Advertisement
ಗರ್ಭಿಣಿಯರಲ್ಲಿ ಮಗು ಬೆಳೆಯುತ್ತಿರುವಾಗ ಸಹಜವಾಗಿಯೇ ಗರ್ಭಕೋಶ ಹಿಗ್ಗುತ್ತದೆ. ದೇಹದಲ್ಲಿ ಬದಲಾವಣೆಗಳ ಜೊತೆಗೆ ಹಾರ್ಮೋನ್‌ನಲ್ಲೂ ಬದಲಾವಣೆಗಳಾಗುತ್ತವೆ. ತೂಕವೂ ಜಾಸ್ತಿಯಾಗುತ್ತದೆ. ಉದರದ ಭಾಗ ಹಿಗ್ಗುವುದರಿಂದ ಮೈಮಾಟದಲ್ಲೂ ವ್ಯತ್ಯಾಸವಾಗಿ ಮೊದಲು ತೊಡುತ್ತಿದ್ದ ಉಡುಗೆಗಳೆಲ್ಲ ಬಿಗಿಯಾಗಲಾರಂಭಿಸುತ್ತವೆ. ಆಗ ಆಕೆಗೆ “ನನ್ನ ಡ್ರೆಸ್ಸುಗಳೆಲ್ಲ ಬಿಗಿಯಾಗುತ್ತಿವೆ, ಯಾವುದನ್ನೂ ಧರಿಸಲಾಗುತ್ತಿಲ್ಲ, ಎಷ್ಟು ಚೆಂದ ಚೆಂದ ಡ್ರೆಸುಗಳು! ಇವನ್ನೆಲ್ಲ ಮೂಲೆಗೆಸೆಯುವುದೇ?’ ಎಂದು ಅನ್ನಿಸುವುದು ಸುಳ್ಳಲ್ಲ. ಪರ್ಯಾಯವಾಗಿ ಆಕೆ ತನಗೆ ಒಗ್ಗುವ ಉಡುಪುಗಳ ಹುಡುಕಾಟಕ್ಕೂ ಶುರುಮಾಡುತ್ತಾಳೆ.
ಈಗ ಹೇಳಿಕೇಳಿ ಫ್ಯಾಶನ್ ಯುಗ. ಹಿಂದಿನ ಕಾಲದ ಗರ್ಭಿಯರಂತೆ ಸೀರೆ, ಚೂಡಿದಾರನ್ನೇ ಹಾಕಿ ಹೊರಗೆ ಹೋಗಬೇಕೆಂದಿಲ್ಲ. ಗರ್ಭಿಣಿಯರಿಗಾಗಿಯೇ ಆಧುನಿಕ ವಿನ್ಯಾಸದ ಟಾಪ್, ಟೀಶರ್ಟ್, ಮಿಡಿ, ಮ್ಯಾಕ್ಸಿ, ತ್ರಿಫೋಥ್ ಡ್ರೆಸ್‌ಗಳು ಸಿಗುತ್ತವೆ. ಉಡುಪುಗಳಲ್ಲೇ ಆರಾಮದಾಯಕ ಉಡುಪು ಎಂದರೆ ಟೀಶರ್ಟ್. ಹೆಣ್ಣುಮಕ್ಕಳು ಹೆಚ್ಚಾಗಿ ಟೀಶರ್ಟ್‌ನ್ನು ಇಷ್ಟಪಡುತ್ತಾರೆ. ಟೀಶರ್ಟ್ ಎಲ್ಲ ಕಾಲಕ್ಕೂ ಒಗ್ಗುವ, ಲಘುವಾಗಿರುವ ಜತೆಗೆ ತಾಪಮಾನವನ್ನು ತಡೆಯುವ ಆರಾಮದಾಯಕ ಉಡುಪು. ಉಷ್ಣಾಂಶವನ್ನು ತಡೆಯಲು ನೆರವಾಗುವುದರೊಂದಿಗೆ ಟೀಶರ್ಟ್ ಸೌಂದರ್ಯವನ್ನೂ ಹೆಚ್ಚು ಮಾಡುತ್ತದೆ. ಗರ್ಭಿಣಿಯರು ತುಸು ಸಡಿಲವಾದ ಟೀಶರ್ಟ್ ಆಯ್ದುಕೊಳ್ಳಬಹುದು. ಅಲ್ಲದೆ ಟೀಶರ್ಟ್ ನಲ್ಲೂ ಈಗ ಸಡಿಲವಾಗಿರುವ ಟೀಶರ್ಟ್ ಮಾದರಿಯ ಹಲವಾರು ನಮೂನೆಯ ಆಕರ್ಷಕ ಟಾಪ್‌ಗ್ಳೂ ಗರ್ಭಿಣಿಯರಿಗಾಗಿ ಲಭ್ಯವಿವೆ. ಗರ್ಭಿಣಿಯರಿಗೆ ಪಲಾಝೊ ಪ್ಯಾಂಟ್ ಸಹ ಅತ್ಯುತ್ತಮ ಉಡುಗೆ. ಇದು ಗರ್ಭಿಣಿಯರ ಲುಕ್ ಬದಲಿಸುವ ಜೊತೆಗೆ ಆರಾಮವೆನಿಸುತ್ತದೆ. ಪಲಾಝೊ ಮೇಲೆ ಟೀಶರ್ಟ್ ಅಥವಾ ಕುರ್ತಾವನ್ನೂ ಹಾಕಬಹುದು.
