Advertisement
ಇಡೀ ಗ್ರಾಮದ ಹೆಣ್ಣು ಮಕ್ಕಳಿಗೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಅಳವಡಿಸಿದ್ದರಿಂದ ಮಂಗಳವಾರ ಭಾರತೀಯ ಅಂಚೆ ಇಲಾಖೆ ಕಲಬುರಗಿ ವಿಭಾಗದ ವತಿಯಿಂದ ನಿಂಬಾಳ ಗ್ರಾಮವನ್ನು ಸಂಪೂರ್ಣ ಸುಕನ್ಯಾ ಸಮೃದ್ಧಿ ಗ್ರಾಮ ಎಂಬುದಾಗಿ ಘೋಷಣೆ ಮಾಡಲಾಯಿತು.
Related Articles
ಎಂದು ಘೋಷಣೆ ಮಾಡಿ, ನಾಲ್ಕು ವರ್ಷದ ಭಾಗ್ಯಶ್ರೀ ಎನ್ನುವ ಬಾಲಕಿಯ ಜನ್ಮದಿನವನ್ನು ಮೌನಯೋಗಿಗಳ ಉಪಸ್ಥಿತಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
Advertisement
ಇದೇ ಸಮಯದಲ್ಲಿ ಶಾಂತಲಿಂಗೇಶ್ವರ ಸ್ವಾಮಿಜೀಯವರು ಹಾಗೂ ಅಂಚೆ ಇಲಾಖೆ ಅಧಿಕಾರಿಗಳು ಸುಕನ್ಯಾ ಸಮೃದ್ಧಿ ಖಾತೆ ತೆಗೆದ ಎಲ್ಲಾ ಹೆಣ್ಣು ಮಕ್ಕಳಿಗೆ ಅಂಚೆ ಕಚೇರಿ ಪಾಸ್‌ಬುಕ್ ಅನ್ನು ವಿತರಿಸಲಾಯಿತು.
ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಶಿವಾನಂದ ಎಸ್.ಪಾಟೀಲ ಅಧ್ಯಕ್ಷತೆ ವಹಿಸಿ, ಯೋಜನೆಯ ಲಾಭವನ್ನು ಪಡೆದು ಎಲ್ಲರು ತಮ್ಮ ಮಕ್ಕಳ ಆರ್ಥಿಕ ಹಾಗೂ ಶೆ„ಕ್ಷಣಿಕ ಭದ್ರತೆಯನ್ನು ಪಡೆಯಬೇಕೆಂದು ವಿವರಣೆ ನೀಡಿದರು.
ಸಹಾಯಕ ಅಂಚೆ ಅಧೀಕ್ಷಕ ಶಿವಾನಂದ ಆರ್. ಹೀರಾಪುರ ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ಮಾತನಾಡಿ, ಸುತ್ತಮುತ್ತಲಿನ ಎಲ್ಲ ಗ್ರಾಮದವರು ತಮ್ಮ ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಆರಂಭಿಸಬೇಕೆಂದು ವಿನಂತಿಸಿಕೊಂಡರು. ಸಹಾಯಕ ಅಂಚೆ ಅಧೀಕ್ಷಕ ವಿ.ಎಲ್ ಚಿತ್ತಕೋಟೆ ಮಾತನಾಡಿ, ಎಸ್.ಬಿ, ಆರ್.ಡಿ, ಟಿ.ಡಿ, ಪಿಪಿಎಫ್ ಮುಂತಾದ ಉಳಿತಾಯ ಖಾತೆಗಳ ಬಗ್ಗೆ ತಿಳಿ ಹೇಳಿದರು.
ಸಹಾಯಕ ಅಂಚೆ ಅಧೀಕ್ಷಕ ಆರ್.ಕೆ ಉಮ್ರಾಣಿ, ಅಂಚೆ ನಿರೀಕ್ಷಕ ರಾಮಕೃಷ್ಣ ವಂಶಿ ಪ್ರಧಾನ ಮಂತ್ರಿಯವರ ಸುರಕ್ಷಾ ಭೀಮಾ ಯೋಜನೆ, ಜೀವನ ಜ್ಯೋತಿ ಯೋಜನೆ ಹಾಗೂ ಅಟಲ್ ಪೆನ್ ಷನ್ ಯೋಜನೆ ಕುರಿತು ಮಾತನಾಡಿದರು. ಸಿದ್ದಣ್ಣ ಬೋಲಾ ನಿರೂಪಿಸಿದರು. ಸುಶೀಲ ಕುಮಾರ ತಿವಾರಿ ವಂದಿಸಿದರು.