ಲಿಂಗಸುಗೂರು: ರಾಮಮಂದಿರ ನಿರ್ಮಾಣವಾಗ ಬೇಕೆಂಬುದು ಶತಮಾನಗಳಿಂದ ಇರುವ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದು ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯ ಹೇಳಿದರು. ಪಟ್ಟಣದ ದೊಡ್ಡ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ರಾಮಮಂದಿರ ನಿರ್ಮಾಣಕ್ಕಾಗಿ
ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಮಪಠಣದಿಂದ 360ಕ್ಕೂ ರೋಗಗಳು ನಿವಾರಣೆಯಾಗುವ ಶಕ್ತಿ ರಾಮಮಂತ್ರಕ್ಕೆ ಇದೆ.
ರಾಮಮಂದಿರ ನಿರ್ಮಾಣ ಶತಮಾನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. 500 ವರ್ಷಗಳ ಸತತ ಪ್ರಯತ್ನ ಹಾಗೂ ನಾಲ್ಕ ಲಕ್ಷಕ್ಕೂ ಅಧಿಕ ಜನರ ಜೀವ ತ್ಯಾಗದ ಫಲವೇ ಇಂದು ರಾಮಮಂದಿರ ನಿರ್ಮಾಣವಾಗುತ್ತಿದೆ. ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರು ದೇಣಿಗೆ ನೀಡುವ ಮೂಲಕ ಅಳಿಲು ಸೇವೆ ಮಾಡಬೇಕು. ನಾಲ್ಕು ಪ್ರಮುಖ ಕಾವ್ಯ ರಾಮಾಯಣವಾಗಿದೆ. ಮಹರ್ಷಿ ವಾಲ್ಮೀಕಿಯವರು ರಾಮ ಹುಟ್ಟುವ ಪೂರ್ವದಲ್ಲಿ ರಾಮಾಯಣ ಬರೆದಿದ್ದಾರೆ ಎಂದರು.
ಮಾತೆ ಮಾಣಿಕೇಶ್ವರಿ ಮಠದ ನಂದಿಕೇಶ್ವರಿ, ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾ ಡಾ.ಪಾಂಡುರಂಗ ಆಪ್ಟೆ, ಮನೋಜ ಭಟ್, ಅನಂತದಾಸ್, ಅಯ್ಯಪ್ಪ ವಕೀಲರು, ಭೀಮಸೇನ್ ಜೋಶಿ, ಚೆನ್ನಬಸವ ಹಿರೇಮಠ ಹಾಗೂ ಇನ್ನಿತರಿದ್ದರು.
ಮಕ್ಕಳು ಕೂಡಿದ್ದ ಹಣ ಶ್ರೀರಾಮ ಮಂದಿರ ಟ್ರಸ್ಟ್‌ಗೆ ದೇಣಿಗ ಮಕ್ಕಳು ಕೂಡಿಟ್ಟ ಹಣವನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಮರ್ಪಿಸಲಾಯಿತು. ಚಾರ್ವಿ, ಸಾಯಿರಾಮನ್ ಪ್ರಜ್ವಲ್ ಮಕ್ಕಳು ತಾವು ಕೂಡಿಟ್ಟ 4,023 ರೂ. ಗಳನ್ನು ಶ್ರೀರಾಮಟ್ರಸ್ಟ್ ನಿಧಿಗೆ ಸಲ್ಲಿಸಿದರು. ಪರಿಷತ್ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಸರ್ವೇಶ್ವರರಾವ್ ಅವರ ಮೊಮಕ್ಕಳು ದೇಣಿಗೆ ಸಲ್ಲಿಸಿದಾಗ ಶ್ರೀರಾಮ ಟ್ರಸ್ಟ್ ಶ್ರದ್ಧಾ ನಿಧಿ ಸಂಗ್ರಹಣೆ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿತು. ತಿಂಡಿ, ತಿನಿಸಿಗೆ ಕೊಟ್ಟ ಹಣವನ್ನೇ ಉಳಿತಾಯ ಪುಟ್ಟ ಕಂದಮ್ಮಗಳು ದೇಣಿಗೆ ನೀಡುತ್ತಿರುವುದರಿಂದ ಭವ್ಯ ಶ್ರೀರಾಮಮಂದಿರ ನಿರ್ಮಾಣದ ಕನಸು ನನಸಾಗುವುದರಲ್ಲಿ ಅನುಮಾನವೇ ಇಲ್ಲವೆಂದು ಸಂಚಾಲಕ ಪ್ರಹ್ಲಾದ್ ಆಚಾರ್ ಕೆಂಗಲ್ ಹೇಳಿದರು.
ವಿಜಯಕುಮಾರ್, ಉಮಾದೇವಿ ಅವರು, ತಮ್ಮ ಮಕ್ಕಳ ಸ್ವಯಂ ಪ್ರೇರಿತ ನಿರ್ಧಾರ ಕೇಳಿ ಸಂತಸ ವ್ಯಕ್ತಪಡಿಸಿದರು. ಮುಖಂಡರಾದ ಶ್ರೀನಿವಾಸರಾವ್, ಸತ್ಯನಾರಾಯಣ, ದೇವಿವರಪ್ರಸಾದ್, ಶೇಷಗಿರಿರಾವ್, ಸಿಂಹಾದ್ರಿ ಶ್ರೀನಿವಾಸರಾವ್,ಸರ್ವೇಶ್ವರರಾವ್, ದೇಣಿಗೆ ಸಂಗ್ರಹ ಅಭಿಯಾನದ ತಾಲೂಕ ಸಂಯೋಜಕ ಹನುಮಂತ ಹಟ್ಟಿ, ಜಿಲ್ಲಾ ಸಹ ಸಂಯೋಜಕ ಪ್ರಾಣೇಶ ವಕೀಲರು, ಬಸವರಾಜ ಬಂಗಾರಶೆಟ್ಟಿ, ರಾಮನಗೌಡ ಹಾರಾಪುರ ವಕೀಲರು, ಪುನೀತ್, ವೀರೇಶ ಇತರರಿದ್ದರು.