Advertisement

ಚರಂಡಿ ಸೇರುತ್ತಿದೆ “ಜೀವ ಜಲ’! ಮುಖ್ಯ ಪೈಪ್‌ಲೈನ್‌ ಒಡೆದು ಕಳೆದಿವೆ ಹಲವು ತಿಂಗಳು

06:23 PM Nov 19, 2020 | sudhir |

ಗದಗ: ಇಲ್ಲಿನ ಮುಂಡರಗಿ ರಸ್ತೆಯ ಎಲ್‌ಐಸಿ ಕಚೇರಿ ಸಮೀಪದಲ್ಲಿ ತುಂಗಭದ್ರಾ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್‌ ಒಡೆದು ಹಲವು ತಿಂಗಳಿಂದ ಶುದ್ಧ ಕುಡಿಯುವ ನೀರು ಪೋಲಾಗುತ್ತಿದೆ. ಆದರೆ, ಸಂಬಂಧಿಸಿ ಅಧಿಕಾರಿಗಳು ಮಾತ್ರ ದುರಸ್ತಿಗೆ
ಮುಂದಾಗುತ್ತಿಲ್ಲ. ಪರಿಣಾಮ ನಿತ್ಯ ಲಕ್ಷಾಂತರ ಲೀಟರ್‌ “ಜೀವ ಜಲ’ ಚರಂಡಿ ಸೇರುತ್ತಿದೆ.

Advertisement

ಮುಂಡರಗಿ ತಾಲೂಕಿನ ಹಮ್ಮಿಗಿಯಿಂದ ಬ್ಯಾರೇಜ್‌ನಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ 24×7 ಯೋಜನೆಯಡಿ ನಿತ್ಯ ಕುಡಿಯುವ ನೀರು ಪೂರೈಸಲಾಗುತ್ತದೆ. ಮುಂಡರಗಿ ರಸ್ತೆಯಲ್ಲಿರುವ ನೂತನ ಎಲ್‌ಐಸಿ ಕಚೇರಿ ಬಳಿ ಮುಖ್ಯ ಪೈಪ್‌
ಒಡೆದಿದ್ದು, ಪ್ರತಿನಿತ್ಯ ಅಪಾರ ಪ್ರಮಾಣದ ಶುದ್ಧ ನೀರು ಸೋರಿಕೆ ಯಾಗುತ್ತಿದೆ. ಪೈಪ್‌ಲೈನ್‌ ದುರಸ್ತಿಗೊಳಿಸುವಂತೆ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೂ ಫಲಿಸಿಲ್ಲ.

ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಹೊಣೆ ಇತ್ತೀಚೆಗೆ ನಗರಸಭೆಯಿಂದ ನಗರ ಕುಡಿಯುವ ನೀರು ಪೂರೈಕೆ ಇಲಾಖೆ(ಆರ್‌ಡಬ್ಲ್ಯೂ ಎಸ್‌)ಯ ಹೆಗಲೇರಿದೆ. ಹೀಗಾಗಿ ಕುಡಿಯುವ ನೀರು ಸೋರಿಕೆ ಕುರಿತು ಸಾಮಾನ್ಯವಾಗಿ ಮಾಹಿತಿ ನೀಡಿದರೆ,
ಆರ್‌ಡಬ್ಲ್ಯೂ ಎಸ್‌ನತ್ತ ಬೊಟ್ಟು ಮಾಡುತ್ತಿದ್ದಾರೆ.

ನಗರ ನೀರು ಪೂರೈಕೆ ಕಚೇರಿಯ ಮಾಹಿತಿ ಇಲ್ಲದೇ ಮೌನಕ್ಕೆ ಶರಣಾಗುತ್ತಿದ್ದಾರೆ. ಹೀಗಾಗಿ ಸಮಸ್ಯೆ ಬಗೆಹರಿಯುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ನಗರಸಭೆ ಸಿಬ್ಬಂದಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜ ಆಗಿಲ್ಲ. ಕೇವಲ
ಮೂರ್‍ನಾಲ್ಕು ವರ್ಷಗಳಿಂದೆ ಬೇಸಿಗೆಯಲ್ಲಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತಿತ್ತು. ಆದರೆ, 24×7 ಕುಡಿಯುವ ನೀರು ಯೋಜನೆ ಅನುಷ್ಠಾನದಿಂದ ನೀರಿನ ಸಮಸ್ಯೆ ಕಡಿಮೆಯಾಗಿದೆ. ಹಾಗಂತ ನೀರಿನ ವಿಚಾರದಲ್ಲಿ ಅಲಕ್ಷ್ಯ ತೋರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣವೇ ಮುಂಡರಗಿ ರಸ್ತೆ ಸೇರಿದಂತೆ ಅವಳಿ ನಗರದ ವಿವಿಧೆಡೆ ಪೈಪ್‌ಗಳು ಒಡೆದು, ಸೋರಿಕೆಯಾಗುತ್ತಿರುವುದನ್ನು ದುರಸ್ತಿಗೊಳಿಸಬೇಕು. ಇಲ್ಲವೇ ನಗರಸಭೆ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರಗತಿಪರ ಸಂಘಟನೆಗಳು ಎಚ್ಚರಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next