Advertisement
ಈ ಕೆರೆಯನ್ನು ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಹೂಳೆತ್ತಬೇಕು. ಇದಕ್ಕಾಗಿ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವುದು ಎಂದು ನಿಯೋಗ ಹೇಳಿದೆ.
ಕುಂದಾಪುರ ತಾಲೂಕಿನ ಬಸೂÅರು ಗ್ರಾಮದ ಸುತ್ತಮುತ್ತಲಿರುವ ಹಿರೇಬೈಲು, ನಚ್ಚಾರು, ಉಳ್ಳೂರು, ಸಾಂತಾವರ, ಸೂರಣಿಗಿಗಳ ಸ್ಥಳಗಳ ಗದ್ದೆಗಳಿಗೆ ನೀರುಣಿಸುತ್ತಿದ್ದ ಹೇರಿಕೆರೆ ಉಳಿಸುವ ಜವಾಬ್ದಾರಿಗೆ ಎಲ್ಲರೂ ಕೈ ಜೋಡಿಸಬೇಕಿದೆ. 45 ಎಕರೆಯ ವಿಸ್ತಾರ ಹೊಂದಿ ಜಿಲ್ಲೆಯಲ್ಲೇ ಅತಿ ದೊಡ್ಡದಾದ ಈ ಕೆರೆ ಬರಡಾಗಿದೆ. 20 ವರ್ಷದಿಂದ ಹೂಳೆತ್ತಿಲ್ಲ ಎಂದು ಸ್ಥಳೀಯರು ಹೇಳಿದರು. ಸಾಂತವಾರ ಗ್ರಾ. ಪಂ. ಸದಸ್ಯ ಸಂತೋಷ ಅವರು ಹಿಂದಿನ ಸರಕಾರದ ಸಣ್ಣ ನೀರಾವರಿ ಸಚಿವರಿಗೆ ಮನವಿ ನೀಡಲಾಗಿದ್ದರೂ ಸರಕಾರದ ನಿರ್ಲಕ್ಷ್ಯದಿಂದ ಅದು ಸಾಧ್ಯವಾಗಿಲ್ಲ ಎಂದರು. ಸಂಬಂಧ ಪಟ್ಟ ಜಿಲ್ಲಾ ಪಂಚಾಯತ್ ಸದಸ್ಯರು ಈ ಬಗ್ಗೆ ಗಮನವಹಿಸಬೇಕೆಂದು ಸ್ಥಳೀಯ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಸಣ್ಣ ದೇವಾಡಿಗ ಹೇಳಿದರು.
Related Articles
ಬಸೂÅರು ಗ್ರಾಮದ ಸುತ್ತಮತ್ತಲ ಹಳ್ಳಿಗಳ ಜನರಿಗೆ ಆಸರೆಯಾಗಿದ್ದ ಕೋಳ್ಕೆರೆ ಕೂಡ ದುರಸ್ತಿಯಾಗಿಲ್ಲ ಈ ಬಗ್ಗೆಯೂ ಸರಕಾರದ ಗಮನ ಸೆಳೆಯಲು ಹೋರಾಟ ರೂಪಿಸುವುದಾಗಿ ನಿಯೋಗದವರು ಹೇಳಿದರು.
Advertisement
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಯು. ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಕಾರ್ಮಿಕ ಮುಖಂಡ ಸುರೇಶ ಕಲ್ಲಾಗರ, ಮಹಾಬಲ ವಡೇರಹೋಬಳಿ ನಿಯೋಗದಲ್ಲಿದ್ದರು.ಸ್ಥಳೀಯರಾದ ಸುಧಾಕರ, ಜಗನ್ನಾಥ, ದೇವಕಿ ಮಾಹಿತಿ ನೀಡಿದರು.