Advertisement
ವಿಶ್ವ ಕ್ರಿಕೆಟಿನ ಗೋಡೆ ಎಂದೇ ಖ್ಯಾತಿ ಗಳಿಸಿದ್ದ ದ್ರಾವಿಡ್, ಭಾರತದ ಭವಿಷ್ಯದ ಕ್ರಿಕೆಟ್ ಪೀಳಿಗೆಯನ್ನು ರೂಪಿಸುವ, ಅವರಿಗೆ ಅಗತ್ಯ ನೆರವು ನೀಡುವ ಹೊಣೆಗಾರಿಕೆ ವಹಿಸಲಿದ್ದಾರೆ. ಹೀಗಾಗಿ ಅವರ ಮೇಲಿದ್ದ ಭಾರತ ಎ ಹಾಗೂ ಅಂಡರ್-19 ತಂಡಗಳ ಕೋಚಿಂಗ್ ಜವಾಬ್ದಾರಿ ಇನ್ನು ಇರುವುದಿಲ್ಲ. ಆದರೆ ಈ ಎರಡೂ ತಂಡಗಳ ಮೇಲೆ ನಿಗಾ ಇಡಬೇಕಿದೆ. ಈ ತಂಡಗಳ ತರಬೇತುದಾರರು ನೇರವಾಗಿ ದ್ರಾವಿಡ್‌ಗೆ ವರದಿ ಮಾಡಿಕೊಳ್ಳಬೇಕು. ದ್ರಾವಿಡ್ ಮಾರ್ಗದರ್ಶನದಲ್ಲೇ ಎಲ್ಲ ಕಾರ್ಯತಂತ್ರಗಳನ್ನು ರೂಪಿ ಸಬೇಕು.
ದ್ರಾವಿಡ್ ಹೊಸ ಜವಾಬ್ದಾರಿ ಹೊತ್ತುಕೊಂಡಿರುವುದರಿಂದ, ಭಾ ರತ ‘ಎ’ ತಂಡಕ್ಕೆ ಅಭಯ್ ಶರ್ಮ, ಅಂಡರ್-19 ತಂಡಕ್ಕೆ ಪರಸ್ ಮ್ಹಾಂಬ್ರೆ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.