Advertisement
ಪೈಪ್ ಬದಲಿಸಲು ಆಗ್ರಹಗ್ರಾಮ ಪಂಚಾಯತ್‌ನ ಕೊಳವೆ ಬಾವಿಯ ನೀರು ಮಣ್ಣು ಮಿಶ್ರಿತವಾಗಿದೆ. ಪೈಪುಗಳನ್ನು ಬದಲಾಯಿಸದೇ ಇರುವುದು ಇಂತಹ ಪರಿಸ್ಥಿತಿಗೆ ಕಾರಣವೆಂದು ಗ್ರಾಹಕರು ಹೇಳಿಕೊಂಡಿದ್ದಾರೆ. ಪುತ್ತೂರು ತಾಲೂಕಿನಲ್ಲೇ ಈ ಪಂಚಾಯತ್ ಆದಾಯದಲ್ಲೇ ಮೊದಲ ಸ್ಥಾನದಲ್ಲಿದ್ದರೂ, ಕೊಳವೆ ಬಾವಿಯನ್ನು ಸರಿ ಪಡಿಸಲು ಅಸಾಧ್ಯವಾಗಿರುವುದು ಖೇದಕರ.
ಕೆಂಪಿಮಜಲಿನಲ್ಲಿ ಕೊಳವೆ ಬಾವಿಯ ನೀರು ಸರಿಪಡಿಸಲು ತಕ್ಷಣವೇ ಸಾಧ್ಯವಿಲ್ಲ. ಅದಕ್ಕಾಗಿ ಪ್ರವಾಸಿ ಮಂದಿರ ಬಳಿಯ ನೀರು ಸರಬರಾಜು ಕೇಂದ್ರದಿಂದ ಬದಲಿ ವ್ಯವಸ್ಥೆಗೆ ಮುಂದಾಗಿತ್ತು. ಬಳಿಕ ಕೊಳವೆ ಬಾವಿಯನ್ನು ಸರಿಪಡಿಸುವ ಪ್ರಯತ್ನ ನಡೆಸುವ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ತಟಸ್ಥಕ್ಕೆ ಕಾರಣವಾಗಿದೆ.
– ಮಹಮ್ಮದ್ ತೌಸಿಫ್, ಗ್ರಾ.ಪಂ. ಸದಸ್ಯರು ಪಂಚಾಯತ್ ಹೊಣೆ
ನೀರು ಹಾಗೂ ನೈರ್ಮಲ್ಯ ಸಮಿತಿಯ ಸದಸ್ಯರು ಕಲುಷಿತ ನೀರಿನ ಬಗ್ಗೆ ಪಂಚಾಯತ್‌ಗೆ ಹಲವು ಬಾರಿ ಹೇಳಿದ್ದಾರೆ. ಇಲ್ಲಿ ಮಹಾಬಲ ಶೆಟ್ಟಿಯವರ ತೆರೆದ ಬಾವಿ ನೀರನ್ನು ಸರ್ವಧರ್ಮಿಯರೂ ಬಳಸುತ್ತಿದ್ದಾರೆ. ಪಂಚಾಯತ್ ಮುಂದಿನ ದಿನಗಳಲ್ಲಿ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಪಂಚಾಯತೇ ನೇರ ಹೊಣೆ ಹೊರಬೇಕು.
– ಕೆ. ಮಹಮ್ಮದ್ ಕೆಂಪಿ ಸ್ಥಳೀಯರು