Advertisement

ಈ ಇಲಿಗಳೇ ಹೊಸ ‘ಗುಪ್ತಚರರು’! ಬೇಹುಗಾರರಂತೆ ಕೆಲಸ ಮಾಡುವ “ಇಲಿ ಸೈಬೋರ್ಗ್ಸ್’

12:47 AM Jan 07, 2023 | Team Udayavani |

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ವಿಜ್ಞಾನಿಗಳು ತಮ್ಮ ಪ್ರಯೋಗಾಲಯದಲ್ಲಿ “ಇಲಿ ಸೈಬೋರ್ಗ್ಸ್’ ಗಳ ಮೊದಲ ತಂಡವನ್ನು ಅಣಿ ಮಾಡಿದ್ದಾರೆ. 26/11ರ ಮುಂಬೈ ದಾಳಿ ರೀತಿಯ ಸನ್ನಿವೇಶದಲ್ಲಿ ಇವುಗಳು ಕಟ್ಟಡದ ಒಳಗಿನಿಂದ ಲೈವ್‌ ವಿಡಿಯೋ ಮಾಹಿತಿಯನ್ನು ಭದ್ರತಾ ಪಡೆಗಳಿಗೆ ರವಾನಿಸಲಿವೆ.

Advertisement

ಶತ್ರುಗಳು ಕಟ್ಟಡವನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಭದ್ರತಾ ಪಡೆಗಳಿಗೆ ಒಳಗಿನ ಸನ್ನಿವೇಶ ಯಾವ ರೀತಿ ಇದೆ ಎಂಬುದರ ಅರಿವು ಇರುವುದಿಲ್ಲ. ಈ ಸಂದರ್ಭದಲ್ಲಿ ಉಗ್ರರ ಚಲನವಲನಗಳು ಹಾಗೂ ಇತರೆ ಮಾಹಿತಿಯನ್ನು ಒದಗಿಸುವ ಕೆಲಸವನ್ನು ಈ ಇಲಿಗಳು ಮಾಡುತ್ತವೆ.

“ಹೈದರಾಬಾದ್‌ನ ಪ್ರಯೋಗಾಲಯದಲ್ಲಿ ಡಿಆರ್‌ಡಿಒ ಯುವ ವಿಜ್ಞಾನಿಗಳು “ಇಲಿ ಸೈಬೋರ್ಗ್ಸ್’ ಗಳಿಗೆ ತರಬೇತಿ ನೀಡಿದ್ದಾರೆ. ಇವುಗಳು ಬೇರೇನೂ ಅಲ್ಲ, ಪ್ರಯೋಗಾಲಯದ ಇಲಿಗಳು. ಇವುಗಳ ಮೆದುಳಿನಲ್ಲಿ ಹೊರಗಿನಿಂದ ಸಿಗ್ನಲ್‌ಗ‌ಳನ್ನು ಸ್ವೀಕರಿಸುವ ವಿದ್ಯುದ್ವಾರವನ್ನು ಅಳವಡಿಸಲಾಗಿರುತ್ತದೆ. ಲೈವ್‌ ಚಿತ್ರಗಳನ್ನು ಸೆರೆಹಿಡಿಯಲು ಅದರ ಹಿಂಭಾಗದಲ್ಲಿ ಚಿಕ್ಕ ಕ್ಯಾಮೆರಾ ಅಳವಡಿಸಿರಲಾಗಿರುತ್ತದೆ,’ ಎಂದು ಡಿಆರ್‌ಡಿಒ ವಿಜ್ಞಾನಿಗಳು ತಿಳಿಸಿದ್ದಾರೆ.

“ಇವು ಗುಪ್ತಚರ ಮಾಹಿತಿಯನ್ನು ಒದಗಿಸುವ ಕೆಲಸ ಮಾಡುತ್ತವೆ. ಪ್ರಾಕೃತಿಕವಾಗಿ ತಮಗಿರುವ ಸಾಮರ್ಥಯದಿಂದ ಇವುಗಳು ಯಾವುದೇ ಕಟ್ಟಡ, ಪೈಪ್‌, ಕಿರಿದಾದ ಸ್ಥಳಗಳಿಗೆ ನುಗ್ಗಿ ಅಲ್ಲಿನ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಶತ್ರುಗಳಿಂದ ತಪ್ಪಿಸಿಕೊಂಡು ಅಡುಗುತ್ತವೆ. ಬಾಹ್ಯ ಸಿಗ್ನಲ್‌ಗ‌ಳನ್ನು ಬಳಸಿಕೊಂಡು ಇವುಗಳು ಕುಶಲತೆಯಿಂದ ನಿರ್ವಹಿಸುವ ವಿಧಾನವನ್ನು ಪರಿಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ,’ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next