Advertisement
ಹಾಗಾಗಿ ಇನ್ನು ಮುಂದೆ ಶಿಕ್ಷಕರು ತಮಗೆ ಇಷ್ಟವಾದ ಡ್ರೆಸ್ ಹಾಕಿ ಶಾಲೆಗೆ ಬರುವಂತಿಲ್ಲ ಎಂದು ಶಿಕ್ಷಣ ಸಚಿವರು ಆದೇಶ ಹೊರಡಿಸಿದ್ದಾರೆ.
ಅಂದಹಾಗೆ ನೂತನ ವಸ್ತ್ರ ಸಂಹಿತೆ ಜಾರಿಗೆ ಬಂದಿರುವುದು ಮಹಾರಾಷ್ಟ್ರ ರಾಜ್ಯದಲ್ಲಿ ಇಲ್ಲಿನ ಶಿಕ್ಷಣ ಸಚಿವರು ಈ ಕೂಡಲೇ ಜಾರಿಗೆ ಬರುವಂತೆ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದಾರೆ ಅದರಂತೆ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಶಿಕ್ಷಕ ಶಿಕ್ಷಕಿಯರು ಈ ಆದೇಶವನ್ನು ಪಾಲಿಸಬೇಕಾಗಿದೆ. ಡ್ರೆಸ್ ಕೋಡ್ ನಲ್ಲಿ ಏನಿದೆ:
ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಶಿಕ್ಷಕರಿಗೆ ದೈನಂದಿನ ಡ್ರೆಸ್ ಕೋಡ್‌ಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು ಅದರಂತೆ ಶಿಕ್ಷಕಿಯರು ಸೀರೆ ಅಥವಾ ಸಲ್ವಾರ್/ಚೂಡಿದಾರ್, ಕುರ್ತಾ ಧರಿಸಬಹುದು ಮತ್ತು ಶಿಕ್ಷಕರು ಶರ್ಟ್ ಮತ್ತು ಪ್ಯಾಂಟ್ ಧರಿಸಬೇಕು. ಜೀನ್ಸ್ ಟೀ ಶರ್ಟ್ ಧರಿಸುವಂತಿಲ್ಲ, ಅಲ್ಲದೆ ಗ್ರಾಫಿಕ್ ಡಿಸೈನ್ ಇರುವ ಶರ್ಟ್ ಗಳನ್ನೂ ಧರಿಸಬಾರದು ಎಂದು ಶಾಲಾ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.
Related Articles
Advertisement
ಇದನ್ನೂ ಓದಿ: Daily Horoscope: ಕಾಲೆಳೆಯುವ ಪ್ರಯತ್ನಗಳನ್ನು ಕೊಡವಿ ಮುಂದಡಿಯಿಡುವುದರಿಂದ ವಿಜಯ