ನಾಗಮಂಗಲ: ತಾಲೂಕಿನ ಹಲವಾರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿದ್ದು, ಶುದ್ಧ ಕುಡಿಯುವ ನೀರನ್ನು ಮನೆ ಮನೆಗೆ ಪೂರೈಸುವ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಸುರೇಶ್‌ಗೌಡ ತಿಳಿಸಿದರು. ತಾಲೂಕಿನ ಹುಲಿಕೆರೆ ಗ್ರಾಪಂ ವ್ಯಾಪ್ತಿಯ ಮೂಡಲಮೆಳ್ಳಹಳ್ಳಿ, ಕನ್ನೇನಹಳ್ಳಿ.
ದೊಡ್ಡಾಬಾಲ ಗ್ರಾಪಂ ವ್ಯಾಪ್ತಿಯ ರಾಮಚಂದ್ರ ಅಗ್ರಹಾರ, ಹೊನ್ನೇನಹಳ್ಳಿ, ದೊಡ್ಡಾಬಾಲ, ತುಪ್ಪದಮಡು ಗ್ರಾಪಂ ವ್ಯಾಪ್ತಿಯ ಮುಳಕಟ್ಟೆ ಮತ್ತು ಪುರಸಭೆ ವ್ಯಾಪ್ತಿಯ ಉಪ್ಪಾರಹಳ್ಳಿ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇದನ್ನೂ ಓದಿ:- ಸಮುದಾಯ ಆರೋಗ್ಯ ಕೇಂದ್ರ ಉನ್ನತಿಗೆ ಕ್ರಮ
ಕಾಮಗಾರಿ ಭೂಮಿಪೂಜೆ ಸಮಯದಲ್ಲಿ ದೊಡ್ಡಾಬಾಲ ಗ್ರಾಪಂ ವ್ಯಾಪ್ತಿಯ ರಾಮಚಂದ್ರ ಅಗ್ರಹಾರದಲ್ಲಿ ಗ್ರಾಮಸ್ಥರೊಬ್ಬರು ಮನೆ ಕುಸಿದಿರುವ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು. ನಂತರ ಶಾಸಕರು ಅವರ ಮನೆಗೆ ಭೇಟಿ ನೀಡಿ ಮನೆಗೆ ಆಗಿರುವ ಹಾನಿಯನ್ನು ವೀಕ್ಷಿಸಿದರಲ್ಲದೇ, ಸಂತ್ರಸ್ತರಿಗೆ ಆದಷ್ಟು ಬೇಗ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರಲಿಂಗೆಗೌಡ, ಹೂವಿನಹಳ್ಳಿ ಚಂದ್ರಣ್ಣ, ಕೆಂಪೇಗೌಡ, ಮಂಜೇಗೌಡ, ಮುದ್ದೇಗೌಡ, ಜೆಡಿಎಸ್ ತಾ.ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ಶಿವರಾಮಯ್ಯ, ಪುನೀತ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.