Related Articles
ಮದುವೆ, ಉಪನಯನದಂತಹ ಸಮಾರಂಭಗಳಲ್ಲಿ ಸಾಂಪ್ರದಾಯಿಕ ರೇಶ್ಮೆ ಸೀರೆ, ಜರಿಯ ಸೀರೆಗಳನ್ನು ಉಡುವುದು ನಮ್ಮ ಸಂಪ್ರದಾಯ. ಗರ್ಭಿಣಿಯರಿಗೆ ಜರಿಯ ಸೀರೆಗಳು ಭಾರವೆನಿಸಿದರೆ ತೆಳುವಾದ, ಹಗುರವಾದ, ಸಪೂರ ಬಾರ್ಡರ್‌ನ ಸೀರೆಗಳನ್ನು , ಹಗುರವಾದ ಕಾಟನ್ ಸೀರೆಗಳನ್ನು ಧರಿಸಬಹುದು. ಇನ್ನು ಸೀರೆ ಉಡಲು ಕಷ್ಟವೆನಿಸಿದರೆೆ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಲು ಸಲ್ವಾರನ್ನು ಆಯ್ಕೆ ಮಾಡಿಕೊಳ್ಳಬಹುದು. ಸಲ್ವಾರ್‌ನಲ್ಲಿ ಅಂಬ್ರೆಲ್ಲಾ , ಅನಾರ್ಕಲಿಗಳು ಗರ್ಭಿಣಿಯರಿಗೆ ಆಕರ್ಷಕ ಲುಕ್ ನೀಡುತ್ತದೆ. ಇವು ಸಾಕಷ್ಟು ಉದ್ದ ಹಾಗೂ ಸಡಿಲವಾಗಿರುದರಿಂದ ಆರಾಮದಾಯಕ. ಆಧುನಿಕ ಮನೋಭಾವದವರು ಲಾಂಗ್ ಮ್ಯಾಕ್ಸಿ ಡ್ರೆಸ್‌ನೂ° ಆರಿಸಿಕೊಳ್ಳಬಹುದು. ಉದ್ದದ ನಿಲುವಂಗಿ ರೂಪದ ಮ್ಯಾಕ್ಸಿಗಳು ಚೆಂದ ಕಾಣಿಸುತ್ತವೆ. ತೆಳು ಇಲಾಸ್ಟಿಕ್ ಹೊಂದಿರುವ ಮಿಡಿಗಳನ್ನು ಆಯ್ಕೆಮಾಡಿ ಧರಿಸಬಹುದು.
Advertisement
ಹೈಹೀಲ್ಸ್ ಬೇಡಆರೋಗ್ಯದ ದೃಷ್ಟಿಯಿಂದ ಗರ್ಭಿಣಿಯರಿಗೆ ಹೈಹೀಲ್ಡ್ ಚಪ್ಪಲಿಗಳ ಉಪಯೋಗ ಹಿತಕರವಲ್ಲ. ಹೈ ಹೀಲ್ಸ್ ಶೂ ಅಥವಾ ಸ್ಯಾಂಡಲ್ಸ್ ಹಾಕಿದರೆ ಸ್ಟೈಲ್ ಆಗಿ ಕಾಣಿಸುತ್ತದೆ ನಿಜ, ಆದರೆ ಗರ್ಭಿಣಿಯರು ಹೈಹೀಲ್ಸ್ ಹಾಕಿಕೊಂಡು ನಡೆಯುವಾಗ ಬ್ಯಾಲೆನ್ಸ್ ಮಾಡಲು ಕಷ್ಟವಾಗಬಹುದು. ಹೈಹೀಲ್ಸ್ ಹಾಕಿಕೊಂಡಾಗ ದೇಹದ ಎಲ್ಲ ಭಾರವು ಪಾದಗಳ ಮೇಲೆ ಬೀಳುತ್ತದೆ. ಜತೆಗೆ ಬೆನ್ನು ಮತ್ತು ಮೊಣಕಾಲಿನ ಮೇಲೂ ಜಾಸ್ತಿ ಒತ್ತಡ ಬೀಳುತ್ತದೆ. ಅಲ್ಲದೆ ಅಧಿಕ ಸಮಯ ಧರಿಸಿದಾಗ ಪಾದ ಮತ್ತು ಸೊಂಟ ನೋವೂ ಬರಬಹುದು. ಈ ಎಲ್ಲ ಅಪಾಯಗಳನ್ನು ತಪ್ಪಿಸಲು ಗರ್ಭಿಣಿಯರಿಗಾಗಿಯೇ ಮಾರುಕಟ್ಟೆಯಲ್ಲಿ ಫ್ಯಾಷನ್ ಚಪ್ಪಲಿ ದೊರೆಯುತ್ತದೆ. ಆದಷ್ಟು ಕಡಿಮೆ ಹೀಲ್ಸ್ ಇರುವ, ಬಿಗಿಯಲ್ಲದ ಸ್ಯಾಂಡಲ್ಸ್‌ಗಳ ಆಯ್ಕೆ ಉತ್ತಮ. ಸ್ಯಾಂಡಲ್ಸ್‌ನಲ್ಲಿ ಅದರಲ್ಲೂ ಬೆಲ್ಟ್ ಅಥವಾ ಲೇಸ್ ಇರುವಂಥ ಸ್ಯಾಂಡಲ್ಸ್ , ಮಡಚುವ ಚಪ್ಪಲಿಗಳು ಉತ್ತಮ. ಸ್ವಾತೀ