Advertisement
ಟೀಂ ಇಂಡಿಯಾದ ಆಟಕ್ಕೆ ಮಾಜಿ ನಾಯಕ ಸುನೀಲ್ ಗಾವಸ್ಕರ್ ಕಿಡಿಕಾರಿದ್ದಾರೆ. ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾದ ಕೆಲವು ನಡೆಗಳು ತನ್ನನ್ನು ತಬ್ಬಿಬ್ಬುಗೊಳಿಸಿದವು ಎಂದು ಗಾವಸ್ಕರ್ ಹೇಳಿದ್ದಾರೆ.
Related Articles
Advertisement
“ದಕ್ಷಿಣ ಆಫ್ರಿಕಾದ ಗೆಲುವಿನ ಅಂತರವು ಅದ್ಭುತವಾಗಿದೆ. ಆದರೆ ಭಾರತಕ್ಕೆ ಸಂಬಂಧಿಸಿದಂತೆ ಅರ್ಥಮಾಡಿಕೊಳ್ಳುವುದು ಕಷ್ಟ. ಮೊದಲ ಟೆಸ್ಟ್ ನಲ್ಲಿ ಪ್ರಾಬಲ್ಯ ಸಾಧಿಸಿದ ರೀತಿ, ಅವರು ಸರಣಿಯನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದ್ದೆ. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಪ್ರಬಲವಾಗಿರಲಿಲ್ಲ, ಆರ್ನಿಚ್ ನೋರ್ಜೆ ತಂಡದಿಂದ ಹೊರಬಿದ್ದ ಕಾರಣ ಆಫ್ರಿಕನ್ ಬೌಲಿಂಗ್ ನಲ್ಲೂ ಅನುಭವ ಕಡಿಮೆಯಿತ್ತು. ಹೀಗಾಗಿ ಭಾರತವು 3-0 ಅಂತರದಿಂದ ಸರಣಿ ಗೆಲ್ಲುತ್ತದೆ ಎಂದು ಭಾವಿಸಿದ್ದೆ” ಎಂದು ಗಾವಸ್ಕರ್ ಹೇಳಿದ್ದಾರೆ.