Advertisement
1 ಅತಿಯಾದ ಉಪ್ಪು ಬಳಕೆಆಹಾರದಲ್ಲಿ ಹೆಚ್ಚು ಉಪ್ಪು ಬಳಸಿದ್ದರೆ ಪದೇ ಪದೆ ಬಾಯಾರಿಕೆಯ ಅನುಭವವಾಗುತ್ತದೆ. ಯಾಕೆಂದರೆ ಉಪ್ಪು ಜೀವಕೋಶಗಳ ನೀರಿನ ಅಂಶವನ್ನು ಹೊರ ಹಾಕುತ್ತದೆ. ಪರಿಣಾಮ ಬಾಯಾರಿಕೆಯ ಅನುಭವವಾಗುತ್ತದೆ. ಪ್ರತಿ ದಿನ 5 ಗ್ರಾಂಗಿಂತ ಜಾಸ್ತಿ ಉಪ್ಪು ಬಳಸಲೇಬೇಡಿ. ಇದರಿಂದ ಬಿಪಿ ಮಾತ್ರವಲ್ಲ ಕಡಿಮೆ ನೀರು ಕುಡಿದರೆ ನಿರ್ಜಲೀಕರಣ ಎದುರಾಗುವ ಆಪಾಯವೂ ಇದೆ.
ಬೆಳಗ್ಗಿನ ಜಾವ ಜಾಗಿಂಗ್, ವ್ಯಾಯಾಮ ಮಾಡುತ್ತೀರಿ ಎಂದಾದರೆ ನಿಮ್ಮ ದೇಹ ಹೆಚ್ಚಿನ ನೀರು ಬೇಡುತ್ತದೆ. ಇದರಿಂದ ದೇಹದಲ್ಲಿನ ನೀರಿನ ಅಂಶ ಬೆವರಿನ ರೂಪದಲ್ಲಿ ಹೊರ ಹೋಗುತ್ತದೆ. 3 ಬಿಸಿಲಿಗೆ ನಿಂತಿದ್ದರೆ
ಬಿಸಿಲಿಗೆ ಮೈ ಒಡ್ಡಿ ನಿಂತಿದ್ದರೆ ಬಾಯಾರಿಕೆ ಹೆಚ್ಚು. ಇದರಿಂದ ನಿರ್ಜಲೀಕರಣ ಕಾಡಬಹುದು.
Related Articles
ಅತಿಯಾದ ಬಾಯಾರಿಕೆ ಮಧುಮೇಹದ ಲಕ್ಷಣಗಳಲ್ಲಿ ಒಂದು. ಹೀಗಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
Advertisement
5 ಒಣ ಬಾಯಿ ಸಾಧ್ಯತೆಒಣ ಬಾಯಿ ಕೂಡ ಅತಿಯಾದ ಬಾಯಾರಿಕೆ ಕಾರಣವಾಗಿರುತ್ತದೆ. ಲವಣ ಗ್ರಂಥಿಗಳು ಲಾಲಾರಸ ಉತ್ಪತ್ತಿ ಮಾಡದೇ ಇದ್ದಾಗ ಸಾಕಷ್ಟು ನೀರು ಕುಡಿಯಬೇಕು ಎಂದೆನಿಸಲು ಶುರುವಾಗುತ್ತದೆ. 6 ಔಷಧ ಬಳಸುವ ಪರಿಣಾಮ
ಕೆಲವು ಔಷಧಗಳು ಬಾಯಿಯ ಮೇಲೆ ಪರಿಣಾಮ ಬೀರಿ ಒಣಗಿಸುವ ಗುಣ ಹೊಂದಿವೆ. ಈ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಿ. - ರಮೇಶ್ ಬಳ್ಳಮೂಲೆ