Advertisement

ಕ್ಷಿಪ್ರ ದಾಳಿ ಕ್ಷಿಪಣಿ ಪರೀಕ್ಷೆ ಯಶಸ್ವಿ

05:26 PM Aug 05, 2019 | Hari Prasad |

ಬಾಲಾಸೋರ್ (ಒಡಿಶಾ): ಸಂಭವನೀಯ ವಾಯು ದಾಳಿಗಳನ್ನು ಮಟ್ಟ ಹಾಕುವ ಸಾಮರ್ಥ್ಯವನ್ನು ಹೊಂದಿರುವ ವಿಶೇಷ ಕ್ಷಿಪಣಿ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್‌.ಡಿ.ಒ.) ಇಂದು ಯಶಸ್ವಿಯಾಗಿ ನಡೆಸಿದೆ. ಯಾವುದೇ ರೀತಿಯ ಹವಾಮಾನ ಮತ್ತು ಗುಡ್ಡಗಾಡು ಪ್ರದೇಶಗಳಲ್ಲೂ ಕ್ಷಿಪ್ರವಾಗಿ ದಾಳಿ ನಡೆಸಬಲ್ಲ ಕ್ಷಿಪಣಿ ಇದಾಗಿದ್ದು, ನೆಲದಿಂದ ನೆಗೆದು ಆಗಸದ ದಾಳಿಗಳನ್ನು ಛೇದಿಸಬಲ್ಲದು.

Advertisement

ಕ್ಯೂ.ಆರ್‌.ಎಸ್‌.ಎ.ಎಮ್. ಎಂದು ಇದಕ್ಕೆ ಹೆಸರಿಡಲಾಗಿದ್ದು, ರವಿವಾರ ಬೆಳಗ್ಗೆ 11.05ರ ಕಾಲಮಾನದಲ್ಲಿ ಮೊಬೈಲ್ ಲಾಂಚರ್ ಮೂಲಕ ಇಲ್ಲಿನ ಚಾಂಡೀಪುರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಕ್ಷಿಪಣಿ 25-30 ಕಿ.ಮೀ. ದೂರದ ಗುರಿಗಳನ್ನು ಛೇದಿಸುವ ಸಾಮರ್ಥ್ಯ ಹೊಂದಿದೆ. ಎರಡು ಕ್ಷಿಪಣಿಗಳನ್ನು ಪ್ರತ್ಯೇಕ ಸಂದರ್ಭಗಳಲ್ಲಿ ಪರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next