Advertisement

ಗಮನ ಸೆಳೆದ “ಕಾಂಪೋಸ್ಟ್‌ ಸಂತೆ’

12:20 PM Feb 27, 2017 | Team Udayavani |

ಬೆಂಗಳೂರು: ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ, ವಿಲೇವಾರಿ ಸೇರಿದಂತೆ ಕಸದ ಜನ ಜಾಗೃತಿ ಮೂಡಿಸುವ ಸಂಬಂಧ ಪ್ರಕಾಶ್‌ನಗರದ ಗಾಯತ್ರಿದೇವಿ ಉದ್ಯಾನ ದಲ್ಲಿ ಭಾನುವಾರ ಬಿಬಿಎಂಪಿಯಿಂದ ಎರಡನೇ “ಕಾಂಪೋಸ್ಟ್‌ ಸಂತೆ’ಗೆ ಚಾಲನೆ ನೀಡಲಾಯಿತು.

Advertisement

ಕಳೆದ ವಾರ ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನಲ್ಲಿ ಈ ವಿಶಿಷ್ಟ ಸಂತೆ ನಡೆದಿತ್ತು. ಸಾವಿರಾರು ಜನ ಇದಕ್ಕೆ ಸಾಕ್ಷಿಯಾಗಿದ್ದರು. ಈ ಬಾರಿ ಪ್ರಕಾಶ್‌ನಗರದಲ್ಲಿ ಮತ್ತಷ್ಟು ವಿನೂತನ ಪ್ರಯೋಗಗಳ ಮಾದರಿಗಳಿಂದ ಸಂತೆ ಗಮನಸೆಳೆಯಿತು. 

ನಿತ್ಯ ತಲೆನೋವಾಗಿ ಪರಿಣಮಿಸಿ ರುವ ಕಸವನ್ನು ರಸವಾಗಿ ಪರಿವರ್ತಿ ಸುವುದು ಹೇಗೆ? ಹೀಗೆ ಕಸದಿಂದ ತಯಾರಿಸಿದ ಗೊಬ್ಬರಕ್ಕೆ ಮಾರುಕಟ್ಟೆ ಎಲ್ಲಿದೆ? ಕಡಿಮೆ ಖರ್ಚಿನಲ್ಲಿ ಗೊಬ್ಬರ ತಯಾರಿಕೆ ಹೇಗೆ ಇಂತಹ ಹತ್ತುಹಲವು ಗೊಂದಲಗಳನ್ನು ಈ ಸಂತೆ ನಿವಾರಿಸಿತು. 

ಈ ವೇಳೆ ತಜ್ಞರಾದ ವಾಣಿ ಮೂರ್ತಿ, ಮೀನಾಕ್ಷಿ ಭರತ್‌ ಮತ್ತಿತರರು ಕಸದಿಂದ ಕಾಂಪೋಸ್ಟ್‌ ಹಾಗೂ ಜೈವಿಕ ಅನಿಲ ಉತ್ಪಾದಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ದರು. ಈ ಸಂದರ್ಭದಲ್ಲಿ ಸ್ಮಾರ್ಟ್‌ ಯಂತ್ರಗಳು, ಕಸದಲ್ಲೇ ಅರಳಿದ ಹೂವುಗಳು, ಕಸದಿಂದ ತಯಾರಿಸಿದ ಗೊಬ್ಬರ ಬಳಸಿ ಟೆರೇಸ್‌ ಗಾರ್ಡನ್‌, ತರಕಾರಿ ಬೆಳೆಯುವ ಪದ್ಧತಿಯನ್ನು ತಿಳಿಸಿಕೊಡಲಾಯಿತು. 

ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಿ, ಆ ಕಸದಿಂದ ಅಡಿಗೆ ಅನಿಲ ಅಥವಾ ವಿದ್ಯುತ್‌ ತಯಾರಿ ಸಬಹುದು ಎಂದು ಜನರಿಗೆ ಮಾಹಿತಿ ನೀಡಲಾಯಿತು. ಸಂತೆಗೆ ಬೆಳಿಗ್ಗೆ 7.30ರ ಸುಮಾರಿಗೆ ಮೇಯರ್‌ ಮೇಯರ್‌ ಜಿ. ಪದ್ಮಾವತಿ ಚಾಲನೆ ನೀಡಿದರು. 

Advertisement

ನಂತರ ಮಾತನಾಡಿದ ಅವರು, ಮನೆಯಲ್ಲಿ ಉತ್ಪಾದನೆಯಾಗುವ ಕಸವನ್ನು ಸುಲಭವಾಗಿ ಕಾಂಪೋಸ್ಟ್‌ ಆಗಿ ಪರಿವರ್ತಿಸಬಹುದು. ಈ ಗೊಬ್ಬರವನ್ನು ಮನೆ ಮುಂದಿನ ಗಿಡ, ಉದ್ಯಾನಗಳಿಗೆ ಹಾಕಬ ಹುದು. ಅಷ್ಟೇ ಅಲ್ಲ, ಗೊಬ್ಬರವನ್ನು ಮಾರಾಟ ಮಾಡಬಹುದು.

ಈ ರೀತಿ ಬಹುಪಯೋಗಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ ತ್ಯಾಜ್ಯ ಸಮಸ್ಯೆ ಸೃಷ್ಟಿಸುವ ಬದಲು ವೈಜ್ಞಾನಿಕ ವಾಗಿ ವಿಲೇವಾರಿ ಮಾಡಲು ಸಾರ್ವಜನಿಕರು ಮುಂದಾಗಬೇಕು ಎಂದು ಹೇಳಿದರು. ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next