Advertisement
ಟಗರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಏಳು ಗ್ರಾಮಗಳ ಪೈಕಿ ಆಲಹಳ್ಳಿ ಗ್ರಾಮ ಎಲ್ಲಾ ಸಮಾಜವನ್ನು ಹೊಂದಿರುವ ಬಹುದೊಡ್ಡ ಗ್ರಾಮವಾಗಿದೆ. ಗ್ರಾಮದಲ್ಲಿ ಸುಮಾರು 800ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ಗ್ರಾಮಸ್ಥರು ದೈನಂದಿನ ವ್ಯವಸಾಯ ಮತ್ತು ಕೂಲಿ ಇವರ ಕಾಯಕವಾಗಿದೆ.
Related Articles
Advertisement
ಗ್ರಾಮದಲ್ಲಿ ಕುಡಿಯುವ ನೀರು ನಲ್ಲಿಗಳ ಪೈಪ್‌ಗ್ಳ ಮೂಲಕ ಸಣ್ಣದಾಗಿ ಸ್ವಲ್ಪ ಹೊತ್ತು ಮಾತ್ರ ಬರುತ್ತದೆ. ನಂತರ ನೀರು ನಿಂತು ಹೋದ ಪಕ್ಷದಲ್ಲಿ ಮತ್ತೆ ನೀರು ಕಾಣಬೇಕಾದರೆ ಮಾರನೇ ದಿನವನ್ನೇ ಕಾಯಬೇಕಾಗಿದೆ. ನೀರು ದಿನಬಳಕೆಗೆ ಮತ್ತು ಕುಡಿಯಲು ಸಾಲದೆ ಅಪಾರ ಸಂಕಷ್ಟವನ್ನು ಎದುರಿಸುವಂತೆ ನೀರಿನ ಸಮಸ್ಯೆ ತಲೆದೋರಿದೆ ಎಂದು ಗ್ರಾಮದ ವೃದ್ಧ ಮಹಿಳೆ ಮಾದೇವಮ್ಮ ಅಳಲು.
ಶೌಚಾಲಯಕ್ಕೂ ನೀರಿಲ್ಲ: ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಸಮಸ್ಯೆ ಒಂದೆಡೆಯಾದರೆ, ಮತ್ತೂಂದೆಡೆ ಜಾನುವಾರುಗಳಿಗೂ ನೀರು ಇಲ್ಲದೇ ಪಕ್ಕದ ಗ್ರಾಮಗಳಿಗೆ ಹೋಗಿ ನೀರು ತಂದು ಜಾನುವಾರುಗಳಿಗೆ ನೀಡುವಂತಾಗಿದೆ. ಸರ್ಕಾರ ಶೌಚಾಲಯಗಳನ್ನು ಬಳಸಬೇಕು ಎಂದು ಅಪಾರ ಪ್ರಚಾರದಲ್ಲಿ ತೊಡಗಿರುವ ಜಿಲ್ಲಾಡಳಿತ ಶೌಚಾಲಯಕ್ಕೂ ನೀರಿನ ಬರ ಎದುರಾಗಿದೆ. ಗ್ರಾಮಸ್ಥರು ಜಮೀನುಗಳಲ್ಲಿರುವ ಪಂಪ್‌ಸೆಟ್‌ಗಳಲ್ಲಿ ಬರುವ ನೀರನ್ನೇ ಬಳಕೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ಆಲಯ್ಯ ದೂರಿದ್ದಾರೆ.
ಜಲ ಸಂಗ್ರಹಕ್ಕೆ ಗ್ರಾಪಂ ವಿಫಲ: ಗ್ರಾಮದಲ್ಲಿ ಕೆರೆಯೊಂದಿದ್ದು, ಕೆರೆಯಲ್ಲಿರುವ ಹೂಳನ್ನು ಇದುವ ರೆವಿಗೂ ಎತ್ತಿಸಿಲ್ಲ. ಕೆರೆಗೆ ತಡೆಗೋಡೆಗಳನ್ನು ನಿರ್ಮಾಣ ಮಾಡಿ, ಕೆರೆಯಲ್ಲಿ ಅಂತರ್ಜಲ ಶೇಖರಣೆ ಮಾಡುವಲ್ಲಿ ಗ್ರಾಮ ಪಂಚಾಯ್ತಿ ಸಂಪೂರ್ಣ ವಿಫಲವಾಗಿದೆ. ಕೆರೆಯು ಮಣ್ಣುಗಳಿಂದ ಮತ್ತು ಗಿಡಗಂಟೆಗಳಿಂದ ಆವೃತಗೊಳ್ಳುತ್ತಿದೆ. ಕೂಡಲೇ ಅಧಿಕಾರಿಗಳು ಕೆರೆಯನ್ನು ಅಭಿವೃದ್ಧಿಪಡಿಸಿ ಕೆರೆಗೆ ನೀರು ಭರ್ತಿಗೊಳಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕಾಗಿದೆ.
● ಡಿ.ನಟರಾಜು