Advertisement

ಮುಗ್ಧ ಜನರ ದಾರಿ ತಪ್ಪಿಸಬೇಡಿ: ಪಾಟೀಲ

04:03 PM Mar 13, 2021 | Team Udayavani |

ಹೊಳೆಆಲೂರ: ಸಮೀಪದ ಗಾಡಗೋಳಿ ನವ ಗ್ರಾಮದಲ್ಲಿ ಮನೆ ಹಂಚಿಕೆ ಸಂಬಂಧಸಾರ್ವಜನಿಕರು ಬುಧವಾರ ರೋಣದಲ್ಲಿಸತ್ಯಾಗ್ರಹ ನಡೆಸಿರುವುದರ ಹಿಂದೆ ಕ್ಷೇತ್ರದ ವಿರೋಧ ಪಕ್ಷದ ನಾಯಕರ ಕೈವಾಡವಿದೆ ಎಂದು ಸಚಿವ ಸಿ.ಸಿ.ಪಾಟೀಲ ಗರಂ ಆದ ಘಟನೆ ಗಾಡಗೋಳಿ ಗ್ರಾಮದಲ್ಲಿ ಶುಕ್ರವಾರ ನಡೆಯಿತು.

Advertisement

ಮೆಣಸಗಿ ಗ್ರಾಮದಲ್ಲಿ 98.18 ಲಕ್ಷ, ಹೊಳೆಮಣ್ಣೂರ ಗ್ರಾಮದಲ್ಲಿ 58.12 ಲಕ್ಷ ಹಾಗೂ ಗಾಡಗೋಳಿ 45.94 ಲಕ್ಷ ವೆಚ್ಚದಲ್ಲಿ ಜಲ ಜೀವನ್‌ ಮಷಿನ್‌ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಸಚಿವರು ಮಾತನಾಡಿದರು.

2009ರಲ್ಲಿ ಸಂಭವಿಸಿದ ಮಲಪ್ರಭಾ  ಪ್ರವಾಹದಲ್ಲಿ ಮನೆ ಕಳೆದುಕೊಂಡ 14ಗ್ರಾಮಗಳ ಜನರಿಗೆ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮನೆ ನಿರ್ಮಿಸಿ ಹಂಚಿಕೆ ಮಾಡಿದೆ. ಆದರೆ ಸ್ಥಳೀಯ ಕಾರಣದಿಂದ ಗಾಡಗೋಳಿ ಹಾಗೂಹೊಳೆಮಣ್ಣೂರ ಗ್ರಾಮದಲ್ಲಿ ಹಂಚಿಕೆ ಕಾರ್ಯನನೆಗುದಿಗೆ ಬಿದ್ದಿತ್ತು. ನಂತರ ಐದು ವರ್ಷ ಅಧಿ  ಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷದ ನಿಮಗೆ ಮನೆ ಹಂಚಿಕೆ ಮಾಡುವುದನ್ನು ಬಿಟ್ಟು ಈಗ ತಾಪಂ, ಜಿಪಂ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಗ್ಧ ಜನರನ್ನು ದಾರಿ ತಪ್ಪಿಸಿ ನೀವೇ ಸತ್ಯಾಗ್ರಹಕ್ಕೆ ಪ್ರೇರೇಪಿಸಿ ನಂತರ ಸಮಾಧಾನಮಾಡುವ ನಾಟಕ ಮಾಡುತ್ತೀರಿ. ಇಂತಹರಾಜಕಾರಣ ನನ್ನ ಮುಂದೆ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನೀವು ರಾಜಕಾರಣ ಮಾಡುತ್ತಾ ಹೋಗಿ, ನಾನು ಅಭಿವೃದ್ಧಿ ಕೆಲಸ ಮಾಡುತ್ತಾ ಸಾಗುತ್ತೇನೆಎಂದು ಹೆಸರು ಹೇಳದೆ ಮಾಜಿ ಶಾಸಕರಮೇಲೆ ಹರಿಹಾಯ್ದರು. ಮಾ.31ರ ವರೆಗೆ ಅಧಿವೇಶನದಲ್ಲಿ ಭಾಗವಹಿಸುತ್ತೇನೆ. ನಂತರ ಏಪ್ರಿಲ್ ಮೂದಲನೆಯ ವಾರ ಗಾಡಗೋಳಿ ಹಾಗೂ ಹೊಳೆಮಣ್ಣೂರ ಗ್ರಾಮಕ್ಕೆ ಸ್ವತಃನಾನೇ ಆಗಮಿಸಿ ಅ ಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಸಭೆ ಮಾಡಿ 10 ವರ್ಷಗಳಮನೆ ಹಂಚಿಕೆಯ ಈ ಕಗ್ಗಂಟಿಗೆ ನ್ಯಾಯಯುತಮಂಗಳ ಹಾಡುತ್ತನೆ. ನಾನು ತಪ್ಪಿದರೆನರಗುಂದದ ನನ್ನ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ.ಪಂ, ಸದಸ್ಯಶಿವಕುಮಾರ ನೀಲಗುಂದ, ಬಿಜೆಪಿ ಜಿಲ್ಲಾಹಿಂದುಳಿದ ಮೊರ್ಚಾ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ಹೊಳೆಆಲೂರ ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಜಿಲ್ಲಾ ಕಿಸಾನ ರೈತ ಮೊರ್ಚಾ ಉಪಾಧ್ಯಕ್ಷ ಶಶಿಧರಗೌಡ ಪಾಟೀಲ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ಪಾಟೀಲ,ನಿಂಗಬಸು ಬಾಣದ, ಬಸವಂತಪ್ಪ ತಳವಾರ, ತಾ.ಪಂ. ಅಧ್ಯಕ್ಷೆ ಪ್ರೇಮಾ ನಾಯಕ, ಸದಸ್ಯ ಜಗದೀಶ ಬ್ಯಾಡಗಿ, ಎ.ಪಿ.ಕುಲಕರ್ಣಿ,ಸೋಮು ಹುಡೇದಮನಿ, ವೀರಸಂಗಯ್ಯ ಮೊಕಾಸಿಮಠ. ಗ್ರಾ.ಪಂ. ಅಧ್ಯಕ್ಷ ಲಿಂಗಬಸು ಅಂಗಡಿ ಇತರರು ಭಾಗವಹಿಸಿದ್ದರು.

