Advertisement
ಬಡವರ ಊಟಿ ಎಂದೇ ಖ್ಯಾತಿ ಪಡೆದಿರುವ ಮಲೆನಾಡು ಸಕಲೇಶಪುರ ಅಕ್ಷರಶಃ ಬಿಸಿಲಿನ ತಾಪಕ್ಕೆ ನಲುಗಿ ಹೋಗಿದೆ. ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಸಕಲೇಶಪುರದ ಮಲೆನಾಡು ಭಾಗದಲ್ಲಿ ಜಲಕ್ಷಾಮ ಕಾಣಿಸಿಕೊಂಡಿದ್ದು, ಪಶ್ಚಿಮಘಟ್ಟದ ನದಿ ತೊರೆಗಳು ಬತ್ತಿ ಹೋಗಿವೆ. ಜೊತೆಗೆ ಕಾಫೀ ಏಲಕ್ಕಿ ಬೆಲೆ ಒಣಗುತ್ತಿದ್ದರೆ, ಪಶ್ಚಿಮ ಘಟ್ಟದ ಕಾಡಿನ ಪ್ರಾಣಿಗಳು ನೀರಿಗಾಗಿ ಪರದಾಡುತ್ತಿವೆ.
Related Articles
Advertisement
ಜಲ ಕ್ಷಾಮ: ಮಲೆನಾಡು ಭಾಗದ ಜಲಕ್ಷಾಮ ಹೇಮಾವತಿ ಹಾಗೂ ಧರ್ಮಸ್ಥಳದ ನೇತ್ರಾವತಿ ನದಿಗಳಿಗೂ ತಟ್ಟಲಿದ್ದು, ಶೀಘ್ರದಲ್ಲಿ ಮಳೆ ಬಾರದಿದ್ದರೆ ಮಲೆನಾಡು ಬಿಸಿಲಿಗೆ ತತ್ತರಿಸಿ ಹೋಗಲಿದೆ.
ನಿರಂತರ ಅರಣ್ಯ ನಾಶ: ಮಲೆನಾಡಿನಲ್ಲೂ ಈ ರೀತಿಯ ತಾಪಮಾನ ಹೆಚ್ಚಾಗಲು, ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟಗಳ ಕಾಡನ್ನು ನಾಶ ಮಾಡಿರುವುದೇ ಕಾರಣ ಎಂದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣ ವಾಗಿದೆ. ಪವರ್ ಪ್ರಾಜೆಕ್ಟ್ಗಳು, ಎತ್ತಿನಹೊಳೆ ಯೋಜನೆ, ರಾಷ್ಟ್ರೀಯ ಹೆದ್ದಾರಿ ಅಗಲೀಕ ರಣ, ಹೇಮಾವತಿ ತೀರದಲ್ಲಿ ಮರಳು ಲೂಟಿ, ಟಿಂಬರ್ ಮಾಫಿಯಾ ಸೇರಿದಂತೆ ಇನ್ನು ಹಲವು ಯೋಜನೆಗಳಿಂದ ಮಲೆನಾಡಿನ ಪರಿಸ್ಥಿತಿ ಈ ರೀತಿಯಾಗಲು ಕಾರಣವಾಗಿದೆ. ಒಟ್ಟಾರೆ ಬಡವರ ಊಟಿ ಎಂದು ನೂರಾರು ಸಿನಿಮಾಗಳ ಚಿತ್ರೀಕರಣ ವಾಗಿದ್ದ ಸಕಲೇಶಪುರ, ಸದ್ಯ ಅಕ್ಷರಶಃ ಒಣ ಕಾಡಿನಂತಿದೆ. ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಕಾಡಿಗೆ ಕನ್ನ ಹಾಕುವ ಕೆಲಸ ಬಿಟ್ಟು, ಹಸಿರು ತಾಣವನ್ನು ಉಳಿಸಬೇಕಿದೆ.
ಎತ್ತಿನಹೊಳೆ ಹೊಳೆ ಸೇರಿದಂತೆ ವಿವಿಧ ಪರಿಸರಕ್ಕೆ ಮಾರಕವಾ ಗಿರುವ ಯೋಜನೆ ಗಳಿಂದ ತಾಲೂ ಕಿನ ಪರಿಸರಕ್ಕೆ ನೇರ ಹಾನಿಯುಂಟಾ ಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ತಾಲೂಕಿನ ಪರಿಸರವನ್ನು ನಾಶ ಮಾಡಿರುವುದರ ನೇರ ಪರಿಣಾಮ ವನ್ನು ನಾವು ಅನುಭವಿಸುತ್ತಿದ್ದೇವೆ.● ರಶ್ಮಿ ಹಿರಿಯೂರು, ಪರಿಸರ ಪ್ರೇಮಿ ಎತ್ತಿನಹೊಳೆ ಯೋಜನೆ ಸಂಪೂರ್ಣವಾಗಿ ಪರಿಸರಕ್ಕೆ ಮಾರಕವಾಗಿದೆ. ಈ ಯೋಜನೆ ಯಿಂದ ವ್ಯಾಪಕ ನಷ್ಟವುಂಟಾ ಗುತ್ತಿದ್ದು ಒಂದು ಕಡೆ ಮಲೆನಾಡಿನ ಪರಿಸರದ ಮೇಲೆ ಹಾನಿಯುಂಟಾ ಗುತ್ತಿದೆ. ಮತ್ತೂಂದು ಕಡೆ ಸರ್ಕಾರದ ಬೊಕ್ಕಸವನ್ನು ಯೋಜನೆಯ ಹೆಸರಿನಲ್ಲಿ ಖಾಲಿ ಮಾಡಲಾ ಗುತ್ತಿದೆ.ಈ ಯೋಜನೆಯಿಂದ ಬರಪೀಡಿತ ಪ್ರದೇಶಗಳಿಗೆ ನೀರು ಹರಿಯುವುದು ಅನುಮಾನವಾಗಿದೆ.
● ಕವನ್ ಗೌಡ, ವಕೀಲರು ಸುಧೀರ್ ಎಸ್.ಎಲ್