹೋಗಬೇಕಿದೆ.ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು. ಈ ಹಿಂದೆ ಗ್ರಾಮದಲ್ಲಿಬೇಕಾಬಿಟ್ಟಿ ಕಳಪೆ ಪೈಪ್‌ಲೈನ್ ಮಾಡಲಾಗಿದೆ. – ರಾಮನಗೌಡ ಮಳಗೌಡ್ರ ಬಂಡಿಹಾಳ ಗ್ರಾಮಸ್ಥ
ತಾಲೂಕಿನಲ್ಲಿ ಅಂರ್ತಜಲ ಹೆಚ್ಚಳಕ್ಕೆ ಪೂರಕವಾದ ಕೆರೆ, ಕಟ್ಟೆ, ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ.ಕಳೆದ ಬಾರಿ ಉತ್ತಮ ಮಳೆಯಾಗಿದ್ದರಿಂದ ತಾಲೂಕಿನಲ್ಲಿನೀರಿನ ಸಮಸ್ಯೆಯಾಗಿಲ್ಲ. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಕಂಡುಬಂದರೆ ತಕ್ಷಣವೇ ಸ್ಪಂದಿಸುವಂತೆತಾಲೂಕಾಡಳಿತಕ್ಕೆ ಸೂಚಿಸಿದ್ದೇನೆ. ಇತರೆ ತಾಲೂಕುಗುಳಿಗೆ ಹೋಲಿಸಿದರೆ ನಮ್ಮ ತಾಲೂಕಿನಲ್ಲಿ ನೀರಿನ ಸಮಸ್ಯೆ ಇಲ್ಲ, – ಹಾಲಪ್ಪ ಆಚಾರ, ಯಲಬುರ್ಗಾ ಶಾಸಕ
ಕೆಲ ಗ್ರಾಮಗಳಲ್ಲಿ ಮಾತ್ರ ನೀರಿನಸಮಸ್ಯೆ ಇದೆ. ಸಮಸ್ಯೆ ಕಂಡುಬಂದರೆತಕ್ಷಣ ಸ್ಪಂದಿಸಿ ಸಮಸ್ಯೆ ನೀಗಿಸುತ್ತೇವೆ. ಶುದ್ಧಕುಡಿವ ನೀರಿನ ಘಟಕಗಳು ಚಾಲ್ತಿಯಲ್ಲಿವೆ.ಕೆಲ ಘಟಕಗಳು ಕೆಟ್ಟಿದ್ದು ಶೀಘ್ರದಲ್ಲಿ ದುರಸ್ತಿಗೊಳಿಸಲಾಗುತ್ತದೆ. ನೀರಿನ ಸಮಸ್ಯೆನಿವಾರಣೆಗೆ ತಾಲೂಕಡಳಿತ ಸಿದ್ಧವಿದೆ. – ಡಾ| ಜಯರಾಂ ಚವ್ಹಾಣ, ತಾಪಂ ಇಒ
–ಮಲ್ಲಪ್ಪ ಮಾಟರಂಗಿ