Advertisement

 

ಹತ್ತು ಕುಟುಂಬಗಳಿಗೆ ತಕ್ಷಣ ಮನೆ ನೀಡಿ :

ಮೆಣಸಗಿ ಮೂಲ ಗ್ರಾಮದಲ್ಲಿ ನಮಗೆ ಯಾವುದೇ ಮನೆ ಇರಲಿಲ್ಲ. ಹೀಗಾಗಿ, ನಮ್ಮ ಹೆಸರಿನಲ್ಲಿಯಾವದೇ ಉತಾರ ಇಲ್ಲ. ಆದರೆ, ನವ ಗ್ರಾಮದಲ್ಲಿ 11 ವರ್ಷದಿಂದ ನಾವು ಬಂದು ನೆಲೆಸಿದ್ದು,ಗ್ರಾ.ಪಂ.ನವರು ನಮಗೆ ಮನೆ ಬಿಡಿ ಎಂದು ತಾಕೀತು ಮಾಡುತ್ತಿದ್ದಾರೆ. ನಿರ್ಗತಿಕರಾದ ನಾವು ಎಲ್ಲಿಹೋಗಬೇಕು ಎಂದು 10 ಜನರು ಸಚಿವರ ಮುಂದೆ ಬೇಡಿಕೊಂಡರು. ಅವರ ಮನವಿಗೆ ಸ್ಪಂದಿಸಿದ ಸಚಿವ ಸಿ.ಸಿ.ಪಾಟೀಲ, ಪಿಡಿಒ ಅವರನ್ನು ಸ್ಥಳಕ್ಕೆ ಕರೆಸಿ ನವ ಗ್ರಾಮದಲ್ಲಿ ಹೆಚ್ಚುವರಿಯಾಗಿರುವ 39 ಮನೆಗಳಲ್ಲಿ ಈ ಹತ್ತು ಕುಟುಂಬಗಳಿಗೆ ತಕ್ಷಣ ಮನೆ ನೀಡಿ ಎಂದು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next