Advertisement
ಕುಡಿಯಲು ಪೂರೈಕೆ ಮಾಡಲು ಜಲಾಶಯಗಳಿಂದ ಕಾಲುವೆಗಳಿಗೆ ಹರಿಸುವ ನೀರು ವ್ಯವಸಾಯ ಸೇರಿ ಇತರೆ ಬಳಕೆ ಹಾಗೂ ಅಕ್ರಮವಾಗಿ ನೀರು ಪಂಪ್ ಮಾಡಿ ಪಡೆಯುವುದು ತಪ್ಪಿಸುವುದು. ಕುಡಿಯುವ ನೀರಿಗೆ ಬೇಸಿಗೆಯಲ್ಲೂ ಹಾಹಾಕಾರ ಉಂಟಾ ಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.
Related Articles
Advertisement
ಜಲಧಾರೆ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಡಿಯೇ ಪೂರಕವಾಗಿ ಕ್ರಿಯಾ ಯೋಜನೆ ರೂಪಿಸಲು ತೀರ್ಮಾನಿಸಲಾಗಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಯೋಜನೆಗೆ ಸ್ಪಷ್ಟ ರೂಪ ಸಿಗಲಿದ್ದು ಆ ನಂತರ ಮುಂದಿನ ಪ್ರಕ್ರಿಯೆಗಳಿಗೆ ವೇಗ ಸಿಗಲಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.ಬಹುತೇಕ ಈಗಾಗಲೇ ನೀರು ಹರಿಸಲು ಇರುವ ಕಾಲುವೆಗಳ ಪಕ್ಕದಲ್ಲೇ ಪೈಪ್‌ಲೈನ್ ಅಳವಡಿಕೆ ಮಾಡುವ ಸಾಧ್ಯತೆಯಿದೆ.
ಕೃಷ್ಣಾ , ಕಾವೇರಿ ಕೊಳ್ಳ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯ, ಪ್ರತ್ಯೇಕ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲು ಅಗತ್ಯವಾದರೆ ಜಮೀನು ಸ್ವಾಧೀನ ಮತ್ತಿತರ ಅಂಶಗಳ ಬಗ್ಗೆಯೂ ತಜ್ಞರಿಂದ ವರದಿ ಪಡೆಯಲು ಸಹ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸೌರ ವಿದ್ಯುತ್ ಉತ್ಪಾದನೆ: ಜಲಾಶಯಗಳಿಂದ ನೀರು ಹರಿಯುವ ಕಾಲುವೆಗಳ ಮೇಲೆ ಸೌರವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೂ ಸದ್ಯದಲ್ಲೇ ಚಾಲನೆ ಸಿಗಲಿದೆ. ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಭಾಗದಲ್ಲಿ ಇದಕ್ಕಾಗಿ ಯೋಜನೆ ರೂಪಿಸಲಾಗಿದೆ. ಕಾಲುವೆಗಳ ಮೇಲೆ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡುವುದರಿಂದ ಅಕ್ರಮವಾಗಿ ಕಾಲುವೆಗಳಿಂದ ನೀರು ಪಡೆಯುವುದನ್ನು ತಡೆಗಟ್ಟಬಹುದು . ಜಲಾಶಯಗಳಿಂದ ಮೋಟಾರ್ ಪಂಪ್ ಮೂಲಕ ಆಕ್ರಮವಾಗಿ ನೀರು ಬಳಕೆ ಮಾಡುತ್ತಿರುವುದು ತಡೆಯುವುದೇ ದೊಡ್ಡ ಸವಾಲು ಆಗಿದೆ. ರೈತರ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಇಲ್ಲ, ಸುಮ್ಮನಿರುವಂತೆಯೂ ಇಲ್ಲ. ಒಂದು ಟಿಎಂಸಿ ನೀರು ಜಲಾಶಯದಿಂದ ಹೊರಗೆ ಬಿಟ್ಟರೆ ಅದು ತಲುಪಬೇಕಾದ ಸ್ಥಳಕ್ಕೆ ಹೋಗುವ ವೇಳೆಗೆ ಅರ್ಧ ಟಿಎಂಸಿಗೆ ಇಳಿದಿರುತ್ತದೆ. ಹೀಗಾಗಿ, ನಿತ್ಯ ಸಂಘರ್ಷ ಉಂಟಾಗುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಜೂನ್ ಅಂತ್ಯದವರೆಗೂ ಸಮಸ್ಯೆಯಾಗದುರಾಜ್ಯದಲ್ಲಿ ಪ್ರಸ್ತುತ ಜಲಾಶಯಗಳಲ್ಲಿರುವ ನೀರು ಜೂನ್ ಅಂತ್ಯದವರೆಗೂ ಕುಡಿಯಲು ಪೂರೈಕೆ ಮಾಡಲು ತೊಂದರೆಯಿಲ್ಲ. ಸೌರ ವಿದ್ಯುತ್ ನಿರೀಕ್ಷೆಗಿಂತ ಹೆಚ್ಚಾಗಿ ಲಭ್ಯವಾಗುತ್ತಿರುವುದರಿಂದ ಜಲವಿದ್ಯುತ್ ಉತ್ಪಾದನೆಯ ಪ್ರಮಾಣವೂ ಕಡಿಮೆಯಾಗಿರುವುದರಿಂದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇದೆ. ತೀರಾ ಅನಿವಾರ್ಯ ಎಂದಾದರೆ ಜುಲೈ 15 ರವರೆಗೂ ಯಾವುದೇ ಸಮಸ್ಯೆ ಎದುರಾಗದು ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ. – ಎಸ್. ಲಕ್ಷ್ಮಿನಾರಾಯಣ