Advertisement

ಮಕ್ಕಳಿಗೇನು ಚೆನ್ನ?

07:16 PM Nov 26, 2019 | mahesh |

ಸಂಬಂಧಿಕರ ಮದುವೆಯಿದೆ. ರಿಸೆಪ್ಷನ್‌ಗೆ ಲೆಹೆಂಗಾ, ಮದುವೆ ದಿನ ಸೀರೆ, ಅದಕ್ಕೊಪ್ಪುವ ಜ್ಯುವೆಲರಿ ಸೆಟ್‌, ಗಂಡನ ಪ್ಯಾಂಟು-ಸೂಟು ಎಲ್ಲವೂ ತಯಾರು. ಆದರೆ, ಮಕ್ಕಳಿಗೆ ಯಾವ ಡ್ರೆಸ್‌ ಹಾಕೋದು? ಎಂಬ ಪ್ರಶ್ನೆ ಕಾಡುತ್ತಿದೆ. ಡ್ರೆಸ್‌, ಮಗುವಿಗೆ ಚಂದ ಕಾಣಿಸಿದರಷ್ಟೇ ಸಾಲದು, ಧರಿಸಲು ಕಂಫ‌ರ್ಟಬಲ್‌ ಕೂಡಾ ಆಗಿರಬೇಕು. ಅಂಥ ಡ್ರೆಸ್‌ಗಳ ಆಯ್ಕೆ ಹಲವು ಅಮ್ಮಂದಿರಿಗೆ ಸವಾಲಿನ ವಿಚಾರ. ಮಕ್ಕಳ ಬಟ್ಟೆ ಖರೀದಿಗೂ ಮುನ್ನ ಗಮನಿಸಬೇಕಾದ ಅಂಶಗಳು ಇಲ್ಲಿವೆ.

Advertisement

-ತೀರಾ ದೊಗಲೆ ಅಥವಾ ತೀರಾ ಬಿಗಿ ಉಡುಪುಗಳು ಬೇಡ. ಮೈ ಅಳತೆಯ ಬಟ್ಟೆಯೇ ಮಕ್ಕಳಿಗೆ ಆರಾಮದಾಯಕ.
-ನಡೆಯುವಾಗ ಕಾಲಿಗೆ ತೊಡರುವಂಥ ಬಟ್ಟೆಗಳು ಬೇಡ. ಉದ್ದ ಲಂಗವೇ ಆದರೂ ನಡೆಯುವಾಗ ಕಾಲಿಗೆ ತಾಗದಷ್ಟು ಉದ್ದವಿದ್ದರೆ ಸಾಕು.
-ಮಗುವಿನ ಮೃದು ಚರ್ಮಕ್ಕೆ ಹಾನಿ ಮಾಡದ ಕಾಟನ್‌, ಸಾಫ್ಟ್ ಸಿಲ್ಕ್ ಬಟ್ಟೆಗಳಿಗೆ ಆದ್ಯತೆ ಕೊಡಿ.
-ಬಟ್ಟೆಯಲ್ಲಿ ಚೂಪಾದ ವಸ್ತುಗಳು, ಕನ್ನಡಿ, ಮಣಿ, ಮುಂತಾದ ಅಪಾಯಕಾರಿ ವಸ್ತುಗಳಿರದಿದ್ದರೆ ಉತ್ತಮ.
– ಪ್ಯಾಂಟ್‌ನ ಎಲಾಸ್ಟಿಕ್‌ ಲೂಸ್‌ ಆಗಿರಲಿ.
– ಫ್ಯಾಷನ್‌ ಆ್ಯಕ್ಸೆಸರೀಸ್‌ (ಹೇರ್‌ಬ್ಯಾಂಡ್‌, ಬಳೆ, ಸರ, ಬ್ರೇಸ್‌ಲೆಟ್‌)ಗಳಲ್ಲಿಯೂ ಚೂಪಾದ ವಸ್ತುಗಳು ಬೇಡ.
– ಟೈಟ್‌ ಅನ್ನಿಸದ, ಆರಾಮದಾಯಕ ಅನಿಸುವಂಥ ಪಾದರಕ್ಷೆಗಳನ್ನು ತೊಡಿಸಿ.

ಗಂಡು ಮಕ್ಕಳಿಗೆ
0-3 ವರ್ಷ- ಕಾಟನ್‌ ಕುರ್ತಾ ಪೈಜಾಮ (ಅಂಬೆಗಾಲಿಡುವಾಗ ಕುರ್ತಾ ಕಾಲಿಗೆ ತೊಡರದಂತೆ ಇರಲಿ), ಅಂಗಿ-ಚಡ್ಡಿ
4-10 ವರ್ಷ-ಜೀನ್ಸ್‌ ಪ್ಯಾಂಟ್‌-ಜ್ಯಾಕೆಟ್‌, ಪ್ರಿಂಟೆಡ್‌ ಬೊಹೊ ಪ್ಯಾಂಟ್‌-ಶಾರ್ಟ್‌ ಕುರ್ತಾ
ಹೆಣ್ಣು ಮಕ್ಕಳಿಗೆ
0-3- ಫ್ರಾಕ್‌, ಲಂಗ-ಬ್ಲೌಸ್‌
4-10- ಉದ್ದ ಲಂಗ, ಗಾಗ್ರ, ಲೆಹೆಂಗಾ, ಚೂಡಿದಾರ್‌

Advertisement

Udayavani is now on Telegram. Click here to join our channel and stay updated with the latest news.

Next