Advertisement

ಬೆಂಜ್‌ ಕಾರು ಖರೀದಿಗೆ ಡ್ರೀಮ್‌ಫೆಸ್ಟ್‌

03:45 PM Sep 09, 2021 | Team Udayavani |

ಬೆಂಗಳೂರು: ವಿಶ್ವದ ವಿಲಾಸಿ ಕಾರು ಉತ್ಪಾದಕ ಸಂಸ್ಥೆ ಮರ್ಸಿಡಿಸ್‌ -ಬೆಂಜ್‌ ಇಂಡಿಯಾ ಮತ್ತು ದಕ್ಷಿಣ ಭಾರತದ ಸುಂದರಂ ಮೋಟರ್ಸ್‌ ನಡುವೆ ಸಹಭಾಗಿತ್ವಕ್ಕೆ ಇಪ್ಪತ್ತು ವರ್ಷಗಳು ಪೂರ್ಣಗೊಂಡಿವೆ.

Advertisement

ಆ ಪ್ರಯುಕ್ತ ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿರುವ ಶೋರೂಮ್‌ನಲ್ಲಿ  ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮರ್ಸಿಡಿಸ್‌- ಬೆಂಜ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್‌ ಶ್ವೆಂಕ್‌ ಆರ್ಥಿಕ ಚಟುವಟಿಕೆ ಚೇತರಿಸಿಕೊಳ್ಳುತ್ತಿರುವಂತೆಯೇ ಗ್ರಾಹಕರ ಖರೀದಿ ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇಬರುವಹಬ್ಬಗಳ ಸಾಲುಪ್ರಮುಖ
ಪಾತ್ರ ವಹಿಸಲಿದೆ ಎಂದರು. ಅದಕ್ಕಾಗಿ ಸಂಸ್ಥೆ ವತಿಯಿಂದ “ಡ್ರೀಮ್‌ ಫೆಸ್ಟ್‌’ ಅಭಿಯಾನ ಶುರು ಮಾಡುವುದಾಗಿ ಪ್ರಕಟಿಸಿದ್ದಾರೆ. ಹಬ್ಬಗಳ
ಅವಧಿಯಲ್ಲಿ ಬೆಂಜ್‌ ಕಾರು ಖರೀದಿಸುವವರಿಗೆ ಅತ್ಯಾಕರ್ಷಕ ಆಯ್ಕೆಗಳನ್ನು ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಜನವರಿಯಿಂದ ಆಗಸ್ಟ್‌ ಅವಧಿಯಲ್ಲಿ ಸಂಸ್ಥೆಯ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಂಡಿದೆ. ಜತೆಗೆ ಪ್ರಸಕ್ತ ವರ್ಷ ಬಿಡುಗಡೆಯಾಗಲಿರುವ 11 ಹೊಸ ಮಾದರಿ ಕಾರುಗಳೂ ಗ್ರಾಹಕರಿಗೆ ಹೆಚ್ಚಿನ ರೀತಿಯ ಖರೀದಿಯ ಉತ್ಸಾಹ ಹೆಚ್ಚಿಸಲು ನೆರವಾಗಲಿದೆ ಎಂದು ಶ್ವೆಂಕ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಐಸಿಐಸಿಐ ಹೋಂ ಫೈನಾನ್ಸ್ ನಿಂದ ಐಟಿಆರ್ ಪುರಾವೆ ಇಲ್ಲದೆ ಗೃಹಸಾಲ

ಇದೇ ಸಂದರ್ಭದಲ್ಲಿ ಮಾತನಾಡಿ ಟಿವಿಎಸ್‌ ಸುಂದರಂ ಮೋಟಾರ್ಸ್‌ನ ಕಾರ್ಯಾನಿರ್ವಾಹಕ ನಿರ್ದೇಶಕ ಶರತ್‌ವಿಜಯ ರಾಘವನ್‌ ಮಾತನಾಡಿ  “ಬೆಂಜ್‌ ಜತೆಗೆ ಹೊಂದಿರುವ ಒಡನಾಟ 20 ವರ್ಷ ಪೂರೈಸುತ್ತಿರುವುದು ಸಂತೋಷ ತಂದಿದೆ. ಈ ಎಲ್ಲಾ ವರ್ಷಗಳಲ್ಲಿ ಗ್ರಾಹಕರ ಮೊದಲ ಆದ್ಯತೆಯ ಸಂಸ್ಥೆಯಾಗಿ ಉಳಿದಿದ್ದೇವೆ. ಈ ಸಾಧನೆಯನ್ನು ಹಸಿರಾಗಿ ಇರಿಸಲು ಸುಂದರಂ ಸಿಗ್ನೇಚರ್‌ ಸರ್ವಿಸಸ್‌ ವ್ಯಾಪ್ತಿಯಲ್ಲಿ ಹಲವು ವಿಶೇಷ ಸೇವೆಗಳನ್ನು ನೀಡುವುದಾಗಿ ಪ್ರಕಟಿಸಿದರು.

Advertisement

“ಡ್ರೀಮ್‌ ಫೆಸ್ಟ್‌’ನಲ್ಲಿ ರೇಸಿಂಗ್‌ ದಂತ ಕಥೆ ಲೆವಿಸ್‌ ಹ್ಯಾಮಿಲ್ಟನ್‌ ಅವರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ ಮತ್ತು ಅಬುಧಾಬಿಯ
ಫಾರ್ಮ್ಯುಲಾ 1 ರೇಸ್‌ ಅನ್ನು ವೀಕ್ಷಿಸುವ ಅವಕಾಶ ಲಭ್ಯವಾಗಲಿದೆ.. ಅ.31ರ ‌ವರೆಗೆ ಈ ಸೌಲಭ್ಯ ಜಾರಿಯಲ್ಲಿರಲಿದೆ. ಜತೆಗೆ ಟೆಸ್ಟ್‌ ಡ್ರೈವ್‌
ಗ ‌ಳಿಗಾಗಿ ವಿಶೇಷ ಲಕ್ಕಿ ಡ್ರಾ ಸ್ಪರ್ಧೆ ಆಯೋಜಿಸಲಾಗುತ್ತದೆ. ಇದರ ಜತೆಗೆ ಐಷಾರಾಮಿ ಕಾರುಗಳನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಮರ್ಸಿಡಿಸ್‌ ಬೆಂಜ್‌ ಫೈನಾನ್ಶಿಯಲ್‌ ನಿಂದ ಸರಳ ‌ ರೀತಿಯಲ್ಲಿ ಶೇ.6.99ರ ‌ ಬಡ್ಡಿದರದಲ್ಲಿ ಸಾಲ ನೀಡಲಿದೆ. ಅದರಲ್ಲಿ ಹತ್ತು ವರ್ಷಗಳ ಕಾಲ ವಿಶೇಷ  ರೀತಿಯ ಇಎಂಐಗಳು ಇರಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next