ಮಹಿಳಾ ಅಭ್ಯರ್ಥಿಗಳು ಕಿವಿಯೋಲೆ, ಉಂಗುರ, ನೆಕ್ಲೆಸ್ ಧರಿಸಬಾರದು. ಜತೆಗೆ ಹೈ ಹೀಲ್ಡ್ ಚಪ್ಪಲಿ ಹಾಕಿ ಪರೀಕ್ಷೆ ಬರೆಯಲು ಅವಕಾಶಗಳಿಲ್ಲ.
Advertisement
ಪುರುಷ ಅಭ್ಯರ್ಥಿಗಳು ಕುರ್ತಾ, ಪೈಜಾಮ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಶೂ ಹಾಕುವಂತಿಲ್ಲ. ತೊಡುವ ಬಟ್ಟೆ ಹಗುರ, ಹೆಚ್ಚು ಜಿಪ್ ಪಾಕೆಟ್, ದೊಡ್ಡ ಬಟನ್, ಕಸೂತಿ ಇರಬಾರದು. ಅರ್ಧ ತೋಳಿನ ಶರ್ಟ್ ಧರಿಸಬೇಕು. ಮಾಸ್ಕ್ ಧರಿಸುವಂತಿಲ್ಲ ಎಂದು ಕೆಇಎ ಸೂಚಿಸಿದೆ. ಇದರ ಜತೆಗೆ ಪರೀಕ್ಷಾ ಕೇಂದ್ರದ ಒಳಗೆ ಡಿಜಿಟಲ್ ಉಪಕರಣ ಕೊಂಡೊಯ್ಯಬಾರದು,ಪಾರದರ್ಶಕವಾದ ನೀರಿನ ಬಾಟಲಿ ತೆಗೆದುಕೊಂಡು ಹೋಗಬಹುದು. ಸರಕಾರ ನೀಡಿರುವ ಫೋಟೋ ಇರುವ ಗುರುತಿನ ಚೀಟಿ ಹೊಂದಿರಬೇಕು. ಪ್ರವೇಶ ಪತ್ರ ಇಲ್ಲದ ಯಾವುದೇ ಅಭ್ಯರ್ಥಿಗೂ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶವಿಲ್ಲ ಎಂದು ಕೆಇಎ ತಿಳಿಸಿದೆ.