Advertisement

ಘನ್ನಿಗಡ ಕುಡಿವ ನೀರಿನ ಯೋಜನೆ ಸ್ಥಳೀಯರಿಗೆ ಆಸರೆ ! ಯಗಚಿ ನದಿ ನೀರು ಪೂರೈಕೆಯಾದರೆ ಅನುಕೂಲ

08:32 PM Apr 09, 2021 | Team Udayavani |

ಅರಸೀಕೆರೆ: ಬರಗಾಲ ಪೀಡಿತ ಪ್ರದೇಶವಾದ ಅರಸೀಕೆರೆ ನಗರ ಪ್ರದೇಶ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸಮಸ್ಯೆಗಳು ಉಲ್ಬಣಗೊಳ್ಳು  ತ್ತಿದ್ದು, ಪ್ರತಿ ವರ್ಷವು ಕುಡಿವ ನೀರನ್ನು ಟ್ಯಾಂಕರ್‌ ಗಳಲ್ಲಿ ಪೂರೈಕೆ ಮಾಡಲು ಕೋಟ್ಯಂತರ ರೂ. ವ್ಯಯವಾಗುತ್ತಿತ್ತು. ಪ್ರ

Advertisement

ಸ್ತುತ ಸ್ಥಳೀಯ ನಾಯಕರ ಹೋರಾಟದ ಫ‌ಲವಾಗಿ ಹೇಮಾವತಿ ನದಿಮೂಲದ ಘನ್ನಿಗಡ ಕುಡಿ  ಯುವ ನೀರಿನ ಯೋಜನೆಯು ಅನುಷ್ಠಾನಗೊಂಡಿರುವ ಕಾರಣ ನಗರಸಭೆ ವ್ಯಾಪ್ತಿಯ 31 ವಾರ್ಡುಗಳಿಗೆ ಮೂರು ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ನಗರದ ನಾಗರಿಕರಿಗೆ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಅಂತೆಯೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದಿಂದ ಕ್ಷೇತ್ರದ ಕಣಕಟ್ಟೆ, ಬಾಣಾವರ ಹಾಗೂ ಕಸಬಾ ಹೋಬಳಿಯ 530 ಹಳ್ಳಿಗಳಿಗೆ ಹೇಮಾವತಿ ನದಿ ಮೂಲದ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನದ ಮೂಲಕ ನೀರು ಪೂರೈಕೆ ಆಗುತ್ತಿರುವ ಪರಿಣಾಮ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಕಾಡಲಾರದು.

ಬೇಲೂರು ವಿಧಾನಸಭಾ ಕ್ಷೇತ್ರದ ಜಾವಗಲ್‌ ಹೋಬಳಿಯ 72 ಗ್ರಾಮಗಳು ಅರಸೀಕೆರೆ ತಾಲೂಕಿಗೆ ಸೇರಿದ್ದು, ಅವುಗಳಿಗೆ ಯಗಚಿ ನದಿಮೂಲದಿಂದ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ  ಯನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೆ, ತಾಂತ್ರಿಕ ದೋಷದಿಂದ ಸರಿಯಾಗಿ ನೀರು ಪೂರೈಕೆ ಆಗದೆ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮಗಳಿಲ್ಲಿ ಈಗಾಗಲೇ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಲು ಎಲ್ಲಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲು ಸೂಚನೆ ನೀಡಿ ಸಾಕಷ್ಟು ಹಣವನ್ನು ನೀಡಲಾಗಿದೆ. ಜನರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗ್ರಾಮೀಣಾ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಂಚಿತಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next