Advertisement

DREAM GIRL 2: ಪೂಜಾಳ ಅಂದಕ್ಕೆ ಫಿದಾ ಆದ ಪ್ರೇಕ್ಷಕರು.. ಮೊದಲ ದಿನದ ಗಳಿಕೆ ಎಷ್ಟು?  

12:29 PM Aug 26, 2023 | Team Udayavani |

ಮುಂಬಯಿ: ಬಾಲಿವುಡ್‌ ನಲ್ಲಿ ಈ ವಾರ ತೆರೆಗೆ ಬಂದಿರುವ ʼಡ್ರೀಮ್‌ ಗರ್ಲ್‌-2ʼ ಮೊದಲ ದಿನವೇ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿದೆ.

Advertisement

ಆಯುಷ್ಮಾನ್ ಖುರಾನಾ, ಅನನ್ಯಾ ಪಾಂಡೆ ಅಭಿನಯದ ʼಡ್ರೀಮ್‌ ಗರ್ಲ್-2ʼ ಕಾಮಿಡಿ ಕಥಾಹಂದರವನ್ನು ಒಳಗೊಂಡಿದ್ದು, ಬಿಟೌನ್‌ ಪ್ರೇಕ್ಷಕರ ಮನ ಗೆದ್ದಿದೆ. 2019 ರಲ್ಲಿ ಸಿನಿಮಾದ ಮೊದಲ ಭಾಗ ತೆರೆಕಂಡಿತ್ತು. ಸಿನಿಮಾವಿಡೀ ಆಯುಷ್ಮಾನ್‌ ಅವರ ನಟನೆ ಗಮನ ಸೆಳೆಯುತ್ತದೆ.  ಕರಮ್‌ ನಿಂದ ಪೂಜಾಳಾಗಿ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುವ ಆಯುಷ್ಮಾನ್‌ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ʼಡ್ರೀಮ್‌ ಗರ್ಲ್‌ʼ ಮೊದಲ ಭಾಗದಂತೆಯೇ ಎರಡನೇ ಭಾಗದಲ್ಲೂ ನಿರ್ದೇಶಕ ರಾಜ್ ಶಾಂಡಿಲ್ಯ ಸಿನಿಮಾದಲ್ಲಿ ಕಾಮಿಡಿ ಅಂಶಗಳನ್ನೇ ಹೆಚ್ಚಾಗಿ ಬಳಸಿಕೊಂಡಿದ್ದಾರೆ. ಮೊದಲ ದಿನವೇ ಇಂಡಿಯನ್ ಬಾಕ್ಸ್ ಆಫೀಸ್‌ ನಲ್ಲಿ 10.69 ಕೋಟಿ ರೂಪಾಯಿ ಗಳಿಕೆಯನ್ನು ಮಾಡಿದೆ.

ಪಿವಿಆರ್, ಸಿನೆಪೊಲಿಸ್ ಮತ್ತು ಇನಾಕ್ಸ್‌ ನಿಂದ ಸುಮಾರು 5.35 ಕೋಟಿ  ರೂ.ವನ್ನು ಗಳಿಸಿದೆ. ಆ ಮೂಲಕ ಸಿನಿಮಾದ ಶೇಕಡಾ 60 ರಷ್ಟು ಕಮಾಯಿ ಇದರಲ್ಲಿ ಬಂದಿದೆ.

‘ಡ್ರೀಮ್ ಗರ್ಲ್ 2’ ಮಥುರಾದಲ್ಲಿ ಜೀವನ ನಡೆಸುತ್ತಿರುವ ಸಣ್ಣ-ಪಟ್ಟಣದ ಹುಡುಗ ಕರಮ್ ಎಂಬ ಹುಡುಗನ ಕಥೆಯಾಗಿದೆ. ಕರಮ್‌ ಪರಿ ಎನ್ನುವ ಯುವತಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಪೂಜಾಳಾಗಿ ಹೆಣ್ಣಿನ ವೇಷ ತೊಟ್ಟು ಜೀವನ ಸಾಗಿಸುವ ತಿರುವೊಂದು ಸಿನಿಮಾದಲ್ಲಿ ಬರುತ್ತದೆ.  ಇದೇ ಅಂಶಗಳು ಸಿನಿಮಾದಲ್ಲಿ ಹಾಸ್ಯವನ್ನಾಗಿ ಹೇಳಲಾಗಿದೆ.

Advertisement

ಚಿತ್ರವನ್ನು ಬಾಲಾಜಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಏಕ್ತಾ ಆರ್ ಕಪೂರ್ ಮತ್ತು ಶೋಭಾ ಕಪೂರ್ ನಿರ್ಮಿಸಿದ್ದಾರೆ. ಆಯುಷ್ಮಾನ್ ಜೊತೆಗೆ, ಚಿತ್ರದಲ್ಲಿ ಅನನ್ಯ ಪಾಂಡೆ, ಪರೇಶ್ ರಾವಲ್, ರಾಜ್‌ಪಾಲ್ ಯಾದವ್, ಅಸ್ರಾಣಿ, ವಿಜಯ್ ರಾಜ್, ಅನ್ನು ಕಪೂರ್, ಸೀಮಾ ಪಹ್ವಾ, ಮನೋಜ್ ಜೋಶಿ, ಅಭಿಷೇಕ್ ಬ್ಯಾನರ್ಜಿ ಮತ್ತು ಮಂಜೋತ್ ಸಿಂಗ್ ಸಹ ನಟಿಸಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next