Advertisement

ಬದುಕು-ವ್ಯಕ್ತಿತ್ವದ ಶಿಕ್ಷಣ ನೀಡಲು ಡಾ|ಅಂದಾನಿ ಕರ

11:06 AM Dec 01, 2017 | Team Udayavani |

ಕಲಬುರಗಿ: ವಿದ್ಯಾರ್ಥಿಗಳ ಬದುಕು ಹಾಗೂ ವ್ಯಕ್ತಿತ್ವ ಒಳಗೊಂಡ ಶಿಕ್ಷಣ ಕಟ್ಟಿಕೊಡಬೇಕೆಂದು ಕಲಾವಿದ ಡಾ| ವಿ.ಜಿ. ಅಂದಾನಿ ಶಿಕ್ಷಕರಿಗೆ ಕರೆ ನೀಡಿದರು. ತಾಲೂಕಿನ ಕಮಲಾಪುರದಲ್ಲಿರುವ ಸಿಡಾರ್‌ ತರಬೇತಿ ಕೇಂದ್ರದಲ್ಲಿ ಇಂಡಿಯಾ ಫೌಂಡೇಶನ್‌ ಫಾರ್‌ ಆರ್ಟ್ಸ್ ಮತ್ತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಶಾಲೆಗಳ ಸಬಲೀಕರಣದ ಒಂದು ಮಹತ್ವದ ಹೆಜ್ಜೆ ಕಲಿ ಕಲಿಸು ಮುಖ್ಯೋಪಾಧ್ಯಾಯರ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರಾಷ್ಟ್ರೀಯ ಸಂಪತ್ತು ಶಿಕ್ಷಕರು. ಅವರು ತಮ್ಮ ವೃತ್ತಿಯನ್ನು ಗೌರವಿಸಬೇಕು. ಶಿಕ್ಷಕರು ಮಕ್ಕಳ ಮನಶಾಸ್ತ್ರವನ್ನು ಅರಿತು ಬೋಧನೆಯಲ್ಲಿ ಮಕ್ಕಳಿಗೆ ಆಸಕ್ತಿಯಿರುವ ವಿಷಯವನ್ನು ಪ್ರೋತ್ಸಾಹಿಸಿ ಅವರಲ್ಲಿನ ಪ್ರತಿಭೆಯನ್ನು ಸಮಾಜ ಗುರುತಿಸುವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು. 

ಪ್ರಾಚೀನ, ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡುವುದು ಶಿಕ್ಷಕರ ಜವಾಬ್ದಾರಿ. ಬುದ್ಧಿಗೆ ನೀಡುತ್ತಿರುವ ಒತ್ತನ್ನು ಹೃದಯಕ್ಕೂ ನೀಡಬೇಕು. ಇದು ಶಿಕ್ಷಣದ ಮೂಲ ಉದ್ದೇಶವಾಗಬೇಕು. ಬದುಕು ಮತ್ತು
ವ್ಯಕ್ತಿತ್ವವನ್ನು ಶಿಕ್ಷಣ ಕಟ್ಟಿಕೊಡಬೇಕು. ಕಣ್ಣು ನೋಡುವುದನ್ನು ಕಲಿತರೆ ಅನುಭವದ ವ್ಯಾಪ್ತಿ ಅಪಾರ. ಸ್ಥಳೀಯ ಸಂಪನ್ಮೂಲ ಹುಡುಕಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಶಶಿಕಾಂತ ವರ್ತುಳ ಮಾತನಾಡಿ, ಶಾಲೆಯ
ಬೆಳವಣಿಗೆಯಲ್ಲಿ ಮುಖ್ಯ ಶಿಕ್ಷಕರ ಜವಾಬ್ದಾರಿ ಹೆಚ್ಚಿನದು. ಅವರು ಎಲ್ಲರಿಗೂ ಮಾದರಿಯಾಗಿ ನಿಲ್ಲಬೇಕು. ಕಲಿ ಕಲಿಸು
ನಿಜಕ್ಕೂ ಅರ್ಥಪೂರ್ಣ ಪ್ರಯತ್ನ. ವೃತ್ತಿ ಮತ್ತು ವೈಯಕ್ತಿಕ ಜೀವನಕ್ಕೆ ಇದು ಮುಖ್ಯ ತರಬೇತಿ ಆಗಿದೆ. ಕಲೆಗಳ ಮೂಲಕ ಕಲಿಕೆ ಶಾಶ್ವತ ಎಂದರು.

ಚಂದ್ರಶೇಖರ ವಂದಿಸಿದರು. ಇದೇ ಸಂದರ್ಭದಲ್ಲಿ ಅಂದಾನಿ ಅವರ 70ನೇ ಜನ್ಮದಿನದ ನಿಮಿತ್ತ ಅವರ ಶಿಷ್ಯ ಹಳ್ಳಿಖೇಡ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next