Advertisement

ಕಡವು ಸುಗಮ ಸಂಚಾರಕ್ಕೆ ಕಸ್ಬ ಬೆಂಗ್ರೆಯಲ್ಲಿ ʼಡ್ರೆಜ್ಜಿಂಗ್‌ʼ

09:04 AM Nov 29, 2022 | Team Udayavani |

ಬೆಂಗ್ರೆ: ಮೀನುಗಾರಿಕೆ ಬೋಟ್‌ಗಳ ಸುಗಮ ಸಂಚಾರಕ್ಕೆ 1 ಕೋ.ರೂ ವೆಚ್ಚದಲ್ಲಿ ಅಳಿವೆಬಾಗಿಲಿನಲ್ಲಿ ಡ್ರೆಜ್ಜಿಂಗ್‌ ನಡೆಯುತ್ತಿರುವ ಜತೆಗೆ, ಪಕ್ಕದಲ್ಲಿಯೇ ಫೆರ್ರಿ ಸರ್ವಿಸ್‌ ಕಡವು (ಯಂತ್ರಚಾಲಿತ ನಾವೆ) ಸೇವೆಗೆ ತೊಡಕಾಗಿರುವ ಫಲ್ಗುಣಿ ನದಿಯ ಹೂಳೆತ್ತುವ ಕಾಮಗಾರಿಯೂ ಕಸ್ಬ ಬೆಂಗ್ರೆ ಭಾಗದಲ್ಲಿ ಭರದಿಂದ ಸಾಗುತ್ತಿದೆ.

Advertisement

ಫಲ್ಗುಣಿ ನದಿಯಲ್ಲಿ ನೀರು ಹರಿ ಯುವ ವೇಗಕ್ಕೆ ಮರಳು ಬಹುವಾಗಿ ಸಂಗ್ರಹವಾದ ಕಾರಣದಿಂದ ಬೆಂಗ್ರೆಯಲ್ಲಿ ಫೆರ್ರಿ ಸಂಚಾರಕ್ಕೆ ಸಮಸ್ಯೆ ಯಾಗುತ್ತಿದೆ. ಈ ಬಾರಿ ಅಧಿಕ ನೀರು ಬಂದ ಸಂದರ್ಭ ಮರಳು-ಹೂಳು ಕೂಡ ಅಧಿಕವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಆಗ್ರಹದ ಮೇರೆಗೆ ಶಾಸಕ ವೇದ ವ್ಯಾಸ ಕಾಮತ್‌ ಅವರ ಸೂಚನೆಯ ಮೇರೆಗೆ ಹೂಳೆತ್ತುವ ಕಾಮಗಾರಿ ಸದ್ಯ ಕೈಗೆತ್ತಿಕೊಳ್ಳಲಾಗಿದೆ.

ಒಟ್ಟು 95 ಲಕ್ಷ ರೂ. ವೆಚ್ಚದಲ್ಲಿ ಫೆರ್ರಿ ಡ್ರೆಜ್ಜಿಂಗ್‌ ಕಾಮಗಾರಿ 1 ವಾರದಿಂದ ನಡೆಯುತ್ತಿದೆ. 40 ಮೀ. ಅಗಲದಲ್ಲಿ, ಮೈನಸ್‌ 2.30 (-2.30) ಆಳದವರೆಗೆ ಡ್ರೆಜ್ಜಿಂಗ್‌ ನಡೆಸಲಾಗುತ್ತಿದೆ. ಬೆಂಗ್ರೆ ಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣ ವಾಗುವ ನಿರೀಕ್ಷೆಯಿದೆ.

ಶೀಘ್ರ ಪೂರ್ಣ

ಬಿಎಂಡಿ ಫೆರ್ರಿ ಸರ್ವಿಸಸ್‌ನ ಪ್ರಮು ಖರಾದ ಬಿಲಾಲ್‌ ಮೊದಿನ್‌ ಅವರು “ಸುದಿನ’ ಜತೆಗೆ ಮಾತನಾಡಿ, “ಕಸ್ಬ ಬೆಂಗ್ರೆ ಭಾಗದ ಬಹುಕಾಲದ ಕನಸಾಗಿರುವ ಡ್ರೆಜ್ಜಿಂಗ್‌ ಸಮಸ್ಯೆಗೆ ಶಾಸಕ ವೇದವ್ಯಾಸ ಕಾಮತ್‌ ಅವರ ಮೂಲಕ ಪರಿಹಾರ ಸಿಗುತ್ತಿದೆ. ಸದ್ಯ ಇಲ್ಲಿ ಡ್ರೆಜ್ಜಿಂಗ್‌ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಶೀಘ್ರದಲ್ಲಿ ಇದರ ಕಾಮಗಾರಿ ಪೂರ್ಣವಾಗಲಿದೆ. ಈ ಮೂಲಕ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ’ ಎನ್ನುತ್ತಾರೆ.

Advertisement

ಫೆರ್ರಿ ಸರ್ವಿಸ್‌ ಕಡವು ಸೇವೆಗೆ ಕೊಂಚ ತೊಡಕು

“ಫಲ್ಗುಣಿ ನದಿಯಲ್ಲಿ ಸದ್ಯ ಹೂಳು, ಮರಳು ತುಂಬಿಕೊಂಡ ಪರಿಣಾಮ ಉತ್ತರ ದಕ್ಕೆಯಿಂದ ಕಸº ಬೆಂಗ್ರೆಗೆ ಫೆರ್ರಿ ಸರ್ವಿಸ್‌ ಕಡವು ಸೇವೆಗೆ ಕೊಂಚ ತೊಡಕುಂಟಾಗಿದೆ. ನದಿಯಲ್ಲಿ ಉಬ್ಬರ ಇಳಿತವಿರುವ ಸಂದರ್ಭ ಕೆಲವು ಗಂಟೆ ಯವರೆಗೆ ಯಂತ್ರಚಾಲಿತ ಬೋಟ್‌ಗಳ ಸಂಚಾರ ಕಷ್ಟವಾಗುತ್ತಿದೆ. ದೋಣಿಗಳಲ್ಲಿ ತೆರಳಬೇಕಾಗಿದೆ. ಹೀಗಾಗಿ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಿದರೆ ಉತ್ತಮ’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪರ್ಯಾಯ ವ್ಯವಸ್ಥೆ

“ಕಾಮಗಾರಿ ವೇಗದಿಂದ ನಡೆಯು ತ್ತಿದೆ. ಜನರು ಸಮಸ್ಯೆ ಆಗದಂತೆ ನೋಡಿ ಕೊಳ್ಳಲಾಗುತ್ತಿದೆ. ಆದರೆ ಪರ್ಯಾ ಯವಾಗಿ ಮತ್ತೂಂದು ಕಡವು ಸೇವೆಯ ಮೂಲಕ ಜನರು ಅತ್ತಿಂದಿತ್ತ ತೆರಳಲು ಅವಕಾಶವಿದೆ. ಅನಿವಾರ್ಯವಾದರೆ ವಾಹನಗಳ ಮುಖೇನ ತಣ್ಣೀರುಬಾವಿ ರಸ್ತೆಯಿಂದಾಗಿ ತೆರಳಲು ಅವಕಾಶವಿದೆ’ ಎಂದು ಬಂದರು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next