ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಸಮೀಪದ ದೊಡ್ಡಬ್ಬಿಗೆರೆ ಗ್ರಾಮದಲ್ಲಿ (ಮಾದಿಗ)ದಲಿತರ ಬಡಾವಣೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಸುಮಾರು 2 ತಿಂಗಳಿನಿಂದ ನೀರಿಗಾಗಿ ದಲಿತ ಕೇರಿಯ ಮಹಿಳೆಯರು ದೂರದ ಕೆರೆ ನೀರನ್ನೇ ಬಳಕೆಗಾಗಿ ಉಪಯೋಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯ ಗ್ರಾಮಪಂಚಾಯಿತಿ ಪಿಡಿಓಗೆ ಹಲವು ಬಾರೀ ಮನವಿ ಮಾಡಿಕೊಂಡರು,ಅಸ್ಪೃಶ್ಯ ರು ಎಂಬ ಕಾರಣದಿಂದ ಇವರ ಸಮಸ್ಯೆಗಳ ಕಡೆ ಗಮನಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ,,ಇನ್ನು ಜನ ಪ್ರತಿನಿಧಿಗಳು ಈ ಕೇರಿಯ ಕಡೆ ತಲೆ ಹಾಕಿ ಕೂಡ ಮಲಗುವುದಿಲ್ಲ, ದೊಡ್ಡಬ್ಬಿಗೆರೆ ಗ್ರಾಮದ ಬಾವಿಗೆ ನೀರು ಬಿಡುತ್ತಿರುವ ನೀರಗಂಟಿ ದಲಿತರ ಕೇರಿಯ ಮಿನಿಟ್ಯಾಂಕ್ ಗೆ ನೀರು ಬಿಡಲು ಆಗುವುದಿಲ್ಲ, ನನಗೆ ಯಾರು ಹೇಳಿಲ್ಲ, ನೀವು ಎಲ್ಲಿಯಾದರೂ ನೀರು ತಂದ್ಕೊಂಡು ಜೀವನ ಮಾಡಿ ಎಂದು ಅಸಡ್ಡೆಯ ಉತ್ತರ ನೀಡುತ್ತಾನೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆದಿ ಕರ್ನಾಟಕ ಜನಾಂಗದವರು ಎಂಬ ಒಂದೇ ಕಾರಣದಿಂದ ಅಧಿಕಾರಿಗಳು, ಜನ ಪ್ರತಿನಿಧಿಗಳು ನಿರ್ಲಕ್ಷಿಸುತ್ತಿದ್ದಾರೆ, ಇಲ್ಲಿನ ರೋಗರುಜೀನ, ಸಾವುನೋವುಗಳಿಗೆ ಇವರೇ ಹೊಣೆ, ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಕೇರಿಯ ಎಲ್ಲಾ ಕುಟುಂಬದವರು, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಯವರ ಮೊರೆ ಹೋಗಬೇಕಾಗುತ್ತದೆ, ಚುನಾವಣಾ ವೇಳೆಯಲ್ಲಿ ಅಭಿವ್ರದ್ದಿಗಳ ಆಶ್ವಾಸನೆಯ ಸುರಿಮಳೆ ಸುರಿಸುವ ಜನ ಪ್ರತಿನಿಧಿಗಳು ನಂತರ ಸತ್ತರೆ ಸಾಯಲಿ ಎಂದು ಇಲ್ಲಿನ ಸಮಸ್ಯೆಗಳ ಕಡೆ ತಿರುಗಿ ನೋಡಲ್ಲ, ಚರಂಡಿಗಳು ಮಣ್ಣು, ಕೆಸರು ತುಂಬಿ ಗಬ್ಬು ನಾರುತ್ತಿವೆ,ಸೊಳ್ಳೆ ಸರಿಸೃಪಗಳ ಹಾವಳಿಯಿಂದ ಏರಿಯಾದಲ್ಲಿ ರೋಗಗಳ ಭಾದೆ ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆದೇಶದ ಪ್ರಕಾರ ಪಿಡಿಓಗಳು ಅವರು ಕಾರ್ಯ ನಿರ್ವಹಿಸುವ ಕೇಂದ್ರ ಸ್ಥಾನದಲ್ಲಿ ವಾಸ ಮಾಡಬೇಕು,,ಆದರೆ ಇಲ್ಲಿನ ಪಿಡಿಓ 3 ದಿನಕೊಮ್ಮೆ ಆಫೀಸ್ಗೆ ಬರ್ತಾರೆ,, ಅಷ್ಟಾದರೂ ದಲಿತರ ಏರಿಯಾ ಕಡೆ ಬರೋದಿಲ್ಲ, ಇಲ್ಲಿಗೆ ಬರುವ ಚಾನೆಲ್ ನೀರನ್ನು ಬಿಟ್ಟಾಗ ನಾವು ನೀರು ತರಬೇಕು, ಇಲ್ಲವಾದರೆ 2 ತಿಂಗಳಾದರೂ ನೀರು ಬಿಡೊಲ್ಲ, ಗ್ರಾಮದ ಇನ್ನುಳಿದ ಕಡೆ ದಿನದ 24ಗಂಟೆ ನೀರು ಬರುತ್ತದೆ, ನಮಗೆ ಕೆರೆ ನೀರೇ ಗತಿ, ಮಿನಿಟ್ಯಾಂಕ್ ಹೊಡೆದು ತೂತು ಬಿದ್ದಿದೆ, ಅದರ ಸುತ್ತ ಕಸದ ರಾಶಿ ಬಿದ್ದಿದೆ, ಇದನ್ನೂ ಸರಿಪಡಿಸಲು ಪಂಚಾಯಿತಿಯಲ್ಲಿ ಅನುದಾನ,ಹಣವಿಲ್ಲವೇ,ಜಾನುವಾರುಗಳ ಸ್ಥಿತಿ ನೀರಿಲ್ಲದೇ ಸೊರಗಿ ಸಾಯುವ ಸ್ಥಿತಿಗೆ ತಲುಪಿವೆ, ಇನ್ನೇನಿದ್ದರು ನಾವುಗಳು ಸಾಯಬೇಕಷ್ಟೆ, ಎಂದು ದಲಿತ ಕೇರಿಯ ಮಹಿಳೆಯರು, ಪುರುಷರು ಗ್ರಾಮಾಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.