Advertisement
ಕಲ್ಲಾಗರ ವಾರ್ಡ್‌ನಲ್ಲಿ ಸುದಿನ ಸುತ್ತಾಟ ಸಂದರ್ಭ ಅನೇಕ ವಾರ್ಡ್ ಗಳಲ್ಲಿ ಕೇಳಿಬಂದ ಸಮಸ್ಯೆಗಳೇ ಇಲ್ಲೂ ಮಾರ್ದನಿಸಿದವು.
ಬಿ.ಸಿ.ಆರ್. ರಸ್ತೆ ಬಳಿ ಇರುವ ಕೆರೆ, ಅಮೃತೇಶ್ವರಿ ಆಸ್ಪತ್ರೆ ಬಳಿಯ ಕೆರೆಗಳು ಪಾಳುಬಿದ್ದಂತೆ ಇದ್ದು ಹೂಳು ತುಂಬಿದೆ. ಅದನ್ನು ಹೂಳೆತ್ತಿ ಶುಚಿಯಾದ ನೀರು ತುಂಬಿ ಉಳಿಯುವಂತೆ ಮಾಡಿದರೂ ಸಾಕಷ್ಟು ಜನರಿಗೆ ಪ್ರಯೋಜನಕಾರಿಯಾದೀತು. ಚರಂಡಿ ಬೇಕಿದೆ
ಚರಂಡಿ ಇಲ್ಲದ ಕಾರಣ ಕೆಲವೆಡೆ ಮನೆಗಳ ನೀರು ಹೋಗಲೇ ವ್ಯವಸ್ಥೆ ಇಲ್ಲ. ಒಳಚರಂಡಿ ಕಾಮಗಾರಿ ಆಗಿದೆ. ಆದರೆ ಹೊಸದಾಗಿ ನಿರ್ಮಾಣಗೊಂಡ ಇನ್ನೂ ಅನೇಕ ಮನೆಗಳಿಗೆ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಇರುವ ಚರಂಡಿಗೆ ಸ್ಲಾéಬ್ ಅಳವಡಿಸಿದರೆ ರಸ್ತೆಯೂ ಅಗಲವಾಗುತ್ತದೆ. ವಾಹನಗಳ ಓಡಾಟಕ್ಕೆ ಅನುಕೂಲವಾಗುತ್ತದೆ ಎನ್ನುವುದು ಇಲ್ಲಿನ ಜನರ ಅಭಿಮತ. ವರ್ಷದಿಂದ ವರ್ಸಕ್ಕೆ ಚರಂಡಿಯ ಗಾತ್ರವೂ ಕಿರಿದಾಗುತ್ತಿದೆ. ಕೆಲವೆಡೆ ಅಗಲವಾಗಿ, ಕೆಲವೆಡೆ ಕಿರಿದಾಗಿ ಚರಂಡಿ ಇರುವ ಕಾರಣ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲ. ಚರಂಡಿಯಲ್ಲಿ ಕಸ, ಕಡ್ಡಿ, ತ್ಯಾಜ್ಯ, ಹೂಳು ತುಂಬುವ ಕಾರಣ ಮಳೆಗಾಲದ ನೀರೆಲ್ಲ ರಸ್ತೆಯಲ್ಲೇ ತುಂಬಿರುತ್ತದೆ. ಮನೆಗಳ ಅಂಗಳಕ್ಕೂ ಇದೇ ಮಳೆನೀರು ತುಂಬಿದ ಕೆಟ್ಟ ಅನುಭವ. ಚರಂಡಿ ನೀರಿನ
ಕಸಗಳೆಲ್ಲ ಮನೆಗಳ ಮುಂದೆ. ಪ್ರತಿ ಯೊಂದಕ್ಕೂ ಪುರಸಭೆಯನ್ನು ದೂರುವ ಬದಲು ಸಾರ್ವಜನಿಕರು ಕೂಡ ಸ್ವತ್ಛತೆಗೆ ಆದ್ಯತೆ ನೀಡಿದರೆ ಸಮಸ್ಯೆ ಕಡಿಮೆಯಾಗು ತ್ತದೆ ಎನ್ನುತ್ತಾರೆ ಊರಿನ ಜನ.
Related Articles
ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ಆದರೆ ಅದರ ಅಂಚಿಗೆ ಮಣ್ಣು ಹಾಕಿಲ್ಲ. ಇದರಿಂದಾಗಿ ಮಕ್ಕಳು ರಸ್ತೆಯ ಅಂಚು ತಾಗಿ ಗಾಯ ಮಾಡಿಕೊಂಡ ಅನೇಕ ಉದಾಹರಣೆಗಳಿವೆ. ಇದರ ಕುರಿತು ಪುರಸಭೆ ಅಧಿಕಾರಿಗಳು, ಎಂಜಿನಿಯರ್‌ಗೆ ಹೇಳಿದಾಗ ಅವರು ಉಡಾಫೆ ಉತ್ತರ ನೀಡುತ್ತಾರೆ ಎನ್ನುತ್ತಾರೆ ಸ್ಥಳೀಯರು.
