Advertisement

ಹೊಸಕುಂದುವಾಡಕ್ಕೆ ತಿಂಗಳಿಗೊಮ್ಮೆ ಕುಡಿಯುವ ನೀರು

03:43 PM Jul 10, 2018 | Team Udayavani |

ದಾವಣಗೆರೆ: ಕುಡಿಯುವ ನೀರು ಸಮರ್ಪಕ ಪೂರೈಸಲು ಒತ್ತಾಯಿಸಿ ಹೊಸಕುಂದುವಾಡ ಗ್ರಾಮಸ್ಥರು ಸೋಮವಾರ ಖಾಲಿ ಕೊಡಗಳೊಂದಿಗೆ ಪ್ರತಿಭಟಿಸಿದ್ದಾರೆ.

Advertisement

ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಸಕುಂದವಾಡದಲ್ಲಿ 15 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿತ್ತು. ಇದೀಗ ಒಂದು ತಿಂಗಳು ಕಳೆದರೂ ನೀರು ಪೂರೈಸಿಲ್ಲ. ದಿನನಿತ್ಯ ನೀರಿಗಾಗಿ ಜನರು ಕಾಯುವಂತಾಗಿದೆ. ತಿಂಗಳಿಗೊಮ್ಮೆ ನೀರು ಬಿಟ್ಟರೂ ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಪಕ್ಕದಲ್ಲೇ ಕುಂದುವಾಡ ಕೆರೆ ಇದ್ದರೂ ಸಹ ಕೆರೆಯ ನೀರಿನ ಭಾಗ್ಯ ಮಾತ್ರ ಸಿಗದೆ ಪರದಾಡುವಂತಾಗಿದೆ. ಕುಡಿಯಲು ಸಹ ನೀರಿಲ್ಲದೆ ಜನ, ಜಾನುವಾರುಗಳು ತತ್ತರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಸಹ ನಿರ್ಲಕ್ಷ್ಯ ಮಾಡುತ್ತಾರೆ.

ಕುಂದುವಾಡ ಕೆರೆಯಿಂದ ಇಡೀ ದಾವಣಗೆರೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಪಕ್ಕದಲ್ಲಿಯೇ ಇರುವ ನಮಗೆ ಮಾತ್ರ ನೀರು ಕೊಡುತ್ತಿಲ್ಲ ಎಂದು ದೂರಿದರು.

ವಾರ್ಡ್‌ ಮೆಂಬರ್‌ ಗೆದ್ದ ಮೇಲೆ ಬಂದು ಹೋದರೆ ಹೊರತು ಇತ್ತ ಗಮನ ಹರಿಸಿಲ್ಲ. ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಕುಡಿಯುವ ನೀರಿಲ್ಲದೆ ಹೊಲಗಳಲ್ಲಿರುವ ಬೋರ್‌ಗಳಿಂದ ನೀರು ತಂದುಕೊಂಡು ಜೀವನ ನಡೆಸಲಾಗುತ್ತಿದೆ. ಮಳೆಗಾಲದಲ್ಲೂ ಸಹ ನೀರಿಗಾಗಿ ಪರದಾಡಬೇಕಾಗಿದೆ.

Advertisement

ಸಂಬಂಧಪಟ್ಟ ಅಧಿಕಾರಿಗಳು ಸಬೂಬು ಹೇಳಿ ಜಾರಿಕೊಳ್ಳುತ್ತಾರೆ. ದಾವಣಗೆರೆಯಲ್ಲಿ ವಾರಕ್ಕೆ ಎರಡು ದಿನ ಕುಡಿಯುವ ನೀರು ಬಿಡಲು ಸಿದ್ಧತೆ ನಡೆದರೂ ಹೊಸಕುಂದುವಾಡದಲ್ಲಿ ಒಂದು ತಿಂಗಳಾದರೂ ನೀರು ಪೂರೈಸುತ್ತಿಲ್ಲ. ಇನ್ನೆರಡು ದಿನಗಳಲ್ಲಿ ನೀರು ಪೂರೈಸದಿದ್ದಲ್ಲಿ ಮಹಾನಗರಪಾಲಿಕೆಗೆ ಮುತ್ತಿಗೆ ಹಾಕಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಾಗರಾಜಾಚಾರಿ,ನಾಗಪ್ಪ, ಗೋಪಾಲಪ್ಪ, ರಾಜು ಪೂಜಾರಿ, ಮೋಹನ್‌, ಮಲ್ಲಿಕಾರ್ಜುನ್‌, ಹರೀಶ್‌, ಪ್ರವೀಣ್‌, ರಘು, ಬಸವರಾಜ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next