Advertisement
ಕುಡಿಯುವ ನೀರಿನ ಕುರಿತಂತೆ ಈಗಾಗಲೇ ಮೂರು ಬಾರಿ ಸಮಾಲೋಚನೆ ನಡೆದಿದೆ. ಮಂಗಳೂರು ನಗರ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟು, ಹಿನ್ನೀರಿನ ಇತರ ಮೂಲಗಳು, ಸಣ್ಣ ಅಣೆಕಟ್ಟೆಗಳು, ಬಹುಗ್ರಾಮ ಕುಡಿಯುವ ನೀರಿನ ವಿವಿಧ ಯೋಜನೆಗಳು, ಹೊಸ ಯೋಜನೆಗಳನ್ನು ಗಣನೆಗೆ ತೆಗೆದುಕೊಂಡು ಹೆಚ್ಚುವರಿ ನೀರಿನ ಮಟ್ಟವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಈ ಸಮಿತಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ತುಂಬೆ ಸಮೀಪದ ಹರೇಕಳ ಡ್ಯಾಂನಲ್ಲಿ ಸಾಕಷ್ಟು ನೀರು ಸಂಗ್ರಹಿಸಲು ಅವಕಾಶವಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಪ್ರಸ್ತುತ ತುಂಬೆಯಲ್ಲಿ ನದಿಯ ಒಳಹರಿವು ನಿಂತಾಗ ಅಲ್ಲಿ ಸಂಗ್ರಹವಾಗುವ ನೀರು ನಗರಕ್ಕೆ ಸುಮಾರು 50 ದಿನಗಳಿಗೆ ಪೂರೈಕೆ ಮಾಡಲು ಸಾಧ್ಯವಿದೆ. ಈ ಎಲ್ಲಾ ಅಂಶಗಳ ಬಗ್ಗೆ ಸ್ಥೂಲವಾದ ವರದಿಯನ್ನು ತಿಂಗಳೊಳಗೆ ಈ ಸಮಿತಿ ಸಿದ್ಧಪಡಿಸಲಿದೆ ಎಂದರು.
ಸದ್ಯ ಸಿಆರ್‌ಝಡ್ ವ್ಯಾಪ್ತಿ ಯಲ್ಲಿ ಎನ್‌ಜಿಟಿ ಆದೇಶದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಮರಳುಗಾರಿಕೆಗೆ ನಿರ್ಬಂಧವಿದೆ. ನಾನ್ ಸಿಆರ್‌ಝಡ್‌ನಡಿ ಸಾಕಷ್ಟು ಮರಳು ಲಭ್ಯವಿದ್ದು, 25 ಮಂದಿ ಟೆಂಡರುದಾರರಿಗೆ ಮರಳು ತೆಗೆಯಲು 25 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಅದರಿಂದ ನಿಗದಿತ ಶೇ. 50 ಮರಳನ್ನು ಕೂಡ ಇನ್ನೂ ತೆರವುಗೊಳಿಸುವ ಕಾರ್ಯ ನಡೆದಿಲ್ಲ. ಹಾಗಾಗಿ ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಸಾಕಷ್ಟು ಮರಳಿದೆ. ಗುತ್ತಿಗೆದಾರರಿಗೆ ತೆರವು ಗೊಳಿಸಿದ ಮರಳನ್ನು ಸಾಗಿಸುವ ನಿಟ್ಟಿನಲ್ಲಿ ತಮ್ಮ ಸ್ಟಾಕ್‌ಯಾರ್ಡ್ ಬಳಿ ವೇ ಬ್ರಿಡ್ಜ್ ಅಳವಡಿಸುವಂತೆ ತಿಳಿಸಲಾಗಿತ್ತು. ಆದರೆ ಅಳವಡಿಸದ ಕಾರಣ ಆರಂಭದಲ್ಲಿ ಕೆಲ ದಿನಗಳ ಕಾಲ ತೊಡಕಾಗಿತ್ತು. ಬಳಿಕ ಒಂದು ತಿಂಗಳ ಕಾಲಾವಕಾಶ ನೀಡಿ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇದನ್ನೂ ಓದಿ: Malpe: ಈಡೇರದ 5 ದಶಕಗಳ ಬೇಡಿಕೆ, ನಿತ್ಯ ಟ್ರಾಫಿಕ್ ಜಾಮ್ ಕಿರಿಕಿರಿ