Advertisement
ತೋಡಿಗೆ ತಡೆಗೋಡೆಈ ಭಾಗದಲ್ಲಿ ಹರಿಯುವ ಒಂದು ತೋಡಿಗೆ ತಡೆಗೋಡೆ ಕಟ್ಟಬೇಕೆಂಬ ಬೇಡಿಕೆಯಿದೆ. ಇದಕ್ಕೆ ಸ್ಲಾಬ್ ಹಾಕಿದರೆ ತ್ಯಾಜ್ಯ ನೀರು ಹರಿಯುವ ವಾಸನೆ ಬರುವುದಿಲ್ಲ. ಸೊಳ್ಳೆ ಉತ್ಪತ್ತಿಯಾಗುವುದಿಲ್ಲ. ರಸ್ತೆಯೂ ನಿರ್ಮಾಣವಾದಂತಾಗುತ್ತದೆ. ಆದರೆ ಅದಕ್ಕೆ ದೊಡ್ಡಮಟ್ಟದ ಅನುದಾನ ಅಗತ್ಯವಿದೆ. ಈಗಿನ ಸದಸ್ಯರ ಅವಧಿಯಲ್ಲಿ ಅಧಿಕಾರ ಬರದೇ ಇದ್ದರೂ ಎರಡು ಮೂರು ರಸ್ತೆಗಳ ಕಾಮಗಾರಿಯಾಗಿದೆ. ಆಗಬೇಕಾದ್ದೇನು?
ಚರಂಡಿ ನಿರ್ಮಾಣವಾಗಬೇಕು
ಕೆರೆಗಳ ಹೂಳೆತ್ತಬೇಕು
ರಸ್ತೆ ನಿರ್ಮಾಣವಾಗಬೇಕು ಸ್ಪಂದನೆ
ಬಿ.ಎಚ್.ಎಂ. ರಸ್ತೆ, ನಂದಿಬೆಟ್ಟ ಬಳಿ ರಸ್ತೆ, ಕಲ್ಲಾಗರ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಕೆರೆಗಳ ಅಭಿವೃದ್ಧಿ, ತೋಡಿಗೆ ತಡೆಗೋಡೆ ಕಟ್ಟಿ ಸ್ಲಾಬ್ ಅಳವಡಿಕೆಗೆ ಜನರಿಂದ ಬೇಡಿಕೆ ಇದೆ. ಬೀದಿದೀಪ ಸಮಸ್ಯೆ ಸೇರಿದಂತೆ ಜನರಿಂದ ತುರ್ತು ಸ್ಪಂದನೆ ಅಗತ್ಯವಿರುವ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಅಧಿಕಾರ ಇಲ್ಲ ಎಂದು ಸುಮ್ಮನೇ ಕೂರದೇ ಸಾರ್ವಜನಿಕರ ಸಮಸ್ಯೆಗಳನ್ನು ಪುರಸಭೆಯ ಗಮನಕ್ಕೆ ತಂದು ಪರಿಹರಿಸಲಾಗುತ್ತಿದೆ. ವಾರ್ಡ್‌ನಲ್ಲಿ ತಿರುಗಾಟ ಮಾಡುತ್ತಿರುತ್ತೇವೆ.
-ಪ್ರೇಮಲತಾ ರಮೇಶ್ ಪೂಜಾರಿ,
ಸದಸ್ಯರು, ಪುರಸಭೆ ಕೆರೆಗಳ ಹೂಳೆತ್ತಿ
ವಾರ್ಡ್‌ನಲ್ಲಿರುವ ಕೆರೆಗಳ ಕಡೆಗೆ ಗಮನ ಹರಿಸಬೇಕು.ಬಿ.ಸಿ.ಆರ್.ರಸ್ತೆ ಬಳಿ ಇರುವ ಕೆರೆ, ಅಮೃತೇಶ್ವರಿ ಆಸ್ಪತ್ರೆ ಬಳಿಯ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಗೊಳಿಸಬೇಕಿದೆ. ಮಳೆಗಾಲ,ಬೇಸಗೆ ಎನ್ನದೇ ಅವು ಜನರಿಗೆ ಪ್ರಯೋಜನಕ್ಕೆ ದೊರೆಯಲಿದೆ.ನೀರಿಂಗಿಸಲು ಕೂಡಾ ಸಹಕಾರಿಯಾಗಲಿದೆ.
-ಗಣೇಶ್‌ದಾಸ್,ಕಲ್ಲಾಗರ ರಸ್ತೆ ಸ್ಲಾಬ್ ಹಾಕಿ
ರಸ್ತೆ ಬದಿಯ ಚರಂಡಿಗೆ ಸ್ಲಾಬ್ ಅಳವಡಿಸಿ ದರೆ ರಸ್ತೆಯೂ ಅಗಲವಾಗು ತ್ತದೆ. ಮಳೆಗಾಲಕ್ಕೆ ಮೊದಲೇ ಚರಂಡಿಯ ಹೂಳೆತ್ತಬೇಕು.ಇಲ್ಲದಿದ್ದರೆ ರಸ್ತೆಗಳು ಮಳೆನೀರಿನಿಂದ ಆವೃತವಾಗಿರುತ್ತದೆ. ಸಮೀಪದ ಮನೆಗಳಿಗೂ ತೊಂದರೆ ಯಾಗುವುದು ತಪ್ಪುತ್ತದೆ.
-ಸಂತೋಷ್,ಸಿದ್ಧಿವಿನಾಯಕ ಜನರಲ್ ಸ್ಟೋರ್, ಕಲ್ಲಾಗರ ರಸ್ತೆ