Advertisement

ಅಸ್ಸಾಂ ವಿವಿಯಲ್ಲಿ ವಸ್ತ್ರ ಸಂಹಿತೆ

01:34 AM Apr 30, 2019 | Sriram |

ಗುವಾಹಟಿ: ಅಸ್ಸಾಂನ ಗುವಾಹಟಿ ವಿವಿ ವಿದ್ಯಾರ್ಥಿನಿಯರಿಗೆ ವಸ್ತ್ರ ಸಂಹಿತೆಯನ್ನು ವಿಧಿಸಿದ್ದು, 16 ವಿಧದ ಉಡುಪು ಹಾಗೂ ಪಾದರಕ್ಷೆಗಳನ್ನು ಧರಿಸಿ ಕ್ಯಾಂಪಸ್‌ನಲ್ಲಿ ಓಡಾಡದಂತೆ ಸೂಚಿಸಲಾಗಿದೆ.

Advertisement

ಶ್ರೀಮಂತ ಶಂಕರದೇವ ಆರೋಗ್ಯ ವಿಜ್ಞಾನ ವಿವಿ ಉಪಕುಲಪತಿ ದೀಪಿಕಾ ದೇಕಾ ಈ ಸೂಚನೆ ಹೊರಡಿಸಿದ್ದಾರೆ. ಪಾರ್ಟಿ ಉಡುಪು, ಪಿಕ್‌ನಿಕ್‌ ಬಟ್ಟೆಗಳು, ಟಿ ಶರ್ಟ್‌ಗಳು, ಮೈಗೆ ಅಂಟುವ ಬಟ್ಟೆ ಮತ್ತು ಪ್ರಚೋದನಕಾರಿ ಉಡುಪುಗಳನ್ನು ಧರಿಸದಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲ, ವಿಪರೀತ ಆಭರಣಗಳನ್ನು ತೊಡದಂತೆಯೂ ಸೂಚಿಸಲಾಗಿದೆ. ಈ ಆದೇಶ ಉಲ್ಲಂ ಸಿದವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next